ಆರ್‌ಸಿಬಿ ಪ್ಲೇಯರ್ಸ್ ಧರಿಸುವ ಅದೇ ಅಧಿಕೃತ ಜರ್ಸಿ ಖರೀದಿಸುವುದು ಹೇಗೆ? ನಿಮ್ಮ ಹೆಸರಿನಲ್ಲಿ ಲಭ್ಯ, ನಿಮ್ಮ ಇಷ್ಟದ ಜರ್ಸಿ ನಂಬರ್ ಅಥವಾ ವಿರಾಟ್ ಕೊಹ್ಲಿ ಸೇರಿ ಇತರರ ಹೆಸರಿನ ಅಧಿಕೃತ ಆರ್‌ಸಿಬಿ ಜರ್ಸಿ ಖರೀದಿ ಅತ್ಯಂತ ಸುಲಭ, ಇದರ ಬೆಲೆ ಎಷ್ಟು?
ಐಪಿಎಲ್ 2026 ಟೂರ್ನಿ ಆರಂಭಕ್ಕೆ ತಯಾರಿಗಳು ಭರ್ಜರಿಯಾಗಿ ನಡೆಯುತ್ತಿದೆ. ಉದ್ಘಾಟನಾ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‌ಸಿಬಿ, ಸನ್ ರೈಸರ್ಸ್ ಹೈದರಾಬಾದ್ ವಿರುದ್ದ ಹೋರಾಟ ನಡೆಸಲಿದೆ. ಇತ್ತ ಫ್ರಾಂಚೈಸಿಗಳು ಕ್ಯಾಂಪ್ ಆರಂಭಿಸಿದೆ. ಹಿರಿಯ ಆಟಗಾರರು ತಂಡ ಸೇರಿಕೊಳ್ಳುತ್ತಿದ್ದಾರೆ. ಇತ್ತ ಅಭಿಮಾನಿಗಳು ಐಪಿಎಲ್ ಟೂರ್ನಿಗೆ ರೆಡಿಯಾಗುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಫ್ಯಾನ್ಸ್ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ರೆಡಿಯಾಗಿದ್ದಾರೆ.
26
ಆರ್‌ಸಿಬಿ ಅಧಿಕೃತ ಜರ್ಸಿ
ವಿರಾಟ್ ಕೊಹ್ಲಿ ಸೇರಿದಂತೆ ಆರ್‌ಸಿಬಿ ಆಟಾಗರರು ಧರಿಸುವ ಅಧಿಕೃತ ಜರ್ಸಿಯನ್ನು ಅಭಿಮಾನಿಗಳು ಖರೀದಿಸಬಹುದು. ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಪಂದ್ಯಗಳಿಗೆ ಅನುಮತಿ ಸಿಕ್ಕಿರುವ ಕಾರಣ ಫ್ಯಾನ್ಸ್ ಬೆಂಗಳೂರು ಕ್ರೀಡಾಂಗಣದಲ್ಲಿ ಆರ್...ಸಿ..ಬಿ ಘೋಷಣೆ ಮೊಳಗಿಸಲು ರೆಡಿಯಾಗಿದ್ದಾರೆ. ಇದಕ್ಕಾಗಿ ಅಧಿಕೃತ ಜರ್ಸಿಯನ್ನು ಆರ್‌ಸಿಬಿ ಫ್ರಾಂಚೈಸಿ ಬಳಿಯಿಂದಲೇ ಖರೀದಿಸಲು ಅಭಿಮಾನಿಗಳಿಗೆ ಅವಕಾಶ ನೀಡಲಾಗಿದೆ.
36
ಜರ್ಸಿ ಖರೀದಿಸುವುದು ಹೇಗೆ?
ಜರ್ಸಿ ಖರೀದಿಸುವುದು ಹೇಗೆ?
ಆರ್‌ಸಿಬಿ ವೆಬ್‌ಸೈಟ್ ಮೂಲಕ ಅಧಿಕೃತ ಜರ್ಸಿ ಖರೀದಿಸಲು ಸಾಧ್ಯವಿದೆ
ಆರ್‌ಸಿಬಿ ವೆಬ್‌ಸೈಟ್‌ನಲ್ಲಿ ಲಿಸ್ಟ್ ಮಾಡಿರುವ ಅಧಿಕೃತ ಜರ್ಸಿ ಬೆಲೆ 5499 ರೂಪಾಯಿ. ವಿಶೇಷ ಅಂದರೆ ಈ ಜರ್ಸಿ ಮೇಲೆ ನಿಮ್ಮ ಹೆಸರು, ನಿಮ್ಮ ಇಷ್ಟದ ಜರ್ಸಿ ನಂಬರ್ ಬೇಕಾದರೆ ಹಾಕಿಸಿಕೊಳ್ಳಬಹುದು. ಇದಕ್ಕಾಗಿ ಪರ್ಸನಲೈಸ್ ಆಯ್ಕೆ ಕ್ಲಿಕ್ ಮಾಡಿ ಭರ್ತಿ ಮಾಡಬೇಕು. ಈ ರೀತಿ ಮಾಡಲು ಹೆಚ್ಚುವರಿಯಾಗಿ 399 ರೂಪಾಯಿ ನೀಡಬೇಕು.
56
ಯಾವ ಸೈಝ್ ಜರ್ಸಿ ಲಭ್ಯ?
ಆರ್‌ಸಿಬಿ ಅಧಿಕೃತ ವೆಬ್‌ಸೈಟ್‌ನಲ್ಲಿ ಜರ್ಸಿ XS ಸೈಝ್‌ನಿಂದ ಆರಂಭಗೊಂಡು ಗರಿಷ್ಠ XXL ಸೈಝ್‌ವರೆಗೂ ಲಭ್ಯವಿದೆ. ಹೀಗಾಗಿ ಅಭಿಮಾನಿಗಳು ತಮ್ಮ ಅಳತೆಗೆ ಅನುಗುಣವಾಗಿ ಜರ್ಸಿ ಖರೀದಿಸಲು ಸಾಧ್ಯವಿದೆ. 2026ರ ಹೊಚ್ಚ ಹೊಸ ಜರ್ಸಿ ಒಂದು ವಾರದಲ್ಲಿ ನಿಮ್ಮ ಕೈಸೇರಲಿದೆ.
66
ಮಾರ್ಚ್ 28ಕ್ಕೆ ಐಪಿಎಲ್ ಆರಂಭ
ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನ ಮಾತ್ರ ಬಾಕಿ. ಮಾರ್ಚ್ 28 ರಂದು ಐಪಿಎಲ್ ಟೂರ್ನಿ ಆರಂಭಗೊಳ್ಳಲಿದೆ. ಆರಂಭಿಕ 20 ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸೇರಿದಂತೆ 10 ಕ್ರೀಡಾಂಗಣದಲ್ಲಿ ಆರಂಭಿಕ ಹಂತದ ಪಂದ್ಯಗಳ ನಡೆಯಲಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.