5. ಸುರೇಶ್ ರೈನಾ (2014 ಕ್ವಾಲಿಫೈಯರ್ 2 ರಲ್ಲಿ ಕೆಎಕ್ಸ್‌ಐಪಿ ವಿರುದ್ಧ 87)
ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ ಶ್ರೇಷ್ಠ ಇನ್ನಿಂಗ್ಸ್‌ಗಳಲ್ಲಿ ಒಂದನ್ನು ಆಡಿದರು. ರೈನಾ ಕ್ವಾಲಿಫೈಯರ್ 2 ರಲ್ಲಿ ಕಿಂಗ್ಸ್ XI ಪಂಜಾಬ್ (ಈಗ ಪಂಜಾಬ್ ಕಿಂಗ್ಸ್) ವಿರುದ್ಧ ತಮ್ಮ ಪವರ್-ಹಿಟ್ಟಿಂಗ್ ಸಾಮರ್ಥ್ಯದಿಂದ ಅಬ್ಬರಿಸಿದರು. ರೈನಾ ಚೆನ್ನೈ ಸೂಪರ್ ಕಿಂಗ್ಸ್‌ನ 227 ರನ್‌ಗಳ ಬೆನ್ನಟ್ಟುವಿಕೆಯಲ್ಲಿ ಕೇವಲ 25 ಎಸೆತಗಳಲ್ಲಿ 87 ರನ್ ಗಳಿಸಿದರು. ಅವರು ಕೇವಲ 16 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು, ಇದು ಐಪಿಎಲ್ ಇತಿಹಾಸದಲ್ಲಿ ವೇಗದ ಅರ್ಧಶತಕಗಳಲ್ಲಿ ಒಂದಾಗಿದೆ. ಅವರ ಉಸಿರುಕಟ್ಟುವ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳು ಸೇರಿದ್ದವು ಮತ್ತು 348 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ಆದಾಗ್ಯೂ, ಸುರೇಶ್ ರೈನಾ ಅವರ ಆಟಕ್ಕೆ ಜಾರ್ಜ್ ಬೈಲಿ ರನೌಟ್ ಮಾಡುವ ಮೂಲಕ ಅಂತ್ಯ ಹಾಡಿದರು. ಅವರ ವಿಕೆಟ್ ಪಂಜಾಬ್ ಪರವಾಗಿ ಆಟವನ್ನು ತಿರುಗಿಸಿತು, ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್ XI ಪಂಜಾಬ್ ನೀಡಿದ 227 ರನ್‌ಗಳ ಗುರಿಯನ್ನು ಸಾಧಿಸಲು 25 ರನ್‌ಗಳ ಕೊರತೆಯಾಯಿತು. ಸೋತರೂ, ಸುರೇಶ್ ರೈನಾ ಅವರ ಇನ್ನಿಂಗ್ಸ್ ಐಪಿಎಲ್ ಇತಿಹಾಸದಲ್ಲಿ ಸ್ಫೋಟಕ ನಾಕ್‌ಗಳಲ್ಲಿ ಒಂದಾಗಿ ದಾಖಲಾಯಿತು.