ಮುಂಬೈ ಎದುರಿನ ಹೈವೋಲ್ಟೇಜ್ ಪಂದ್ಯಕ್ಕೂ ಮೊದಲು ಕೊನೆಯ ಕ್ಷಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಬಿಗ್ ಶಾಕ್..! ಈ ಕ್ರಿಕೆಟಿಗ ಆಡೋದೇ ಡೌಟ್

Published : Apr 23, 2026, 03:24 PM IST

ಮುಂಬೈ: 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿಂದು ತಲಾ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಇಲ್ಲಿನ ವಾಂಖೆಡೆ ಮೈದಾನದಲ್ಲಿ ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಮ್ಯಾಚ್‌ಗೂ ಮುನ್ನ ಸಿಎಸ್‌ಕೆಗೆ ಬಿಗ್ ಶಾಕ್ ಎದುರಾಗಿದೆ. ಏನದು ನೋಡೋಣ ಬನ್ನಿ 

PREV
16
ವಾಂಖೆಡೆಯಲ್ಲಿಂದು ಮುಂಬೈ-ಚೆನ್ನೈ ಫೈಟ್

ಐಪಿಎಲ್‌ನ 'ಎಲ್ ಕ್ಲಾಸಿಕೋ' ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಫ್ಯಾನ್ಸ್‌ಗೆ ಒಂದು ಬೇಸರದ ಸುದ್ದಿ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ರಾತ್ರಿ 7:30ಕ್ಕೆ ಶುರುವಾಗಲಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಮಾಜಿ ಕ್ಯಾಪ್ಟನ್ ಎಂ.ಎಸ್. ಧೋನಿ ಆಡುವ ಸಾಧ್ಯತೆ ಕಡಿಮೆ ಇದೆ ಅಂತ ಹೊಸ ವರದಿಗಳು ಹೇಳುತ್ತಿವೆ.

26
ಧೋನಿ ಅಭಿಮಾನಿಗಳಿಗೆ ನಿರಾಸೆ

ಸೀಸನ್ ಶುರುವಾಗೋಕೂ ಮುನ್ನ ಆದ ಗಾಯದಿಂದ ಕ್ಯಾಪ್ಟನ್‌ ಕೂಲ್ ಖ್ಯಾತಿಯ ಎಂ ಎಸ್ ಧೋನಿ ಇನ್ನೂ ಪೂರ್ತಿಯಾಗಿ ಚೇತರಿಸಿಕೊಂಡಿಲ್ಲ ಎಂದು ಚೆನ್ನೈ ಸೂಪರ್ ಕಿಂಗ್ಸ್ ಮೂಲಗಳನ್ನು ಉಲ್ಲೇಖಿಸಿ RevSportz ವರದಿ ಮಾಡಿದೆ. ಇದು ಧೋನಿ ಆಟವನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಬಿಗ್ ಶಾಕ್ ನೀಡಿದೆ.

36
ಈ ಸೀಸನ್‌ನಲ್ಲಿ ಒಂದೂ ಐಪಿಎಲ್ ಆಡದ ಧೋನಿ

ಹೌದು, ಈ ಸೀಸನ್‌ನಲ್ಲಿ ಧೋನಿ ಚೆನ್ನೈ ಪರ ಒಂದೇ ಒಂದು ಮ್ಯಾಚ್ ಕೂಡ ಆಡಿಲ್ಲ. ಅವರು ಪ್ರಾಕ್ಟೀಸ್‌ನಲ್ಲಿ ಆಕ್ಟಿವ್ ಆಗಿದ್ದರೂ, ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅವರಿಗೆ ಪೂರ್ತಿ ತೃಪ್ತಿ ಇಲ್ಲ ಅನ್ನೋ ಮಾಹಿತಿ ಇದೆ.

46
ಧೋನಿ ಕಮ್‌ಬ್ಯಾಕ್ ನಿರ್ಧಾರ ಅವರಿಗೆ ಬಿಟ್ಟಿದ್ದು

ಸದ್ಯದ ಮಾಹಿತಿ ಪ್ರಕಾರ, ಮೇ 21 ರಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದ ಮೂಲಕ ಧೋನಿ ಕಮ್‌ಬ್ಯಾಕ್ ಮಾಡಬಹುದು. ಆದರೆ, ತಮ್ಮ ವಾಪಸಾತಿ ಬಗ್ಗೆ ಧೋನಿ ಅವರೇ ಕೊನೆಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಿನ್ನೆ ನೆಟ್ಸ್‌ನಲ್ಲಿ ಅವರು ಬಹಳ ಹೊತ್ತು ಪ್ರಾಕ್ಟೀಸ್ ಮಾಡಿದ್ರು, ಆದ್ರೆ ಕೆಲವು ಬಾಲ್‌ಗಳನ್ನು ಎದುರಿಸಲು ಕಷ್ಟಪಡುತ್ತಿದ್ದರು.

56
ರೋಹಿತ್ ಆಡೋದು ಸಸ್ಪೆನ್ಸ್

ಮುಂಬೈ ಇಂಡಿಯನ್ಸ್ ಕ್ಯಾಂಪ್‌ನಲ್ಲೂ ಗಾಯದ ಸಮಸ್ಯೆ ಇದೆ. ಹ್ಯಾಮ್‌ಸ್ಟ್ರಿಂಗ್ ಗಾಯದಿಂದಾಗಿ ಕಳೆದ 10 ದಿನಗಳಿಂದ ರೆಸ್ಟ್‌ನಲ್ಲಿದ್ದ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮಾ, ನಿನ್ನೆ ಪ್ರಾಕ್ಟೀಸ್‌ಗೆ ಬಂದಿದ್ದರು. ರೋಹಿತ್‌ಗೆ ಸದ್ಯಕ್ಕೆ ದೊಡ್ಡ ಮಟ್ಟದ ಗಾಯದ ಸಮಸ್ಯೆ ಏನೂ ಇಲ್ಲ. ಆದರೂ, ಚೆನ್ನೈ ವಿರುದ್ಧ ಅವರು ಆಡುತ್ತಾರಾ ಇಲ್ವಾ ಅನ್ನೋದನ್ನು ಟಾಸ್ ಹೊತ್ತಲ್ಲೇ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಲಿದೆ ಅಂತ ವರದಿಯಾಗಿದೆ.

66
ಎರಡು ಬಲಿಷ್ಠ ತಂಡಗಳಿಗೂ ಮಹತ್ವದ ಮ್ಯಾಚ್

ತಲಾ ಐದು ಬಾರಿಯ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ತಲಾ 6 ಪಂದ್ಯಗಳನ್ನಾಡಿ ಎರಡು ಗೆಲುವು ಹಾಗೂ 4 ಸೋಲು ಸಹಿತ 4 ಅಂಕ ಹೊಂದಿವೆ. ಆದರೆ ನೆಟ್‌ ರನ್‌ರೇಟ್‌ ಆಧಾರದಲ್ಲಿ ಮುಂಬೈ ಇಂಡಿಯನ್ಸ್ ಏಳನೇ ಸ್ಥಾನದಲ್ಲಿದ್ದರೇ, ಚೆನ್ನೈ ಸೂಪರ್ ಕಿಂಗ್ಸ್ ಎಂಟನೇ ಸ್ಥಾನದಲ್ಲಿದೆ. ಪ್ಲೇ ಆಫ್ ಆಸೆ ಜೀವಂತವಾಗಿಟ್ಟುಕೊಳ್ಳಲು ಇಂದಿನ ಪಂದ್ಯದಲ್ಲಿ ಗೆಲುವು ಉಭಯ ತಂಡಗಳಿಗೂ ಅನಿವಾರ್ಯ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories