ನವದೆಹಲಿ: 19ನೇ ಆವೃತ್ತಿಯ ಐಪಿಎಲ್ ಟೂರ್ನಿ ಆಯೋಜನೆಗೆ ಭರದ ಸಿದ್ದತೆಗಳು ಶುರುವಾಗಿವೆ. ಹೀಗಿರುವಾಗಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಸಿಸಿಐ ಅಂತಿಮ ಡೆಡ್‌ಲೈನ್ ನೀಡಿದೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್ ಇಲ್ಲಿದೆ ನೋಡಿ
2026ರ ಐಪಿಎಲ್‌ನಲ್ಲಿ ತವರು ಮೈದಾನಗಳನ್ನು ಆಯ್ಕೆ ಮಾಡಲು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಬಿಸಿಸಿಐ ಜ.27ರ ಗಡುವು ನೀಡಿದೆ. ಇದರೊಂದಿಗೆ ಆರ್‌ಸಿಬಿಯು ಬೆಂಗಳೂರಿನಲ್ಲಿ ಆಡಲಿದೆಯೇ ಇಲ್ಲವೇ ಎಂಬುದು 3-4 ದಿನಗಳಲ್ಲೇ ಗೊತ್ತಾಗಬಹುದು.
26
ಐಪಿಎಲ್ ಆಯೋಜಿಸಲು ಕರ್ನಾಟಕ ಸರ್ಕಾರ ಷರತ್ತುಬದ್ದ ಅನುಮತಿ
ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ. ಆದರೆ ಬೆಂಗಳೂರಿನಲ್ಲಿ ಆಡುವ ಬಗ್ಗೆ ಆರ್‌ಸಿಬಿ ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಿಲ್ಲ.
36
ಆರ್‌ಸಿಬಿಗೆ ಬಿಸಿಸಿಐ ಡೆಡ್ ಲೈನ್
ಈ ನಡುವೆ ಬಿಸಿಸಿಐ, ಆರ್‌ಸಿಬಿಗೆ ಕೆಲ ದಿನಗಳ ಗಡುವು ನೀಡಿದೆ. ಇದರ ಜೊತೆಗೆ, ಪಂದ್ಯಗಳನ್ನು ನಡೆಸಬೇಕಿದ್ದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಯಾವುದೇ ಷರತ್ತುಗಳಿಲ್ಲದ ರೀತಿ ಅನುಮತಿ ಪಡೆಯಬೇಕೆಂದೂ ಸೂಚಿಸಿದೆ.
ಚುನಾವಣಾ ಆಯೋಗದ ವೇಳಾಪಟ್ಟಿ ಬೆನ್ನಲ್ಲೇ ಐಪಿಎಲ್ ವೇಳಾಪಟ್ಟಿ
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ‘ಮೂರು ರಾಜ್ಯಗಳ ಚುನಾವಣೆಗೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸುವುದನ್ನು ಕಾಯುತ್ತಿದ್ದೇವೆ. ನಂತರ ಐಪಿಎಲ್ ವೇಳಾಪಟ್ಟಿ ಅಂತಿಮಗೊಳಿಸುತ್ತೇವೆ. ರಾಜಸ್ಥಾನ ತನ್ನ ಪಂದ್ಯಗಳನ್ನು ಪುಣೆಯಲ್ಲಿ ಆಯೋಜಿಸುವ ಸಾಧ್ಯತೆಯಿದೆ.
56
ಆರ್‌ಸಿಬಿ- ರಾಜಸ್ಥಾನ ರಾಯಲ್ಸ್‌ಗೆ ಡೆಡ್‌ಲೈನ್
ಆದರೆ ರಾಜಸ್ಥಾನ ಸರ್ಕಾರ ಆರ್‌ಆರ್‌ನ ಐಪಿಎಲ್ ಪಂದ್ಯಗಳನ್ನು ಜೈಪುರದಲ್ಲಿ ನಡೆಸಲು ಉತ್ಸುಕವಾಗಿದೆ. ಈ ವಿಷಯದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ರಾಜಸ್ಥಾನ ಮತ್ತು ಆರ್‌ಸಿಬಿ ಎರಡೂ ತಂಡಗಳಿಗೆ ಜ.27ರ ವರೆಗೆ ಸಮಯ ನೀಡಿದ್ದೇವೆ’ ಎಂದು ತಿಳಿಸಿದ್ದಾಗಿ ವರದಿಯಾಗಿದೆ.
66
ಆರ್‌ಸಿಬಿ ಮೇಲೆ ಎಲ್ಲರ ಕಣ್ಣು
ಈಗಾಗಲೇ ಕರ್ನಾಟಕ ಸರ್ಕಾರವು ಐಪಿಎಲ್ ಪಂದ್ಯಗಳನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲು ಗ್ರೀನ್ ಸಿಗ್ನಲ್ ಕೊಟ್ಟಿದೆ. ಇದರ ಜತೆಗೆ ಕೆಎಸ್‌ಸಿಎ ಕೂಡಾ ಐಪಿಎಲ್ ಆಯೋಜನೆಗೆ ಉತ್ಸುಕವಾಗಿದೆ. ಇದೀಗ ಆರ್‌ಸಿಬಿ ಫ್ರಾಂಚೈಸಿ ಅಂತಿಮ ತೀರ್ಮಾನ ಮಾಡಬೇಕಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.