ಒಂದ್ವೇಳೆ ಬಾಂಗ್ಲಾದೇಶ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಅನುಭವಿಸೋ ಕಷ್ಟ ಒಂದೆರಡಲ್ಲ! ಭಾರೀ ಬೆಲೆ ತೆರಬೇಕು

Published : Jan 22, 2026, 12:28 PM IST

ಬೆಂಗಳೂರು: ಫೆಬ್ರವರಿ 07ರಿಂದ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನಾಡಲು ಭಾರತಕ್ಕೆ ಬರಲ್ಲವೆಂದು ಹಟ ಹಿಡಿದಿರುವ ಬಾಂಗ್ಲಾದೇಶ ಮುಂಬರುವ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ. ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದ್ರೆ ಬಾಂಗ್ಲಾದೇಶಕ್ಕೆ ಆಗುವ ನಷ್ಟವೇನು ಗೊತ್ತಾ? 

PREV
16
30-40 ಮಿಲಿಯನ್ ಡಾಲರ್ ವಾರ್ಷಿಕ ಪಾಲು ನಷ್ಟ:

ಬಾಂಗ್ಲಾದೇಶವು ತನ್ನ ಕ್ರಿಕೆಟ್ ಅಭಿವೃದ್ದಿ ಪಡಿಸಲು ಐಸಿಸಿಯಿಂದ ಅನುದಾನ ಪಡೆಯುತ್ತದೆ. ಐಸಿಸಿ ಬಾಂಗ್ಲಾದೇಶಕ್ಕೆ ಸುಮಾರು 30ರಿಂದ 40 ಮಿಲಿಯನ್ ಡಾಲರ್(ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 330-340 ಕೋಟಿ ರುಪಾಯಿ) ಅನುದಾನ ಪಡೆಯುತ್ತೆ. ಇದೀಗ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶ ಬಾಯ್ಕಾಟ್ ಮಾಡಿದ್ರೆ ಮುಂಬರುವ ದಿನಗಳಲ್ಲಿ ಈ ಅನುದಾನವನ್ನು ಕಳೆದುಕೊಳ್ಳಲಿದೆ.

26
$545,950 ಟೂರ್ನಿಯಲ್ಲಿ ಪಾಲ್ಗೊಳ್ಳುವ ಫೀ ಕಳೆದುಕೊಳ್ಳಲಿರುವ ಬಾಂಗ್ಲಾದೇಶ;

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಎಲ್ಲಾ 20 ತಂಡಗಳಿಗೂ ಐಸಿಸಿ ಪಾರ್ಟಿಸಿಪೇಷನ್ ಫೀ ಎಂದು $545,950 ಅಂದರೆ ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ ಸುಮಾರು 5 ಕೋಟಿ ರುಪಾಯಿ ನೀಡುತ್ತದೆ. ಈ ಮೊತ್ತವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ.

36
3. ಸುಮಾರು 4 ಕೋಟಿ ಪ್ರೈಜ್ ಮನಿ ನಷ್ಟ:

ಅಂಕಪಟ್ಟಿಯಲ್ಲಿ ಐದರಿಂದ ಹನ್ನೆರಡರವರೆಗೆ ಸ್ಥಾನ ಪಡೆಯುವ ತಂಡಗಳು ತಲಾ 4 ಕೋಟಿ, ನಾಲ್ಕು ಲಕ್ಷ ರುಪಾಯಿ ತಮ್ಮದಾಗಿಸಿಕೊಳ್ಳಲಿವೆ. ಒಂದು ವೇಳೆ ಬಾಂಗ್ಲಾದೇಶ ಈ ಬಾರಿಯ ಟಿ20 ವಿಶ್ವಕಪ್ ಬಾಯ್ಕಾಟ್ ಮಾಡಿದರೆ ಮೊತ್ತವನ್ನು ಬಾಂಗ್ಲಾದೇಶ ಕಳೆದುಕೊಳ್ಳಲಿದೆ.

46
4. ಬಾಯ್ಕಾಟ್ ಮಾಡಿದ್ರೆ 2 ಮಿಲಿಯನ್ ಡಾಲರ್ ದಂಡ ತೆರಬೇಕು:

ಇನ್ನು ಐಸಿಸಿ ಇಷ್ಟೆಲ್ಲಾ ವಾರ್ನಿಂಗ್ ಹೊರತಾಗಿಯೂ ಒಂದು ವೇಳೆ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಬಾಯ್ಕಾಟ್ ಮಾಡಿದ್ರೆ ಸುಮಾರು 2 ಮಿಲಿಯನ್ ಡಾಲರ್, ಭಾರತೀಯ ರುಪಾಯಿ ಲೆಕ್ಕಾಚಾರದಲ್ಲಿ 18.31 ಕೋಟಿ ರುಪಾಯಿಗಳನ್ನು ದಂಡದ ರೂಪದಲ್ಲಿ ಐಸಿಸಿಗೆ ನೀಡಬೇಕು.

56
5. ಐಸಿಸಿ ನೀಡುವ ಶಿಕ್ಷೆಯನ್ನು ಅನುಭವಿಸಬೇಕು:

ಇಷ್ಟೆಲ್ಲಾ ದಂಡ ಕಟ್ಟಿದ ಬಳಿಕವೂ, ಐಸಿಸಿ ನಿಯಮ ಉಲ್ಲಂಘಿಸಿದ ತಪ್ಪಿಗೆ ಐಸಿಸಿ ನೀಡುವ ಶಿಕ್ಷೆಯನ್ನು ಬಾಂಗ್ಲಾದೇಶ ಕ್ರಿಕೆಟ್ ಅನುಭವಿಸಬೇಕಾಗುತ್ತದೆ.

66
6. ರ್‍ಯಾಂಕಿಂಗ್‌ನಲ್ಲೂ ಬಾಂಗ್ಲಾದೇಶಕ್ಕೆ ದೊಡ್ಡ ಹೊಡೆತ:

ಒಂದು ವೇಳೆ ಬಾಂಗ್ಲಾದೇಶ ತಂಡವು ಈ ಟಿ20 ವಿಶ್ವಕಪ್ ಟೂರ್ನಿಯನ್ನು ಬಾಯ್ಕಾಟ್ ಮಾಡಿದರೆ, ರ್‍ಯಾಂಕಿಂಗ್‌ ವಿಚಾರದಲ್ಲೂ ದೊಡ್ಡ ಹೊಡೆತ ಅನುಭವಿಸಲಿದೆ. ಸದ್ಯ ಬಾಂಗ್ಲಾದೇಶ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿದ್ದು, ಮುಂಬರುವ ದಿನಗಳಲ್ಲಿ ಟಾಪ್ 10 ಲಿಸ್ಟ್‌ನಿಂದಲೂ ಹೊರಬೀಳಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories