ನವದೆಹಲಿ: ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ಐಸಿಸಿಗೆ ಬಿಗ್ ಶಾಕ್ ನೀಡಿದ್ದಾರೆ. ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್, ಐಸಿಸಿ ಜತೆಗಿನ ಭಾರತದಲ್ಲಿ ಕ್ರಿಕೆಟ್ ಪ್ರಸಾರ ಮಾಡುವ ಹಕ್ಕಿನಿಂದ ಹಿಂದೆ ಸರಿದಿದೆ. ಇದು ಐಸಿಸಿ ಪಾಲಿಗೆ ಬಿಗ್ ಶಾಕ್ ಎನಿಸಿಕೊಂಡಿದೆ.
ಟಿ20 ವಿಶ್ವಕಪ್‌ಗೆ ಇನ್ನೆರಡು ತಿಂಗಳು ಬಾಕಿಯಿರುವಾಗಲೇ ಐಸಿಸಿಗೆ ಆಘಾತ ಎದುರಾಗಿದೆ. ಐಸಿಸಿ ಟೂರ್ನಿಗಳ ಪಂದ್ಯಗಳನ್ನು ಭಾರತದಲ್ಲಿ ಪ್ರಸಾರ ಮಾಡುವ ಹಕ್ಕು ಹೊಂದಿದ್ದ ಜಿಯೋ ಹಾಟ್‌ಸ್ಟಾರ್ ಆರ್ಥಿಕ ನಷ್ಟದಿಂದಾಗಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ವರದಿಯಾಗಿದೆ.
28
3 ವರ್ಷದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದ ಜಿಯೋ ಹಾಟ್‌ಸ್ಟಾರ್
ರಿಲಯನ್ಸ್ ಒಡೆತನದ ಜಿಯೋ ಹಾಟ್‌ಸ್ಟಾರ್ ಕಳೆದ ವರ್ಷ ಐಸಿಸಿ ಜತೆ 3 ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪ್ರಕಾರ 2024-27ರವರೆಗೆ ಭಾರತದಲ್ಲಿ ನಡೆಯುವ ಪಂದ್ಯಗಳ ಪ್ರಸಾರಕ್ಕಾಗಿ ಬರೋಬ್ಬರಿ ₹27047 ಕೋಟಿ (3 ಬಿಲಿಯನ್ ಡಾಲರ್)ಗೆ ಡೀಲ್ ನಡೆದಿತ್ತು.
38
ಐಸಿಸಿಗೆ ಶುರುವಾಯ್ತು ಸಂಕಷ್ಟ
ಆದರೆ ಇದೀಗ ಆರ್ಥಿಕ ಸಂಕಷ್ಟದ ಕಾರಣದಿಂದ 2 ವರ್ಷಕ್ಕೂ ಮೊದಲೇ ಪ್ರಸಾರದ ಹಕ್ಕನ್ನು ತ್ಯಜಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಜಿಯೋ ಹಾಟ್‌ಸ್ಟಾರ್ ಪ್ರಸಾರ ಹಕ್ಕು ತ್ಯಜಿಸಿದರೆ ಫೆ.27ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಹೊಸ ಪಾಲುದಾರರನ್ನು ಐಸಿಸಿ ಹುಡುಕಬೇಕಿದೆ.
58
2026-29ರ ಅವಧಿಗೆ ಹೊಸಬರ ಹುಡುಕಾಟದಲ್ಲಿ ಐಸಿಸಿ
ಈಗಾಗಲೇ 2026-29ರ ಅವಧಿಗೆ ಭಾರತದಲ್ಲಿ ಮಾಧ್ಯಮ ಹಕ್ಕು ಪಡೆಯುವರಿಗೆ ಹುಡುಕಾಟ ನಡೆಸುತ್ತಿದ್ದು, 21 ಸಾವಿರ ಕೋಟಿಗೆ(2.4 ಬಿಲಿಯನ್ ಡಾಲರ್) ಡೀಲ್ ಕುದುರಿಸಲು ಮುಂದಾಗಿದೆ.
68
ಬೇರೆ ಆನ್‌ಲೈನ್ ವೇದಿಕೆಯತ್ತ ಐಸಿಸಿ ಒಲವು
ಸೋನಿ ಫಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ, ನೆಟ್ ಫ್ಲಿಕ್ಸ್ ಅಮೆಜಾನ್ ಪ್ರೈಮ್ ನಂತಹ ಆನ್‌ಲೈನ್ ವೇದಿಕೆಯತ್ತ ಐಸಿಸಿ ಒಲವು ತೋರಿದೆ. ಆದರೆ ದೊಡ್ಡ ಪ್ರಮಾಣದ ಒಪ್ಪಂದವಾಗಿರುವುದುರಿಂದ ಯಾರೂ ಆಸಕ್ತಿ ತೋರಿಲ್ಲ ಎಂದು ವರದಿಯಾಗಿದೆ.
78
ಒಂದೇ ವರ್ಷದಲ್ಲಿ 25760 ಕೋಟಿ ನಷ್ಟ?
ವರದಿಗಳ ಪ್ರಕಾರ, 2024ರ ಟಿ20 ವಿಶ್ವಕಪ್, 2025ರ ಚಾಂಪಿಯನ್ಸ್ ಟ್ರೋಫಿಗಳಿಂದ ಜಿಯೋ ಹಾಟ್‌ಸ್ಟಾರ್‌ಗೆ ನಷ್ಟ ಉಂಟಾಗಿದೆ.
88
ಆನ್‌ಲೈನ್ ಮನಿ ಗೇಮಿಂಗ್ ಬ್ಯಾನ್ ಎಫೆಕ್ಟ್
ಅದರ ಪ್ರಮಾಣ ಒಂದೇ ವರ್ಷದಲ್ಲಿ ₹12,319 ಕೋಟಿಯಿಂದ ₹25,760 ಕೋಟಿಗೆ ಏರಿಕೆಯಾಗಿದೆ ಎನ್ನಲಾಗಿದೆ. ಅಲ್ಲದೇ ಕೇಂದ್ರ ಸರ್ಕಾರ ಆನ್‌ಲೈನ್ ಮನಿ ಗೇಮಿಂಗ್ ನಿಷೇಧಿಸಿದ್ದರಿಂದ ಜಿಯೋ ಹಾಟ್‌ಸ್ಟಾರ್ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದು ವರದಿಯಾಗಿದೆ.