ಪ್ಲೇಆಫ್‌ಗೂ ಮುನ್ನವೇ RCB ಹೊಸ ಮೈಲಿಗಲ್ಲು: ಇನ್ನೂ ದೂರದಲ್ಲಿವೆ ಸಿಎಸ್‌ಕೆ-ಎಂಐ

Published : May 26, 2025, 05:50 PM IST

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲೇ  ಇದು ಮೊದಲ ದಾಖಲೆಯಾಗಿದೆ. ನಂತರದ  ಸ್ಥಾನದಲ್ಲಿ  ಸಿಎಸ್‌ಕೆ ಮತ್ತು ಎಂಐ ತಂಡಗಳಿವೆ.

PREV
16

18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಂತಿಮ ಘಟ್ಟವನ್ನು ತಲುಪಿದೆ. ಪ್ಲೇಆಫ್‌ ಪಂದ್ಯಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಸಿಎಸ್‌ಕೆ ಮತ್ತು ಎಂಐ ತಂಡಗಳು ಈ ಮೈಲಿಗಲ್ಲು ತಲುಪಲು ಇನ್ನೂ ದೂರದಲ್ಲಿವೆ.

26

ಈ ಬಾರಿಯ ಐಪಿಎಲ್-18ನೇ ಆವೃತ್ತಿಯಲ್ಲಿ ಗುಜರಾತ್ ಟೈಟಾನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಪ್ಲೇಆಫ್ ತಲುಪಿವೆ. ಪ್ಲೇ ಆಫ್ ಪಂದ್ಯ ಆರಂಭಕ್ಕೂ ಮುನ್ನ ಇದುವರೆಗೂ ಯಾವುದೇ ತಂಡ ತಲುಪದ ಸ್ಥಾನವನ್ನು ತಲುಪಿದೆ. ಈ ಮೂಲಕ ಹೊಸ ದಾಖಲೆಯನ್ನು ಸೇರ್ಪಡೆ ಮಾಡಿಕೊಂಡಿದೆ.

36

ಯಾವುದೇ ಐಪಿಎಲ್ ತಂಡವು ಇಲ್ಲಿಯವರೆಗೆ ತಲುಪಲು ಸಾಧ್ಯವಾಗದ ಸ್ಥಾನವನ್ನು ಸಾಧಿಸಿದೆ. ಹಾಗಾದ್ರೆ ಯಾವುದು ಈ ದಾಖಲೆ? ಇನ್ನುಳಿದ ತಂಡಗಳು ಯಾವ ಸ್ಥಾನದಲ್ಲಿವೆ ಎಂಬುದನ್ನು ನೋಡೋಣ ಬನ್ನಿ.

46

20 ಮಿಲಿಯನ್ ಫಾಲೋವರ್ಸ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇನ್ಸ್ಟಾಗ್ರಾಮ್ ನಲ್ಲಿ 20 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದೆ. ಈ ಮೂಲಕ ಅತಿಹೆಚ್ಚು ಅನುಯಾಯಿಗಳನ್ನು ಹೊಂದಿರುವ ಐಪಿಎಲ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರ್‌ಸಿಬಿ ತಂಡದ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬಾರಿಯ ಟ್ರೋಫಿ ಗೆಲ್ಲುವ ಫೇವರಿಟ್ ತಂಡವಾಗಿದೆ.

56

ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಇನ್‌ಸ್ಟಾಗ್ರಾಂ ರೇಸ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಆರ್‌ಸಿಬಿಗಿಂತ ಬಹಳ ಹಿಂದಿವೆ. ಬೆಂಗಳೂರು ತಂಡ ಇದುವರೆಗೂ ಯಾವುದೇ ಐಪಿಎಲ್ ಸೀಸನ್ ಗೆದ್ದಿಲ್ಲ. ಆದ್ರೂ ಆರ್‌ಸಿಬಿ ಅಪಾರ ಅಭಿಮಾನಿಗಳನ್ನು ಹೊಂದಿರುವ ತಂಡವಾಗಿದೆ.

66

MI-CSK, RCB ಗಿಂತ ಎಷ್ಟು ಹಿಂದಿದೆ?

ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಿಂತ ಹಿಂದಿದೆ. ಸಿಎಸ್‌ಕೆ ಇನ್‌ಸ್ಟಾಗ್ರಾಮ್‌ನಲ್ಲಿ 18.6 ಮಿಲಿಯನ್, ಮುಂಬೈ ಇಂಡಿಯನ್ಸ್ 18 ಮಿಲಿಯನ್ ಫಾಲೋವರ್ಸ್‌ ಹೊಂದುವ ಮೂಲಕ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.

Read more Photos on
click me!

Recommended Stories