ಐಪಿಎಲ್ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಖರೀದಿಸಲು ಈ 3 ತಂಡಗಳ ನಡುವೆ ಬಿಗ್ ಫೈಟ್?

First Published | Nov 12, 2024, 1:24 PM IST

2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆಟಗಾರರ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಟೀಂ ಇಂಡಿಯಾ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಈ ಮೂರು ತಂಡಗಳು ಬಿಗ್ ಫೈಟ್ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಬಹುನಿರೀಕ್ಷಿತ ಐಪಿಎಲ್ 2025ರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ  ನವೆಂಬರ್ 24, 25 ರಂದು ನಡೆಯಲಿದೆ. ಈಗಾಲೇ ಒಟ್ಟು 1574 ಕ್ರಿಕೆಟಿಗರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. 

ಇನ್ನು ಟೀಂ ಇಂಡಿಯಾದ ಸ್ವಿಂಗ್ ಸ್ಪೆಷಲಿಸ್ಟ್ ವೇಗಿ ಎನಿಸಿಕೊಂಡಿರುವ ಭುವನೇಶ್ವರ್ ಕುಮಾರ್ ಅವರನ್ನು ಅಚ್ಚರಿಯ ರೀತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಿಲೀಸ್ ಮಾಡಿದೆ. ಹೀಗಾಗಿ ಭುವಿ ಖರೀದಿಸಲು ಐಪಿಎಲ್‌ನ ಈ ಮೂರು ಫ್ರಾಂಚೈಸಿಗಳು ಹರಾಜಿನ ವೇಳೆ ಪೈಪೋಟಿ ನಡೆಸುವ ಸಾಧ್ಯತೆಯಿದೆ. 

Latest Videos


ಭುವನೇಶ್ವರ್ ಕುಮಾರ್

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಎಂದು ಗುರುತಿಸಿಕೊಂಡಿರುವ ಭುವನೇಶ್ವರ್ ಕುಮಾರ್, ಐಪಿಎಲ್ ನಲ್ಲಿ ಇದುವರೆಗೂ 176 ಪಂದ್ಯಗಳನ್ನಾಡಿ ಬರೋಬ್ಬರಿ 181 ವಿಕೆಟ್ ಪಡೆದಿದ್ದಾರೆ.

ಈಗಾಗಲೇ ದೀಪಕ್ ಚಹಾರ್ ಅವರನ್ನು ತಂಡದಿಂದ ಕೈಬಿಟ್ಟಿರುವ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಒಲವು ತೋರಿದೆ ಎಂದು ವರದಿಯಾಗಿದೆ. ಭುವಿ ಚೆನ್ನೈಗೆ ಉತ್ತಮ ಬೌಲಿಂಗ್ ಆಯ್ಕೆಯಾಗಬಲ್ಲರು. 

ಮುಂಬೈ & ಗುಜರಾತ್

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ಜತೆಗೆ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಕೂಡಾ ತನ್ನ ಬೌಲಿಂಗ್ ವಿಭಾಗವನ್ನು ಸದೃಢಗೊಳಿಸಿಕೊಳ್ಳಲು ಎದುರು ನೋಡುತ್ತಿದೆ. ಬುಮ್ರಾ ಜತೆಗೆ ಭುವಿಯನ್ನು ದಾಳಿಗಿಳಿಸುವ ಲೆಕ್ಕಾಚಾರದಲ್ಲಿರುವ ಮುಂಬೈ ಫ್ರಾಂಚೈಸಿ, ಹರಾಜಿನಲ್ಲಿ ಭುವಿಯನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ ಎನ್ನಲಾಗುತ್ತಿದೆ. 

ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಕೈಬಿಟ್ಟಿದ್ದು, ಅವರ ಬದಲಿಗೆ ಭುವನೇಶ್ವರ್ ಕುಮಾರ್ ಅವರಿಗೆ ಹರಾಜಿನಲ್ಲಿ ಗಾಳ ಹಾಕುವ ಸಾಧ್ಯತೆಯಿದೆ. ಚುಟುಕು ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವ ಹೊಂದಿರುವ ಭುವಿ, ಉತ್ತಮ ಮೊತ್ತಕ್ಕೆ ಹರಾಜಾಗುವ ಸಾಧ್ಯತೆಯಿದೆ. 

click me!