ನಾನು ಎಂದೆಂದಿಗೂ ಧೋನಿ ಅಭಿಮಾನಿ! ಟ್ರೋಲ್ ಮಾಡಿದವರಿಗೆ ರಾಯುಡು ತಿರುಗೇಟು!

Published : Apr 11, 2025, 09:09 AM ISTUpdated : Apr 11, 2025, 09:11 AM IST

ನಾನು ಯಾವಾಗಲೂ ಎಂ ಎಸ್ ಧೋನಿ ಅಭಿಮಾನಿ ಅಂತ ಸಿಎಸ್‌ಕೆ ಮಾಜಿ ಆಟಗಾರ ಅಂಬಟಿ ರಾಯುಡು ಹೇಳಿದ್ದಾರೆ. ಈ ಮೂಲಕ ಟ್ರೋಲ್ ಮಾಡಿದವರಿಗೆ ತಿರುಗೇಟು ಕೊಟ್ಟಿದ್ದಾರೆ.

PREV
16
ನಾನು ಎಂದೆಂದಿಗೂ ಧೋನಿ ಅಭಿಮಾನಿ! ಟ್ರೋಲ್ ಮಾಡಿದವರಿಗೆ ರಾಯುಡು ತಿರುಗೇಟು!

18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಟೂರ್ನಿ ಭರ್ಜರಿಯಾಗಿ ನಡೀತಿದೆ. 5 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಮಾತ್ರ ಕಳಪೆ ಆಟ ಆಡ್ತಿದೆ.

26
ಅಂಬಾಟಿ ರಾಯುಡು, ಎಂ.ಎಸ್. ಧೋನಿ

ಸಿಎಸ್‌ಕೆ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರೂ ಸರಿ ಇಲ್ಲ. ಇದು ಧೋನಿಗೆ ಕೊನೆ ಐಪಿಎಲ್ ಸೀಸನ್ ಆಗಿರಬಹುದು ಅಂತ ಹೇಳಲಾಗುತ್ತಿದೆ.

36
ಸಿಎಸ್‌ಕೆ, ಎಂ.ಎಸ್. ಧೋನಿ

ಧೋನಿಗೆ ವಯಸ್ಸಾಗಿದೆ, ಮೊದಲಿನಂತೆ ಧೋನಿ ಮ್ಯಾಚ್ ಫಿನಿಶರ್ ಮಾಡುತ್ತಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇಂತಹ ಟೀಕೆಗಳಿಗೆ ರಾಯುಡು ಖಡಕ್ ತಿರುಗೇಟು ನೀಡಿದ್ದಾರೆ.

 

46
ಐಪಿಎಲ್, ಸ್ಪೋರ್ಟ್ಸ್ ನ್ಯೂಸ್

ನಾನು ಧೋನಿ ಅಭಿಮಾನಿಯಾಗಿದ್ದೆ, ಧೋನಿ ಅಭಿಮಾನಿಯಾಗಿ ಆಗಿರುವೆ, ಯಾವತ್ತೂ ಧೋನಿ ಅಭಿಮಾನಿಯಾಗಿರ್ತೀನಿ ಅಂತ ರಾಯುಡು ಹೇಳಿದ್ದಾರೆ.

56

ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೊನೆಯ ಬಾರಿಗೆ ಐಪಿಎಲ್ ಟ್ರೋಫಿ ಜಯಿಸಿದಾಗ ಅಂಬಟಿ ರಾಯುಡು ಸಿಎಸ್‌ಕೆ ತಂಡದಲ್ಲಿದ್ದರು. ಸಿಎಸ್‌ಕೆ ಟ್ರೋಫಿ ಗೆಲ್ಲುತ್ತಿದ್ದಂತೆ ಧೋನಿ, ಟ್ರೋಫಿಯನ್ನು ಅಂಬಟಿ ರಾಯುಡು ಅವರಿಂದ ಸ್ವೀಕರಿಸುವಂತೆ ಮಾಡಿದ್ದರು.

66
Ambati Rayudu-Dhoni

ಇದೀಗ ಋತುರಾಜ್ ಗಾಯಕ್ವಾಡ್, ಗಾಯದ ಸಮಸ್ಯೆಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇನ್ನುಳಿದ ಐಪಿಎಲ್ ಪಂದ್ಯದಲ್ಲಿ ಧೋನಿ ನಾಯಕನಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನಾದರೂ ಸಿಎಸ್‌ಕೆ ಅಧೃಷ್ಟ ಬದಲಾಗುತ್ತಾ ಕಾದು ನೋಡಬೇಕಿದೆ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories