ಬೆಂಗಳೂರು: 19ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಈಗಿನಿಂದಲೇ ಸಿದ್ದತೆಗಳು ಶುರುವಾಗಿವೆ. ಇದೀಗ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್, ಮಿನಿ ಹರಾಜಿಗೂ ಮುನ್ನ ಈ ನಾಲ್ಕು ಆಟಗಾರರನ್ನು ತಂಡದಿಂದ ಕೈಬಿಡಲು ತೀರ್ಮಾನಿಸಿದೆ. ಯಾರವರು?
2026ರ ಐಪಿಎಲ್ ಮಿನಿ ಹರಾಜಿಗೂ ಮುನ್ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು, ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ತೋರಿದ ಹಾಗೂ ಬೆಂಚ್ ಕಾಯಿಸಿದ್ದ ಕೆಲ ಆಟಗಾರರಿಗೆ ಗೇಟ್‌ಪಾಸ್ ನೀಡಲು ತೀರ್ಮಾನಿಸಿದೆ.
27
ಆಟಗಾರರ ರೀಟೈನ್‌ಗೆ ಡೆಡ್‌ಲೈನ್
ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡು, ಬೇಡವಾದ ಆಟಗಾರರನ್ನು ರಿಲೀಸ್ ಮಾಡಲು ಮುಂಬರುವ ನವೆಂಬರ್ 15ರವರೆಗೂ ಬಿಸಿಸಿಐ ಕಾಲಾವಕಾಶ ನೀಡಿದೆ.
37
ಈ ನಾಲ್ವರಿಗೆ ಗೇಟ್‌ಪಾಸ್
ಇನ್ನು ಐಪಿಎಲ್ ಮಿನಿ ಹರಾಜು ಮುಂಬರುವ ಡಿಸೆಂಬರ್ ಮಧ್ಯದಲ್ಲಿ ನಡೆಯುವ ಸಾಧ್ಯತೆಯಿದೆ. ಮುಂಬೈ ಇಂಡಿಯನ್ಸ್ ರಿಲೀಸ್ ಮಾಡಲಿರುವ ನಾಲ್ಕು ಪ್ರಮುಖ ಆಟಗಾರರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.
ದಕ್ಷಿಣ ಆಫ್ರಿಕಾ ಮೂಲದ ವೇಗದ ಬೌಲರ್ ಲಿಜ್ಜಾರ್ಡ್ ವಿಲಿಯಮ್ಸ್ ಅವರನ್ನು ಬ್ಯಾಕ್‌ಅಪ್ ಬೌಲರ್ ಆಗಿ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ವಿಲಿಯಮ್ಸ್‌ಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಲಿಜ್ಜಾರ್ಡ್ ವಿಲಿಯಮ್ಸ್ ಅವರನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆಯಿದೆ.
57
2. ರೀಸ್ ಟಾಪ್ಲೆ:
ಇಂಗ್ಲೆಂಡ್ ಮೂಲದ ಎಡಗೈ ವೇಗಿ ರೀಸ್ ಟಾಪ್ಲೆಯನ್ನು ಮುಂಬೈ ಇಂಡಿಯನ್ಸ್ ಫ್ರಾಂಚೈಸಿ 75 ಲಕ್ಷ ರುಪಾಯಿ ನೀಡಿ ಖರೀಸಿದಿಸಿತ್ತು. ಆದರೆ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಟಾಪ್ಲೆಗೂ ಮುಂಬೈ ಫ್ರಾಂಚೈಸಿ ಗೇಟ್‌ಪಾಸ್ ನೀಡುವ ಸಾಧ್ಯತೆ ಹೆಚ್ಚಿದೆ.
67
3. AM ಘಜನ್‌ಫರ್
ಆಫ್ಘಾನಿಸ್ತಾನ ಮೂಲದ ಪ್ರತಿಭಾನ್ವಿತ ಯುವ ಲೆಗ್ ಸ್ಪಿನ್ನರ್ ಘಜನ್‌ಫರ್ ಅವರನ್ನು ಬರೋಬ್ಬರಿ 4.8 ಕೋಟಿ ರುಪಾಯಿ ನೀಡಿ ಖರೀದಿಸಿತ್ತು. ಆದರೆ ಒಂದೇ ಒಂದು ಐಪಿಎಲ್ ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ. ಘಜನ್‌ಫರ್ ಕೂಡಾ ಈ ಬಾರಿ ರೀಟೈನ್ ಆಗೋದು ಅನುಮಾನ.
77
4. ದೀಪಕ್ ಚಹರ್
ಬರೋಬ್ಬರಿ 9.25 ಕೋಟಿ ರುಪಾಯಿ ಪಡೆದುಕೊಂಡು ಮುಂಬೈ ಇಂಡಿಯನ್ಸ್ ತೆಕ್ಕೆಗೆ ಜಾರಿದ್ದ ದೀಪಕ್ ಚಹರ್, 14 ಪಂದ್ಯಗಳನ್ನಾಡಿ ಕೇವಲ 11 ವಿಕೆಟ್ ಮಾತ್ರ ಪಡೆದಿದ್ದರು. ಪವರ್ ಪ್ಲೇನಲ್ಲಿ ಮತ್ತೋರ್ವ ಮಾರಕ ವೇಗಿ ಖರೀದಿಸಲು ದೀಪಕ್ ಚಹರ್‌ಗೆ ಗೇಟ್‌ಪಾಸ್ ನೀಡುವ ಸಾಧ್ಯತೆ ಹೆಚ್ಚಿದೆ.