IPL 2025: ಈ ಬಾರಿ ಅಬ್ಬರಿಸಲು ರೆಡಿಯಾಗಿದ್ದಾರೆ ಟಾಪ್ 5 ಫಾರಿನ್ ಸ್ಟಾರ್ಸ್!

Published : Mar 19, 2025, 12:18 PM ISTUpdated : Mar 19, 2025, 12:20 PM IST

ಬೆಂಗಳೂರು: 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಬಾರಿಯ ಐಪಿಎಲ್‌ನಲ್ಲಿ ಕೆಲವು ವಿದೇಶಿ ಆಟಗಾರರನ್ನು ಅಬ್ಬರಿಸಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
15
 IPL 2025: ಈ ಬಾರಿ ಅಬ್ಬರಿಸಲು ರೆಡಿಯಾಗಿದ್ದಾರೆ ಟಾಪ್ 5 ಫಾರಿನ್ ಸ್ಟಾರ್ಸ್!
Jos Buttler (Photo: X/@englandcricket)

1. ಜೋಸ್‌ ಬಟ್ಲರ್‌

ತಂಡ: ಗುಜರಾತ್‌

ಕೆಲ ವರ್ಷಗಳಿಂದ ರಾಜಸ್ಥಾನ ಪರ ಧೂಳೆಬ್ಬಿಸುತ್ತಿದ್ದ ಬಟ್ಲರ್‌, ಈ ಬಾರಿ ಗುಜರಾತ್‌ ಪರ ಆಡಲಿದ್ದಾರೆ. 2022ರಲ್ಲಿ 863 ರನ್‌ ಸಿಡಿಸಿದ್ದ ಅವರು, ಕಳೆದೆರಡು ವರ್ಷ ತಲಾ 300+ ರನ್‌ ಕಲೆಹಾಕಿದ್ದರು. ಈ ಸಲವೂ ದೊಡ್ಡ ಮೊತ್ತದ ನಿರೀಕ್ಷೆಯಿದೆ.
 

25
Image Credit: Getty Images

2. ಫಿಲ್ ಸಾಲ್ಟ್‌

ತಂಡ: ಆರ್‌ಸಿಬಿ

ಇಂಗ್ಲೆಂಡ್‌ನ ಸ್ಫೋಟಕ ಆಟಗಾರ ಫಿಲ್‌ ಸಾಲ್ಟ್‌ ಈ ಸಲ ಆರ್‌ಸಿಬಿ ಪರ ಬ್ಯಾಟ್‌ ಬೀಸಲಿದ್ದಾರೆ. ಕೊಹ್ಲಿ ಜೊತೆ ಇನ್ನಿಂಗ್ಸ್ ಆರಂಭಿಸಬೇಕಿರುವ ಸಾಲ್ಟ್‌, ಭರ್ಜರಿ ಸಿಕ್ಸರ್, ಬೌಂಡರಿ ಮೂಲಕ ಅಭಿಮಾನಿಗಳನ್ನು ರಂಜಿಸಲು ಕಾಯುತ್ತಿದ್ದಾರೆ.
 

35
Image Credit: ANI

3. ರಶೀದ್ ಖಾನ್‌

ತಂಡ: ಗುಜರಾತ್‌

ರಶೀದ್‌ ಖಾನ್‌ ಟಿ20 ಕ್ರಿಕೆಟ್‌ನ ವಿಶ್ವ ಶ್ರೇಷ್ಠ ಆಲ್ರೌಂಡರ್‌. ಗುಜರಾತ್‌ ಟೈಟಾನ್ಸ್‌ನ ಉಸಿರು. 2025ರಲ್ಲೂ ತಮ್ಮ ಸ್ಫೋಟಕ ಬ್ಯಾಟಿಂಗ್‌, ಮೊನಚು ಸ್ಪಿನ್ ದಾಳಿ ಮೂಲಕ ಎದುರಾಳಿ ತಂಡಗಳಿಗೆ ಭೀತಿ ಹುಟ್ಟಿಸಲು ಸಜ್ಜಾಗಿದ್ದಾರೆ.
 

45

4. ಟ್ರ್ಯಾವಿಸ್‌ ಹೆಡ್

ತಂಡ: ಸನ್‌ರೈಸರ್ಸ್‌

ಟ್ರ್ಯಾವಿಸ್‌ ಹೆಡ್‌ ಎದುರಾಳಿ ತಂಡಗಳ ಪಾಲಿಗೆ ಹೆಡ್ಡೇಕ್‌(ತಲೆನೋವು). ಅವರು ಆರ್ಭಟಿಸಲು ಶುರುವಿಟ್ಟರೆ ಬೌಲರ್ಸ್‌ಗೆ ಉಳಿಗಾಲವಿಲ್ಲ. ಸನ್‌ರೈಸರ್ಸ್‌ ಈ ಸಲ 300+ ರನ್‌ ಗಡಿ ದಾಟುವ ಯೋಜನೆಯಲ್ಲಿದ್ದು, ಅದಕ್ಕೆ ಹೆಡ್‌ ಪ್ರಮುಖ ಬಲ.
 

55

5. ಮಿಚೆಲ್‌ ಸ್ಟಾರ್ಕ್‌

ತಂಡ: ಕೆಕೆಆರ್‌

ಕಳೆದ ಬಾರಿ ಹರಾಜಿನ ಅತಿ ದುಬಾರಿ ಆಟಗಾರ ಮಿಚೆಲ್‌ ಸ್ಟಾರ್ಕ್‌, ಕೆಕೆಆರ್‌ ಟ್ರೋಫಿ ಗೆಲುವಿನ ಹಿಂದಿನ ಶಕ್ತಿ. ಅವರು ಈ ಬಾರಿ ಮಾರಕ ಯಾರ್ಕರ್‌, ಸ್ವಿಂಗ್‌ ಬೌಲಿಂಗ್‌ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಬಲ ತುಂಬಲಿದ್ದಾರೆ.
 

Read more Photos on
click me!

Recommended Stories