Published : May 14, 2025, 05:10 PM ISTUpdated : May 15, 2025, 09:49 AM IST
ಮುಂದೂಡಿಕೆಯಾಗಿದ್ದ ಐಪಿಎಲ್ ಟೂರ್ನಿ ಮೇ.17ರಿಂದ ಆರಂಭಗೊಳ್ಳುತ್ತಿದೆ. ಸಂಖ್ಯಾಶಾಸ್ತ್ರದ ಪ್ರಕಾರ ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲುವ ಎಲ್ಲಾ ಸಾಧ್ಯತೆ ಇದೆ. ಇದಕ್ಕೆ ಕಾರಣ ಲಕ್ಕಿ ನಂಬರ್ 18. ಕೊಹ್ಲಿ ಜರ್ಸಿಯಿಂದ ಹಿಡಿದು, ಐಪಿಎಲ್ ಫೈನಲ್ ಸೇರಿದಂತೆ ಎಲ್ಲವೂ 18 ಆಗಿದೆ. ಆರ್‌ಸಿಬಿ ಈ ಬಾರಿ ಟ್ರೋಫಿ ಗೆಲ್ಲಲಿದೆ ಅನ್ನೋದಕ್ಕೆ ಸಂಖ್ಯಾಶಾಸ್ತ್ರ ನೀಡುತ್ತಿರುವ ಕಾರಣಗಳೇನು?
ಗಡಿ ಸಂಘರ್ಷ ಕಾರಣ ಮುಂದೂಡಿಕೆಯಾಗಿದ್ದ ಐಪಿಎಲ್ 2025 ಟೂರ್ನಿ ಮತ್ತೆ ಆರಂಭಗೊಳ್ಳುತ್ತಿದೆ. ಈ ಬಾರಿ ಆರ್‌ಸಿಬಿ ಪ್ರದರ್ಶನ ಉತ್ತಮವಾಗಿದೆ. ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆರ್‌ಸಿಬಿ ಪ್ಲೇಆಫ್ ಸ್ಥಾನ ಖಚಿತಪಡಿಸುವ ತವಕದಲ್ಲಿದೆ. ಇಲ್ಲೀವರೆಗಿನ ಪ್ರದರ್ಶನ ನೋಡಿದರೆ ಈ ಬಾರಿ ಆರ್‌ಸಿಬಿಗೆ ಟ್ರೋಫಿ ಗೆಲ್ಲುವ ಉತ್ತಮ ಅವಕಾಶವಿದೆ. ಇದೀಗ ಆರ್‌ಸಿಬಿಗೆ ಸಂಖ್ಯಾಶಾಸ್ತ್ರದ ಬಲವೂ ಸಿಕ್ಕಿದೆ.
26
ಭಾರತ ಪಾಕಿಸ್ತಾನ ಗಡಿ ಕಾರಣದಿಂದ ಐಪಿಲ್ 2025 ಟೂರ್ನಿ ಸ್ಥಗಿತಗೊಳಲಾಗಿತ್ತು. ಇದೀಗ ಟೂರ್ನಿ ಮೇ.17ರಿಂದ ಆರಂಭಗೊಳ್ಳುತ್ತಿದೆ. ಐಪಿಎಲ್ ಫೈನಲ್ ಇದೀಗ ಜೂನ್ 3ರಂದು ನಡೆಯಲಿದೆ. ಎಲ್ಲಾ ಸಂಖ್ಯೆಗಳು ಆರ್‌ಸಿಬಿ ಪರವಾಗಿದೆ. ಆರ್‌ಸಿಬಿ ಉತ್ತಮ ಪ್ರದರ್ಶನ ಜೊತೆಗೆ ಸಂಖ್ಯಾಶಾಸ್ತ್ರವೂ ಬಲ ನೀಡುತ್ತಿದೆ.
ಸಂಖ್ಯಾಶಾಸ್ತ್ರ, ಪ್ರದರ್ಶನ ಎಲ್ಲವೂ ಆರ್‌ಸಿಬಿ ಪರವಾಗಿದೆ. ಅತ್ಯುತ್ತಮ ಪ್ರದರ್ಶನ ಮೂಲಕ ಆರ್‌ಸಿಬಿ ಆಡಿದ 11 ಪಂದ್ಯದಲ್ಲಿ 8 ಪಂದ್ಯದಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯದಲ್ಲಿ ಸೋಲು ಕಂಡಿದೆ. 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಆರ್‌ಸಿಬಿ 2ನೇ ಸ್ಥಾನದಲ್ಲಿದೆ. ಮೇ.17ರಂದು ಆರ್‌ಸಿಬಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೆಕೆಆರ್ ವಿರುದ್ಧ ಪಂದ್ಯ ಆಡಲಿದೆ.
56
ಕಳೆದೆಲ್ಲಾ ಆವೃತ್ತಿಗಳಿಗಿಂತ ಈ ಬಾರಿ ಆರ್‌ಸಿಬಿಯಲ್ಲಿ ಮತ್ತೊಂದು ವಿಶೇಷತೆ ಇದೆ. ಈ ಬಾರಿ ಆರ್‌ಸಿಬಿ ತಂಡವಾಗಿ ಪ್ರದರ್ಶನ ನೀಡುತ್ತಿದೆ. ಕೊಹ್ಲಿಯನ್ನೇ ಅವಲಂಬಿಸಿರುವ ಪರಿಸ್ಥಿತಿಯಿಂದ ಹೊರಬಂದಿದೆ. ವಿರಾಟ್ ಕೊಹ್ಲಿ ಕೂಡ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಆದರೆ ಕೊಹ್ಲಿ ಜೊತೆಗೆ ಇತರರು ಉತ್ತಮ ಹೋರಾಟ ನೀಡುತ್ತಿದ್ದಾರೆ.
66
ಆರ್‌ಸಿಬಿಗೆ ಈ ಬಾರಿ ಎಲ್ಲವೂ ವರವಾಗಿದೆ. ಕಳೆದ 17 ಆವೃತ್ತಿಗಳಲ್ಲಿ ಆರ್‌ಸಿಬಿಗೆ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ. ಇದೇ ಮೊದಲ ಬಾರಿಗೆ ಟ್ರೋಫಿ ಗೆಲ್ಲುವ ಅವಕಾಶ ಆರ್‌ಸಿಬಿ ಮುಂದಿದೆ. ಇತ್ತ ಅಭಿಮಾನಿಗಳು ಟ್ರೋಫಿ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಆರ್‌ಸಿಬಿ ಟ್ರೋಫಿ ಗೆದ್ದರೆ ಐಪಿಎಲ್ ಇತಿಹಾಸದಲ್ಲಿ ಕಂಡು ಕೇಳರಿಯದ ಸಂಭ್ರಮಾಚರಣೆ ಅಭಿಮಮಾನಿಗಳು ಆಚರಿಸಲಿದ್ದಾರೆ.