ಐಪಿಎಲ್ 18ನೇ ಸೀಸನ್ 2025ರಲ್ಲಿ ನಡೆಯಲಿದೆ. ಸೌದಿ ಅರೇಬಿಯಾದಲ್ಲಿ ಮೆಗಾ ಹರಾಜು ನಡೆಯುತ್ತಿದೆ. ಭಾನುವಾರದ ಹರಾಜಿನಲ್ಲಿ ಸ್ಟಾರ್ ಆಟಗಾರರು ದಾಖಲೆ ಬೆಲೆಗೆ ಮಾರಾಟವಾದ್ರು. ರಿಷಭ್ ಪಂತ್ 27 ಕೋಟಿಗೆ ಲಖನೌ ತಂಡಕ್ಕೆ, ಶ್ರೇಯಸ್ ಅಯ್ಯರ್ 26.75 ಕೋಟಿಗೆ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೇರ್ಪಡೆಯಾದ್ರು.
ವಾರ್ನರ್‌ಗೆ ಶಾಕ್
ಐಪಿಎಲ್‌ನ ಯಶಸ್ವಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ವಾರ್ನರ್‌ಗೆ ದೊಡ್ಡ ಶಾಕ್. ಯಾವ ಫ್ರಾಂಚೈಸಿಯೂ ಅವರನ್ನು ಕೊಂಡುಕೊಳ್ಳಲು ಆಸಕ್ತಿ ತೋರಿಸಲಿಲ್ಲ. ಎಡಗೈ ಬ್ಯಾಟರ್ ಡೇವಿಡ್ ವಾರ್ನರ್ ಐಪಿಎಲ್‌ನ ಯಶಸ್ವಿ ಓಪನ್ನರ್‌ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ
ಜೆಡ್ಡಾದಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾ ಆರಂಭಿಕ ಆಟಗಾರ ವಾರ್ನರ್ ಅವರನ್ನು ಯಾವ ತಂಡವೂ ಕೊಂಡುಕೊಳ್ಳಲಿಲ್ಲ. ಮೂರು ಬಾರಿ ಆರೆಂಜ್ ಕ್ಯಾಪ್ ಗೆದ್ದ ಏಕೈಕ ಬ್ಯಾಟ್ಸ್‌ಮನ್ ವಾರ್ನರ್. 2016ರಲ್ಲಿ ಆರ್‌ಸಿಬಿ ತಂಡವನ್ನು ಸೋಲಿಸಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದುಕೊಟ್ಟಿದ್ದರು.
ಕಳಪೆ ಫಾರ್ಮ್
ಕಳೆದ ಸೀಸನ್‌ನಲ್ಲಿ ಡೇವಿಡ್ ವಾರ್ನರ್ ಕಳಪೆ ಫಾರ್ಮ್‌ನಲ್ಲಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿದಿದ್ದ ಅವರು 8 ಪಂದ್ಯಗಳಲ್ಲಿ ಕೇವಲ 168 ರನ್ ಮಾಡಿದ್ದರು. ಸರಾಸರಿ ಕೇವಲ 21. ಎರಡನೇ ದಿನದ ಹರಾಜಿನಲ್ಲಿ ಡೇವಿಡ್ ವಾರ್ನರ್ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿದ್ದು, ಯಾವುದಾದರೂ ಫ್ರಾಂಚೈಸಿ ಖರೀದಿಸಲು ಒಲವು ತೋರುತ್ತದೆಯೇ ಕಾದು ನೋಡಬೇಕಿದೆ.
ಐಪಿಎಲ್‌ನಲ್ಲಿ ವಾರ್ನರ್ ಉತ್ತಮ ದಾಖಲೆ ಹೊಂದಿದ್ದಾರೆ.
38 ವರ್ಷದ ಡೇವಿಡ್ ವಾರ್ನರ್ 184 ಐಪಿಎಲ್ ಪಂದ್ಯಗಳಲ್ಲಿ 40.52 ಸರಾಸರಿಯಲ್ಲಿ 6565 ರನ್ ಗಳಿಸಿದ್ದಾರೆ. 4 ಶತಕ, 62 ಅರ್ಧಶತಕ ಸಿಡಿಸಿದ್ದಾರೆ. ವಾರ್ನರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್.