ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಭರದ ಸಿದ್ದತೆಗಳು ನಡೆಯುತ್ತಿವೆ. ಆಟಗಾರರ ರೀಟೈನ್‌ಗೆ ಬಿಸಿಸಿಐ ಡೆಡ್‌ಲೈನ್ ಕೂಡಾ ನಿಗದಿಪಡಿಸಿದೆ. ಹೀಗಿರುವಾಗಲೇ ಆರ್‌ಸಿಬಿ ಯಾರನ್ನೆಲ್ಲಾ ರಿಲೀಸ್ ಮಾಡಲಿದೆ, ಯಾರನ್ನು ಉಳಿಸಿಕೊಳ್ಳಲಿದೆ ಎನ್ನುವ ಚರ್ಚೆ ಜೋರಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅತ್ಯದ್ಭುತ ಪ್ರದರ್ಶನ ತೋರಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಬಾರಿಯ ಐಪಿಎಲ್ ಟ್ರೋಫಿ ಜಯಿಸುವಲ್ಲಿ ಯಶಸ್ವಿಯಾಗಿದೆ.
28
ಆರ್‌ಸಿಬಿ ಕಳೆದ ಸೀಸನ್ ಅದ್ಭುತ ಆಟ
ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ತಂಡವು ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಪ್ರಶಸ್ತಿ ಬರ ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
38
ಆಟಗಾರರ ರೀಟೈನ್‌ಗೆ ನವೆಂಬರ್ 15 ಡೆಡ್‌ಲೈನ್
ಇದೀಗ ಮುಂಬರುವ 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಮಿನಿ ಹರಾಜು ನಡೆಯಲಿದೆ. ಈ ಹರಾಜಿಗೂ ಮೊದಲು ಆಟಗಾರರ ರೀಟೈನ್ ಮಾಡಿಕೊಳ್ಳಲು ನವೆಂಬರ್ 15ರವರೆಗೆ ಡೆಡ್‌ಲೈನ್ ನೀಡಲಾಗಿದೆ.
ಹೀಗಾಗಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ. ಯಾವೆಲ್ಲಾ ಆಟಗಾರರನ್ನು ತಂಡದಿಂದ ರಿಲೀಸ್ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಜೋರಾಗಿದೆ.
58
ಕ್ಯಾಮರೋನ್ ಗ್ರೀನ್ ಮೇಲೆ ಕಣ್ಣಿಟ್ಟ ಆರ್‌ಸಿಬಿ
ಕೆಲ ಮಾಧ್ಯಮಗಳ ವರದಿಯ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆಸೀಸ್ ಮೂಲದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಖರೀದಿಸಲು ಒಲವು ತೋರಿದೆ ಎಂದು ವರದಿಯಾಗಿದೆ.
68
ಕಳೆದ ಐಪಿಎಲ್‌ಗೆ ಅಲಭ್ಯರಾಗಿದ್ದ ಗ್ರೀನ್
ಈ ಮೊದಲು ಕ್ಯಾಮರೋನ್ ಗ್ರೀನ್ ಅವರನ್ನು ಆರ್‌ಸಿಬಿ ಫ್ರಾಂಚೈಸಿಯು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯಿಂದ ದಾಖಲೆ ಮೊತ್ತಕ್ಕೆ ಟ್ರೇಡಿಂಗ್ ಮಾಡಿಕೊಂಡಿತ್ತು. ಒಂದು ಸೀಸನ್ ಆರ್‌ಸಿಬಿ ಪರ ಕಣಕ್ಕಿಳಿದಿದ್ದ ಗ್ರೀನ್, ಕಳೆದ ಆವೃತ್ತಿಯ ಐಪಿಎಲ್‌ಗೆ ಅಲಭ್ಯರಾಗಿದ್ದರು.
78
ಲಿವಿಂಗ್‌ಸ್ಟೋನ್‌ಗೆ ಗೇಟ್‌ಪಾಸ್?
ಈ ಕಾರಣಕ್ಕಾಗಿ ಲಿಯಾಮ್ ಲಿವಿಂಗ್‌ಸ್ಟೋನ್(8.75 ಕೋಟಿ), ನುವಾನ್ ತುಷಾರ(1.6), ಅಭಿನಂದನ್ ಸಿಂಗ್(30 ಲಕ್ಷ), ಮನೋಜ್ ಭಾಂಡಗೆ(30 ಲಕ್ಷ) ಹಾಗೂ ಸ್ವಪ್ನಿಲ್ ಸಿಂಗ್(30 ಲಕ್ಷ ರುಪಾಯಿ)ಗೆ ಗೇಟ್‌ಪಾಸ್ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
88
RCB ಮಿನಿ ಹರಾಜಿನಲ್ಲಿ ಯಾವ ಆಟಗಾರನನ್ನು ಖರೀದಿಸಬೇಕು?
ಮುಂಬರುವ ಐಪಿಎಲ್ ಮಿನಿ ಹರಾಜು ಡಿಸೆಂಬರ್ ಎರಡನೇ ಇಲ್ಲವೇ ಮೂರನೇ ವಾರ ನಡೆಯಲಿದ್ದು, ಯಾವ ಆಟಗಾರರನ್ನು ಆರ್‌ಸಿಬಿ ಖರೀದಿಸಬಹುದು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.