ಬೆಂಗಳೂರು: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹರಾಜು ಪ್ರಕ್ರಿಯೆ ಎಲ್ಲಿ? ಯಾವಾಗ? ಎಷ್ಟು ಗಂಟೆಗೆ? ಆರಂಭವಾಗಲಿದೆ. ಎಷ್ಟು ಜನ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ? ಎಲ್ಲಿ ಹರಾಜು ವೀಕ್ಷಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
2026ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯು ಇದೇ ಡಿಸೆಂಬರ್ 16ರಂದು ಯುಎಇನ ಅಬುಧಾಬಿಯಲ್ಲಿ ನಡೆಯಲಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ರೀಟೈನ್ ಮಾಡಿಕೊಂಡಿದ್ದು, ಹರಾಜಿನಲ್ಲಿ ಇನ್ನುಳಿದ ಆಟಗಾರರನ್ನು ಖರೀದಿಸಲು ರಣತಂತ್ರ ಹೆಣೆದಿದೆ.
29
1390ರಲ್ಲಿ 350 ಆಟಗಾರರ ಹೆಸರು ಶಾರ್ಟ್‌ಲಿಸ್ಟ್
ಐಪಿಎಲ್ ಮಿನಿ ಹರಾಜಿಗೆ ಬರೋಬ್ಬರಿ 1390 ಆಟಗಾರರು ಆಟಗಾರರು ಹೆಸರು ರಿಜಿಸ್ಟರ್ ಮಾಡಿದ್ದರು. ಈ ಪೈಕಿ ಫ್ರಾಂಚೈಸಿಗಳ ಜತೆ ಚರ್ಚಿಸಿ ಒಟ್ಟು 350 ಆಟಗಾರರ ಹೆಸರನ್ನು ಬಿಸಿಸಿಐ ಶಾರ್ಟ್ ಲಿಸ್ಟ್ ಮಾಡಿದೆ.
39
350 ಆಟಗಾರರ ಹೆಸರು ಅಂತಿಮ
350 ಆಟಗಾರರ ಪೈಕಿ 240 ಭಾರತೀಯ ಆಟಗಾರರು ಹಾಗೂ 110 ವಿದೇಶಿ ಆಟಗಾರರು ಐಪಿಎಲ್ ಮಿನಿ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ.
240 ಆಟಗಾರರ ಪೈಕಿ 224 ಅನ್‌ಕ್ಯಾಪ್ಡ್ ಭಾರತೀಯ ಆಟಗಾರರು ಹಾಗೂ 110 ವಿದೇಶಿ ಆಟಗಾರರಲ್ಲಿ 14 ಅನ್‌ಕ್ಯಾಪ್ಡ್ ಓವರ್‌ಸೀಸ್ ಆಟಗಾರರು ಇದ್ದಾರೆ.
59
ಕ್ವಿಂಟನ್ ಡಿ ಕಾಕ್ ಹೊಸದಾಗಿ ಸೇರ್ಪಡೆ
ಇನ್ನು ಮಿನಿ ಹರಾಜಿನ ಶಾರ್ಟ್‌ಲಿಸ್ಟ್‌ಗೂ ಮುನ್ನ 35 ಹೊಸ ಆಟಗಾರರ ಹೆಸರು ಸೇರ್ಪಡೆಯಾಗಿದ್ದು, ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಹೆಸರು ಸೇರ್ಪಡೆಯಾಗಿದೆ.
69
ಭಾರತೀಯ ಕಾಲಮಾನ ಮಧ್ಯಾಹ್ನ 2.30ರಿಂದ ಹರಾಜು ಆರಂಭ
ಐಪಿಎಲ್ ಮಿನಿ ಹರಾಜು ಡಿಸೆಂಬರ್ 16ರ ಭಾರತೀಯ ಕಾಲಮಾನ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ. ಮೊದಲ ಸುತ್ತಿನಲ್ಲೇ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಕ್ಯಾಮರೋನ್ ಗ್ರೀನ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
79
ಗರಿಷ್ಠ 77 ಆಟಗಾರರ ಖರೀದಿಸಲು ಅವಕಾಶ
ಹರಾಜಿಗೆ ಶಾರ್ಟ್‌ಲಿಸ್ಟ್ ಆಗಿರುವ 350 ಆಟಗಾರರ ಪೈಕಿ ಎಲ್ಲಾ 10 ಫ್ರಾಂಚೈಸಿಗಳು 31 ವಿದೇಶಿ ಆಟಗಾರರು ಸೇರಿದಂತೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ.
89
40 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿ
40 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿಯಾಗಿದೆ. ಎರಡು ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಭಾರತೀಯ ಆಟಗಾರರ ಪೈಕಿ ವೆಂಕಟೇಶ್ ಅಯ್ಯರ್ ಹಾಗೂ ರವಿ ಬಿಷ್ಣೋಯಿ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
99
10 ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ರುಪಾಯಿ ಪರ್ಸ್
10 ಫ್ರಾಂಚೈಸಿಗಳ ಬಳಿ ಒಟ್ಟು 237.55 ಕೋಟಿ ರುಪಾಯಿ ಪರ್ಸ್ ಇದ್ದು, ಈ ಪೈಕಿ ಮೂರು ಬಾರಿಯ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಬಳಿ ಅತಿಹೆಚ್ಚು ₹64.30 ಕೋಟಿ, ಚೆನ್ನೈ ಸೂಪರ್ ಕಿಂಗ್ಸ್ ಬಳಿ ಎರಡನೇ ಅತಿಹೆಚ್ಚು 43.40 ಕೋಟಿ ರುಪಾಯಿ ಪರ್ಸ್ ಹೊಂದಿದೆ.