ಒಂದೇ ವಾರದಲ್ಲಿ ಐಪಿಎಲ್ ಪುನರ್ ಆರಂಭ, ಮಹತ್ವದ ಸುಳಿವು ನೀಡಿದ ಬಿಸಿಸಿಐ

Published : May 09, 2025, 09:01 PM IST

ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್. ಭದ್ರತಾ ಕಾರಣಗಳಿಂದ ಸ್ಥಗಿತಗೊಂಡಿರುವ ಐಪಿಎಲ್ ಟೂರ್ನಿಗೆ ಹೆಚ್ಚು ದಿನ ಕಾಯಬೇಕಿಲ್ಲ. ಕೇವಲ ಒಂದೇ ವಾರದಲ್ಲಿ ಐಪಿಎಲ್ ಟೂರ್ನಿ ಪುನರ್ ಆರಂಭಗೊಳ್ಳಲಿದೆ. ಈ ಕುರಿತು ಬಿಸಿಸಿಐ ಸೂಚನೆ ನೀಡಿದೆ.

PREV
16
ಒಂದೇ ವಾರದಲ್ಲಿ ಐಪಿಎಲ್ ಪುನರ್ ಆರಂಭ, ಮಹತ್ವದ ಸುಳಿವು ನೀಡಿದ ಬಿಸಿಸಿಐ

ಭಾರತ ಹಾಗೂ ಪಾಕಿಸ್ತಾನ ನಡುವಿನ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪೆಹಲ್ಗಾಂ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಆಪರೇಶನ್ ಸಿಂದೂರ್ ಕಾರ್ಯಾಚರಣೆ ನಡೆಸಿತ್ತು.  ಇತ್ತ ಪಾಕಿಸ್ತಾನ ಭಾರತದ ಮೇಲೆ ಡ್ರೋನ್, ಕ್ಷಿಪಣಿ ದಾಳಿ ಪ್ರಯತ್ನ ಮಾಡಿದೆ. ಈ ಪೈಕಿ ಬಹುತೇಕ ದಾಳಿಗಳನ್ನು ಭಾರತ ವಿಫಲಗೊಳಿಸಿತ್ತು. ಕೆಲ ನಾಗರೀಕರಿಕರ ಗುರಿಯಾಗಿಸಿದ ದಾಳಿ ಸಫಲಗೊಂಡಿತ್ತು. ಪಾಕಿಸ್ತಾನದ ಡ್ರೋನ್, ಕ್ಷಿಪಣಿ ದಾಳಿಗಳ ಕಾರಣದಿಂದ ಐಪಿಎಲ್ ಟೂರ್ನಿಯನ್ನು ಬಿಸಿಸಿಐ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಆದರೆ ಇದೀಗ ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

26

ಪಾಕಿಸ್ತಾನದ ದಾಳಿ ಕಾರಣದಿಂದ ಇಂದು ಸಭೆ ಸೇರಿದ ಬಿಸಿಸಿಐ ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಐಪಿಎಲ್ ಟೂರ್ನಿಯನ್ನು ಮಂದೂಡಿಕೆ ಮಾಡಿತ್ತು. ಇಂದು (ಮೇ.09) ಬಿಸಿಸಿಐ ಐಪಿಎಲ್ ಟೂರ್ನಿ ಮುಂದೂಡಿಕೆ ಮಾಡುತ್ತಿರುವುದಾಗಿ ಘೋಷಿಸಿತ್ತು. ಅನಿರ್ದಿಷ್ಟಾವದಿ ಕಾಲವದ ವರೆಗೆ ಮುಂದೂಡಿಕೆ ಎಂದು ಬಿಸಿಸಿಐ ಹೇಳಿತ್ತು. ಆದರೆ ಇಂದು ಸಂಜೆಯೊಳಗೆ ಒಂದೇ ವಾರದಲ್ಲಿ ಐಪಿಎಲ್ ಟೂರ್ನಿ ಪುನರ್ ಆರಂಭಗೊಳ್ಳಲಿದೆ ಎಂದು ಬಿಸಿಸಿಐ ಸುಳಿವು ನೀಡಿದೆ. ಈ ಮೂಲಕ ಸುದೀರ್ಘ ಕಾಯಬೇಕು ಅನ್ನೋ ಕೊರಗಿನಲ್ಲಿದ್ದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.

36

ಐಪಿಎಲ್ ಬಾಕಿ ಪಂದ್ಯಗಳು ತಾತ್ಕಾಲಿಕವಾಗಿ ಸ್ಥಗಿತಗೊಳಿಸಾಗಿದೆ ಎಂದು ಎಕ್ಸ್ ಖಾತೆ ಮೂಲಕ ಮಾಹಿತಿ ನೀಡಿದೆ. ಈ ವೇಳೆ ಐಪಿಎಲ್ ಪಂದ್ಯಗಳನ್ನು ಒಂದು ವಾರಗಳ ಕಾಲ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಅನ್ನೋ ಮಾಹಿತಿಯನ್ನು ನೀಡಿದೆ. ಈ ಮೂಲಕ ಬಿಸಿಸಿಐ ಮೇ 17ರ ಬಳಿಕ ಐಪಿಎಲ್ ಟೂರ್ನಿ ಪುನರ್ ಆರಂಭಿಸಲು ಪ್ಲಾನ್ ಮಾಡಿದೆ. 

46

ಮೇ ತಿಂಗಳ ಕೊನೆಯಲ್ಲಿ ಫೈನಲ್
ಬಾಕಿ ಉಳಿದಿರುವ ಪಂದ್ಯಗಳನ್ನು ರಿಶಡ್ಯೂಲ್ ಮಾಡಲಾಗುತ್ತಿದೆ. ಮೇ.17 ರಿಂದ ಐಪಿಎಲ್ ಟೂರ್ನಿ ಪುನರ್ ಆರಂಭಿಸಲು ಬಿಸಿಸಿಐ ಪ್ಲಾನ್ ಮಾಡುತ್ತಿದೆ. ಹೀಗಾದಲ್ಲಿ ಮೇ ಅಂತ್ಯದಲ್ಲಿ ಫೈನಲ್ ಪಂದ್ಯ ಆಯೋಜನೆಗೊಳ್ಳುವ ಸಾಧ್ಯತೆ ಇದೆ. ಇನ್ನು ಬೆಂಗಳೂರು, ಹೈದರಾಬಾದ್, ಚೆನ್ನೈ ನಗರದಲ್ಲಿ ಪಂದ್ಯ ಆಯೋಜಿಸುವ ಕುರಿತು ಬಿಸಿಸಿಐ ಚಿಂತಿಸುತ್ತಿದೆ. ಆದರೆ ಮುಂದಿನ ವಾರ ಮತ್ತೆ ಬಿಸಿಸಿಐ ಸಭೆ ಸೇರುತ್ತಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಬಳಿಕ ಐಪಿಎಲ್ ಅಧಿಕೃತ ಘೋಷಣೆ ಹೊರಬೀಳಲಿದೆ.

56

ಧರ್ಮಶಾಲಾ ಪಂದ್ಯ ಅರ್ಧಕ್ಕೆ ಮೊಟಕು
ಪಾಕಿಸ್ತಾನ ಮೇ 8ರ ರಾತ್ರಿ ಭಾರಿ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿತ್ತು. 300 ರಿಂದ 400 ಡ್ರೋನ್ ದಾಳಿಯನ್ನು ಪಾಕಿಸ್ತಾನ ಮಾಡಿತ್ತು. ಇದರ ನಡುವೆ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂದ್ಯಕ್ಕೆ ಆತಂಕ ಎದುರಾಗಿತ್ತು. ಭಾರತೀಯ ಸೇನೆ ತಕ್ಷಣವೇ ಕ್ರೀಡಾಂಗಣದ ಲೈಟ್ ಆಫ್ ಮಾಡಲು ಸೂಚಿಸಿತ್ತು. ಬಳಿಕ ಪಂದ್ಯವನ್ನು ರದ್ದು ಮಾಡಲಾಗಿತ್ತು. 10 ಓವರ್ ಮುಕ್ತಾಯಗೊಂಡಿದ್ದ ಪಂದ್ಯ ಏಕಾಏಕಿ ರದ್ದಾಗಿತ್ತು. 

66

ವಿದೇಶಿ ಆಟಗಾರರು, ಪ್ರೀಕ್ಷಕರು, ಸಿಬ್ಬಂದಿಗಳು ಸೇರಿದಂತೆ ಅಪಾರ ಜನರಿಗೆ ದಾಳಿ ಸಂದರ್ಭದಲ್ಲಿ ರಕ್ಷಣೆ ನೀಡುವುದು ಸವಾಲಾಗಲಿದೆ ಇನ್ನು ಭಾರಿ ಸಂಖ್ಯೆಯಲ್ಲಿ ಜನ ಒಂದೆಡೆ ಸೇರುವುದು ದಾಳಿ ಸಂದರ್ಭದಲ್ಲಿ ಅಪಾಯಕಾರಿಯಾಗಿದೆ. ಜೊತೆಗೆ ಪ್ರಕಾಶಮಾನವಾದ ಬೆಳಕಿನ ಕಾರಣದಿಂದ ಪಾಕಿಸ್ತಾನ ಈ ಸ್ಥಳಗಳನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಹೆಚ್ಚು. ಹೀಗಾಗಿ ಐಪಿಎಲ್ ಮುಂದೂಡಲಾದಿದೆ. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories