ನಿನ್ನೆ ಮ್ಯಾಚ್ ರದ್ದಾದ್ರೆ ಏನಂತೆ ಇಂದು ಆಡದೇ ಪ್ಲೇ ಆಫ್‌ಗೇರುತ್ತೆ ಆರ್‌ಸಿಬಿ! ಆದ್ರೆ ಒಂದು ಕಂಡೀಷನ್

Published : May 18, 2025, 01:43 PM IST

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಹೀಗಿರುವಾಗಲೇ ಆರ್‌ಸಿಬಿ-ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದು, ಪ್ಲೇ ಆಫ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಆದ್ರೆ ಇಂದು ಆರ್‌ಸಿಬಿ ತಂಡವು ಆಡದೇಯೇ ಪ್ಲೇ ಆಫ್‌ಗೇರುವ ಸಾಧ್ಯತೆಯಿದೆ. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
19
ನಿನ್ನೆ ಮ್ಯಾಚ್ ರದ್ದಾದ್ರೆ ಏನಂತೆ ಇಂದು ಆಡದೇ ಪ್ಲೇ ಆಫ್‌ಗೇರುತ್ತೆ ಆರ್‌ಸಿಬಿ! ಆದ್ರೆ ಒಂದು ಕಂಡೀಷನ್

ಬೆಂಗಳೂರಿನಲ್ಲಿ ಪುನರಾರಂಭಗೊಂಡ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯವು ನಿರಂತರವಾಗಿ ಸುರಿದ ಮಳೆಯಿಂದಾಗಿ ಪಂದ್ಯ ರದ್ದಾಗಿದೆ. ಇದು ಪ್ಲೇ ಆಫ್ ಲೆಕ್ಕಾಚಾರವನ್ನೇ ತಲೆಕೆಳಗೆ ಮಾಡಿವೆ.

29

ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಪಂದ್ಯ ಮಳೆಯಿಂದ ರದ್ದಾಗಿದ್ದರಿಂದ ಉಭಯ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಂಡಿವೆ. ಪಂದ್ಯ ರದ್ದಾಗಿದ್ದರಿಂದ ಹಾಲಿ ಚಾಂಪಿಯನ್ ಕೆಕೆಆರ್ ಪ್ಲೇ ಆಫ್‌ ರೇಸ್‌ನಿಂದ ಅಧಿಕೃತವಾಗಿ ಹೊರಬಿದ್ದಿದೆ.

39

ಇನ್ನೊಂದೆಡೆ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 12 ಪಂದ್ಯಗಳಲ್ಲಿ 8 ಗೆಲುವು, 3 ಸೋಲು ಹಾಗೂ ಒಂದು ರದ್ದಾದ ಪಂದ್ಯ ಸೇರಿದಂತೆ 17 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

49

ಆರ್‌ಸಿಬಿ 17 ಅಂಕ ಗಳಿಸಿದ್ದರೂ ಇನ್ನೂ ಪ್ಲೇ ಆಫ್ ಸ್ಥಾನ ಖಚಿತವಾಗಿಲ್ಲ. ಆರ್‌ಸಿಬಿ ಲೀಗ್ ಹಂತದಲ್ಲಿ ಇನ್ನೂ ಎರಡು ಪಂದ್ಯಗಳನ್ನಾಡುವುದು ಬಾಕಿ ಇದೆ. ಈ ಪೈಕಿ ಒಂದು ಪಂದ್ಯ ಗೆದ್ದರೂ ಅಧಿಕೃತವಾಗಿ ಪ್ಲೇ ಆಫ್‌ಗೇರಲಿದೆ.
 

59

ಆದರೆ ಇದಕ್ಕೂ ಮುನ್ನ ಸೂಪರ್ ಸಂಡೆಯಲ್ಲಿ ನಡೆಯಲಿರುವ ಎರಡು ಪಂದ್ಯಗಳಲ್ಲಿನ ಫಲಿತಾಂಶ ಆರ್‌ಸಿಬಿ ತಂಡವನ್ನು ಅನಾಯಾಸವಾಗಿ ಆಡದೆಯೂ ಪ್ಲೇ ಆಫ್‌ಗೇರಿಸಲಿದೆ. ಅದು ಹೇಗೆ ನೋಡೋಣ ಬನ್ನಿ.

69

1 ಇಂದು ನಡೆಯಲಿರುವ ರಾಜಸ್ಥಾನ ರಾಯಲ್ಸ್-ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಪಂಜಾಬ್ ಎದುರು ರಾಜಸ್ಥಾನ ರಾಯಲ್ಸ್‌ ಜಯಿಸಿದರೆ, ಆರ್‌ಸಿಬಿ ಅಧಿಕೃತವಾಗಿ ಪ್ಲೇ ಆಫ್‌ಗೇರಲಿದೆ. ಯಾಕೆಂದರೆ ಆಗ ಪ್ಲೇ ಆಫ್ ಕ್ವಾಲಿಫಿಕೇಷನ್‌ಗೆ 17 ಅಂಕ ಸಾಕಾಗಲಿದೆ.
 

79

2. ಇಂದು ನಡೆಯಲಿರುವ ಗುಜರಾತ್ ಟೈಟಾನ್ಸ್‌ - ಡೆಲ್ಲಿ ಕ್ಯಾಪಿಟಲ್ಸ್‌ ನಡುವಿನ ಪಂದ್ಯದಲ್ಲಿ ಗುಜರಾತ್ ಗೆಲುವು ಸಾಧಿಸಿದರೆ, ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಪ್ಲೇ ಆಫ್‌ಗೆ ಎಂಟ್ರಿಕೊಡಲಿವೆ. ಆಗ ಬಹುತೇಕ ಡೆಲ್ಲಿ ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣವಾಗಲಿದೆ.
 

89

3. ಒಂದು ವೇಳೆ ಇಂದು ಪಂಜಾಬ್ ಕಿಂಗ್ಸ್‌ ಹಾಗೂ ಗುಜರಾತ್ ಟೈಟಾನ್ಸ್‌ ತಂಡಗಳು ಗೆಲುವು ಸಾಧಿಸಿದರೆ, ಪಂಜಾಬ್ ಕಿಂಗ್ಸ್‌, ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್‌ ತಂಡಗಳು ಪ್ಲೇ ಆಫ್‌ಗೇರಲಿವೆ. ಆಗ ಡೆಲ್ಲಿ ಹಾಗೂ ಮುಂಬೈ ನಡುವೆ ಒಂದು ಸ್ಥಾನಕ್ಕಾಗಿ ಬಿಗ್ ಫೈಟ್ ನಡೆಯುವ ಸಾಧ್ಯತೆಯಿದೆ.

99
Team RCB. (Photo- IPL)

4 ಆದರೆ ಇವತ್ತಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ ಎದುರು ಪಂಜಾಬ್ ಕಿಂಗ್ಸ್‌ ಗೆದ್ದರೇ ಹಾಗೆ ಗುಜರಾತ್ ಟೈಟಾನ್ಸ್ ಎದುರು ಡೆಲ್ಲಿ ಕ್ಯಾಪಿಟಲ್ಸ್ ಗೆದ್ದರೇ, ಆರ್‌ಸಿಬಿ ಪ್ಲೇ ಆಫ್‌ಗೇರಲು ಮುಂದಿನ ಪಂದ್ಯದವರೆಗೂ ಕಾಯಬೇಕು. 

Read more Photos on
click me!

Recommended Stories