ಭಾರತ ಮತ್ತು ಪಾಕಿಸ್ತಾನದ ನಡುವಿನ ಮಿಲಿಟರಿ ಉದ್ವಿಗ್ನತೆಯಿಂದಾಗಿ ಸ್ಥಗಿತಗೊಂಡಿದ್ದ ಐಪಿಎಲ್ ಈಗ ಮತ್ತೆ ಆರಂಭವಾಗಿದೆ. ಈ ಸೀಸನ್ನಲ್ಲಿ ಹಲವು ಬ್ಯಾಟ್ಸ್ಮನ್ಗಳು ಅಬ್ಬರಿಸಿದ್ದಾರೆ.
Kannada
ಚೆಂಡುಗಳನ್ನು ಬೌಂಡರಿಗಳಾಚೆ ಅಟ್ಟಿದ ಬ್ಯಾಟರ್ಸ್
ಈ ಸೀಸನ್ನಲ್ಲಿ ಇಲ್ಲಿಯವರೆಗೆ ಅತಿ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ 5 ಬ್ಯಾಟ್ಸ್ಮನ್ಗಳ ಬಗ್ಗೆ ನಾವು ನಿಮಗೆ ತಿಳಿಸುತ್ತೇವೆ. ಇವರು ಚೆಂಡುಗಳನ್ನು ಮುಗಿಲೆತ್ತರಕ್ಕೆ ಅಟ್ಟಿದ್ದಾರೆ.
Kannada
1. ನಿಕೋಲಸ್ ಪೂರನ್
1ನೇ ಸ್ಥಾನದಲ್ಲಿ ಲಖನೌ ಸೂಪರ್ ಜೈಂಟ್ಸ್ನ ಅಪಾಯಕಾರಿ ಬ್ಯಾಟ್ಸ್ಮನ್ ನಿಕೋಲಸ್ ಪೂರನ್ ಇದ್ದಾರೆ. ಎಡಗೈ ಕೆರಿಬಿಯನ್ ಬ್ಯಾಟ್ಸ್ಮನ್ 11 ಪಂದ್ಯಗಳಲ್ಲಿ 34 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
Kannada
2. ಶ್ರೇಯಸ್ ಅಯ್ಯರ್
ಎರಡನೇ ಸ್ಥಾನದಲ್ಲಿ ಪಂಜಾಬ್ ಕಿಂಗ್ಸ್ನ ನಾಯಕ ಶ್ರೇಯಸ್ ಅಯ್ಯರ್ ಇದ್ದಾರೆ. ಈ ಬ್ಯಾಟ್ಸ್ಮನ್ 11 ಪಂದ್ಯಗಳಲ್ಲಿ 27 ಬಾರಿ ಚೆಂಡುಗಳನ್ನು ಆಕಾಶ ಮಾರ್ಗವಾಗಿ ಬೌಂಡರಿ ಗೆರೆಯಾಚೆ ದಾಟಿಸಿದ್ದಾರೆ
Kannada
3. ರಿಯಾನ್ ಪರಾಗ್
3ನೇ ಸ್ಥಾನದಲ್ಲಿ ರಾಜಸ್ಥಾನ ರಾಯಲ್ಸ್ನ ರಿಯಾನ್ ಪರಾಗ್ ಇದ್ದಾರೆ. ಪರಾಗ್ ಬೌಲರ್ಗಳಿಗೆ ಸವಾಲೊಡ್ಡಿದ್ದಾರೆ ಮತ್ತು 12 ಪಂದ್ಯಗಳಲ್ಲಿ 26 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
Kannada
4. ಸೂರ್ಯಕುಮಾರ್ ಯಾದವ್
ನಾಲ್ಕನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ನ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಇದ್ದಾರೆ. ಸೂರ್ಯಕುಮಾರ್ ಯಾದವ್ 12 ಪಂದ್ಯಗಳಲ್ಲಿ 26 ಬಾರಿ ಚೆಂಡನ್ನು ಮುಗಿಲೆತ್ತರದ ಸಿಕ್ಸರ್ಗಟ್ಟಿದ್ದಾರೆ.
Kannada
5. ಯಶಸ್ವಿ ಜೈಸ್ವಾಲ್
ಕೊನೆಯದಾಗಿ 5ನೇ ಸ್ಥಾನದಲ್ಲಿ ಎಡಗೈ ರಾಜಸ್ಥಾನಿ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಇದ್ದಾರೆ. ಯಶಸ್ವಿ 12 ಪಂದ್ಯಗಳಲ್ಲಿ 25 ಬಾರಿ ಚೆಂಡನ್ನು ನಕ್ಷತ್ರಮಂಡಲಕ್ಕೆ ಕಳುಹಿಸಿದ್ದಾರೆ.