ಪಾಕಿಸ್ತಾನಕ್ಕೆ ತೀವ್ರ ಮುಖಭಂಗ, ಪಿಎಸ್ಎಲ್ ಟೂರ್ನಿ ಆತಿಥ್ಯವಹಿಸಲು ದುಬೈ ಹಿಂದೇಟು

Published : May 09, 2025, 07:23 PM IST

ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ದುಬೈನಲ್ಲಿ ಪಿಎಸ್‌ಎಲ್ ಟೂರ್ನಿ ಆಯೋಜಿಸಲು ನಿರ್ಧರಿಸಿದ್ದ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಕಾರಣ ದುಬೈ ಪಿಎಸ್ಎಲ್ ಟೂರ್ನಿ ಆಯೋಜನೆಗೆ ಹಿಂದೇಟು ಹಾಕಿದೆ

PREV
16
ಪಾಕಿಸ್ತಾನಕ್ಕೆ ತೀವ್ರ ಮುಖಭಂಗ,  ಪಿಎಸ್ಎಲ್ ಟೂರ್ನಿ ಆತಿಥ್ಯವಹಿಸಲು ದುಬೈ ಹಿಂದೇಟು

ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಘರ್ಷ ಹೆಚ್ಚಾಗಿದೆ. ಆಪರೇಶನ್ ಸಿಂದೂರ್‌ಗೆ ಪ್ರತಿಯಾಗಿ ಪಾಕಿಸ್ತಾನ ಬರೋಬ್ಬರಿ 300 ರಿಂದ 400 ಟರ್ಕಿ ಡ್ರೋನ್ ಬಳಸಿ ಭಾರತದ ಮೇಲೆ ದಾಳಿ ಮಾಡಿದೆ. ಆದರೆ ಎಲ್ಲಾ ದಾಳಿಯನ್ನು ಭಾರತ ವಿಫಲಗೊಳಿಸಿದೆ. ಕ್ಷಿಪಣಿ ದಾಳಿಗಳನ್ನು ಪಾಕಿಸ್ತಾನ ಮಾಡಿದೆ. ಆಟಗಾರರು, ಪ್ರೇಕ್ಷಕರ ಸುರಕ್ಷತೆ ದೃಷ್ಟಿಯಿಂದ ಐಪಿಎಲ್ ಟೂರ್ನಿ ಮುಂದೂಡಲಾಗಿದೆ. ಇತ್ತ ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯನ್ನು ಸ್ಥಳಾಂತರಕ್ಕೆ ಪಾಕಿಸ್ತಾನ ಮುಂದಾಗಿದೆ. ಇದರ ಬೆನ್ನಲ್ಲೇ ಮುಖಭಂಗವಾಗಿದೆ.

26

ಪಾಕಿಸ್ತಾನ ಸೂಪರ್ ಲೀಗ್ ಟೂರ್ನಿಯ ರಾವಲ್ಪಿಂಡಿ ಪಂದ್ಯಕ್ಕೂ ಮೊದಲು ಭಾರತದ ಡ್ರೋನ್ ಕ್ರೀಡಾಂಗಣಕ್ಕೆ ಬಡಿದಿತ್ತು. ಇಧರಿಂದ ಪಿಎಸ್ಎಲ್ ಪಂದ್ಯಕ್ಕೆ ಅಡ್ಡಿಯಾಗಿತ್ತು. ಯದ್ಧ ಬೀತಿ, ದಾಳಿ ಭೀತಿಯಿಂದ ಇದೀಗ ಪಾಕಿಸ್ತಾನ ಪಿಎಸ್ಎಲ್ ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಲು ಮುಂದಾಗಿದೆ. ಈ ಕುರಿತು ಯುಎಐ ಕ್ರಿಕೆಟ್ ಸಂಸ್ಥೆಯನ್ನು ಸಂಪರ್ಕಿಸಿ. ಆದರೆ ಈ ಬಾರಿ ಯಎಇ ಕೂಡ ಪಾಕಿಸ್ತಾನ ಜೊತೆಗೆ ನಿಲ್ಲಲು ತಯಾರಿಲ್ಲ.

36

ಪಾಕಿಸ್ತಾನದಲ್ಲಿ ಇತ್ತೀಚೆಗೆ ಕ್ರಿಕೆಟ್ ಆಯೋಜನೆಯಾಾಗುತ್ತಿದೆ. ಇದಕ್ಕೂ ಮೊದಲು ದುಬೈ ನೆಲವೇ ಪಾಕಿಸ್ತಾನದ ತವರಾಗಿತ್ತು. ಪಿಎಸ್ಎಲ್ ಸೇರಿದಂತೆ ಎಲ್ಲಾ ಪಾಕಿಸ್ತಾನದ ಟೂರ್ನಿಗಳು ದುಬೈನಲ್ಲೇ ಆಯೋಜನೆಯಾಗಿತ್ತು. ಇನ್ನು ಎರಡು ಕೂಡು ಮುಸ್ಲಿಮ್ ರಾಷ್ಟ್ರಗಳು. ಆದರೂ ಈ ಬಾರಿ  ಪಿಎಸ್ಎಲ್ ಟೂರ್ನಿ ಆತಿಥ್ಯಕ್ಕೆ ಹಿಂದೇಟು ಹಾಕಿದೆ ಎಂದು ವರದಿಯಾಗಿದೆ. 

46

ಯುಎಐ ಕ್ರಿಕೆಟ್ ಸಂಸ್ಥೆಗೆ ಪಾಕಿಸ್ತಾನದ ಟೂರ್ನಿ ಆಯೋಜಿಸುವ ಕುರಿತು ಹಿಂದೇಟು ಹಾಕಲು ಪ್ರಮುಖ ಕಾರಣ ಭಾರತ. ಯುಎಐ ಭಾರತದ ಜೊತೆ ಉತ್ತಮ ಸಂಬಂಧ ಹೊಂದಿದೆ. ಇದಕ್ಕೂ ಮುಖ್ಯವಾಗಿ ಯುಎಐಗೆ ಪಾಕಿಸ್ತಾನದ ಪಿಎಸ್‌ಎಲ್‌ಗೆ ಆತಿಥ್ಯ ನೀಡಿ, ಭಾರತ, ಐಸಿಸಿ ಸೇರಿದಂತೆ ಇತರ ಪಂದ್ಯಗಳಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗುವ ಆತಂಕವಿದೆ. ಹೀಗಾಗಿ ಪಿಎಸ್‌ಎಲ್‌ನಿಂದ ದೂರ ಉಳಿಯಲು ಮುಂದಾಗಿದೆ.

56

ಸದ್ಯ ಯುದ್ಧದ ಭೀತಿಯಲ್ಲಿ ಭಾರತ ಹಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಜುಜುಬಿ ಮೊತ್ತ ಹಾಗೂ  ಪಾಕಿಸ್ತಾನಕ್ಕೆ ನೆರವು ನೀಡಿದರೆ ಭಾರತದ ಆಕ್ರೋಶಕ್ಕೆ ಕಾರಣವಾಗಲಿದೆ. ಭಾರತ ಆಕ್ರೋಶಗೊಂಡರೆ ಮುಂದಿನ ದಿನಗಳಲ್ಲಿ ಅರಬ್ ರಾಷ್ಟ್ರದಲ್ಲಿ ಒಂದೇ ಒಂದು ಐಸಿಸಿ ಪಂದ್ಯವೂ ನಡೆಯಲ್ಲ, ಇತ್ತ ಭಾರತ ತನ್ನ ಯಾವುದೇ ಪಂದ್ಯವನ್ನು ತಟಸ್ಥ ಸ್ಥಳವಾಗಿ ಆಡಲು ಯುಎಐ ಆಯ್ಕೆ ಮಾಡಲ್ಲ. ಇದು ದುಬೈ ಕ್ರಿಕೆಟ್ ಆದಾಯದ ಮೇಲೆ, ಕ್ರಿಕೆಟ್ ಅಸ್ತಿತ್ವದ ಮೇಲೆ ಭಾರಿ ಪರಿಣಾಮ ಬೀರಲಿದೆ.

66

ಪಾಕಿಸ್ತಾನವನ್ನು ಬೆಂಬಲಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯನ್ನೇ ನಿಯಂತ್ರಿಸುವ ಭಾರತದ ಆಕ್ರೋಶಕ್ಕೆ ತುತ್ತಾಗಲಿದೆ. ಇಷ್ಟೇ ಅಲ್ಲ ಯುಎಐ ಕ್ರಿಕೆಟ್ ಸಂಪೂರ್ಣ ನಶಿಸಿ ಹೋಗಲಿದೆ. ಹೀಗಾಗಿ ಯುಎಐ ಪಾಕಿಸ್ತಾನಕ್ಕೆ ಕ್ರಿಕೆಟ್ ವಿಚಾರದಲ್ಲಿ ಬೆಂಬಲ ನೀಡದಿರಲು ಮುಂದಾಗಿದೆ. 2021ರ ಭಾರತದ ಟಿ20 ವಿಶ್ವಕಪ್ ಟೂರ್ನಿಯನ್ನು ದುಬೈ ಆಯೋಜಿಸಿತ್ತು. ಇನ್ನು ಪಾಕಿಸ್ತಾನ ಆಯೋಜಿಸಿದ 2025ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತದ ಪಂದ್ಯ ಹಾಗೂ ಫೈನಲ್ ಪಂದ್ಯವನ್ನು ದುಬೈ ಆಯೋಜಿಸಿತ್ತು.  ಪಾಕಿಸ್ತಾನಕ್ಕೆ ಬೆಂಬಲ ನೀಡಿದರೆ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳು ಯುಎಇನಿಂದ ದೂರ ಸರಿಯುವ ಆತಂಕ ಎದುರಿಸುತ್ತಿದೆ.

Read more Photos on
click me!

Recommended Stories