ಶಿವಂ ದುಬೆ-ಅಂಜುಂ ಖಾನ್ ಮದುವೆಗೆ ಸ್ವತಃ ಪೋಷಕರೇ ಒಪ್ಪಿರಲಿಲ್ಲ..! ಇಲ್ಲಿದೆ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

Published : Mar 27, 2024, 11:51 AM IST

ಬೆಂಗಳೂರು: ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್ರೌಂಡರ್ ಶಿವಂ ದುಬೆ ಹಾಗು ಅಂಜುಂ ಖಾನ್ ಲವ್ ಸ್ಟೋರಿ ಬಹುತೇಕ ಮಂದಿಗೆ ಗೊತ್ತಿಲ್ಲ. ಇಲ್ಲಿದೆ ನೋಡಿ ಹಿಂದೂ-ಮುಸ್ಲಿಂ ಜೋಡಿಯ ಇಂಟ್ರೆಸ್ಟಿಂಗ್ ಲವ್ ಸ್ಟೋರಿ.  

PREV
18
ಶಿವಂ ದುಬೆ-ಅಂಜುಂ ಖಾನ್ ಮದುವೆಗೆ ಸ್ವತಃ ಪೋಷಕರೇ ಒಪ್ಪಿರಲಿಲ್ಲ..! ಇಲ್ಲಿದೆ ಇಂಟ್ರೆಸ್ಟಿಂಗ್ ಲವ್ ಸ್ಟೋರಿ

ಎಡಗೈ ಸ್ಪೋಟಕ ಬ್ಯಾಟರ್ ಶಿವಂ ದುಬೆ ಮೈದಾನಕ್ಕಿಳಿದರೆಂದರೆ ಅಲ್ಲಿ ಬೌಂಡರಿ ಸಿಕ್ಸರ್‌ಗಳಿಗೇನೂ ಕೊರತೆ ಇರುವುದಿಲ್ಲ. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲೆರಡು ಪಂದ್ಯಗಳಲ್ಲೂ ಶಿವಂ ದುಬೆ ಬ್ಯಾಟ್ ಘರ್ಜಿಸಿದೆ.

28

2023ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗುವಲ್ಲಿ ಶಿವಂ ದುಬೆ ಮಹತ್ವದ ಪಾತ್ರ ವಹಿಸಿದ್ದರು. ದುಬೆ ಸಿಎಸ್‌ಕೆ ತಂಡ ಕೂಡಿಕೊಂಡ ಬಳಿಕ ಅವರ ಅದೃಷ್ಟ ಕೂಡಾ ಬದಲಾಗಿ ಹೋಗಿದೆ.

38

ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಎದುರು ಮಿಂಚಿದ್ದ ದುಬೆ, ಇದೀಗ ಗುಜರಾತ್ ಟೈಟಾನ್ಸ್ ಎದುರು ಕೂಡಾ ಆಕರ್ಷಕ ಅರ್ಧಶತಕ ಸಿಡಿಸಿ ಸಿಎಸ್‌ಕೆ ಗೆಲುವಿನ ರೂವಾರಿ ಎನಿಸಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡರು.

48

ಶಿವಂ ದುಬೆಯವರ ಕ್ರಿಕೆಟ್ ಆಟದಷ್ಟೇ ಇಂಟ್ರೆಸ್ಟಿಂಗ್ ಆಗಿದೆ ಅವರ ಲವ್ ಸ್ಟೋರಿ. ಶಿವಂ ದುಬೆ 2021ರ ಜುಲೈನಲ್ಲಿ ಬಹುಕಾಲದ ಗೆಳತಿ ಅಂಜುಂ ಖಾನ್ ಅವರನ್ನು ಅದ್ಧೂರಿಯಾಗಿಯೇ ಮದುವೆಯಾದರು

58

ಶಿವಂ ದುಬೆ ಹಿಂದೂ ಆದರೆ ಅಂಜುಂ ಖಾನ್ ಮುಸ್ಲಿಂ. ಹೀಗಾಗಿ ಎರಡೂ ಸಂಪ್ರದಾಯದ ರೀತಿಯಲ್ಲಿ ಮದುವೆಯಾದರು. ಅವರ ಮದುವೆಯು ಧಾರ್ಮಿಕ ಭಿನ್ನಾಭಿಪ್ರಾಯವನ್ನು ಮೀರಿದ ಸಾಂಸ್ಕೃತಿಕ ಶ್ರೀಮಂತಿಗೆ ಸಾಕ್ಷಿಯಾಯಿತು.

68

ಶಿವಂ ದುಬೆ ಹಾಗೂ ಅಂಜುಂ ಖಾನ್ ಮದುವೆಯಾಗುವ ಮುನ್ನ ಕೆಲ ವರ್ಷಗಳಿಂದ ಡೇಟಿಂಗ್ ನಡೆಸಿದ್ದರು. ಆದರೆ ಇವರಿಬ್ಬರೂ ಡೇಟಿಂಗ್ ನಡೆಸುತ್ತಿದ್ದ ವಿಚಾರ ಯಾರ ಕಿವಿಗೂ ತಲುಪಿರಲಿಲ್ಲ. ಆರಂಭದಲ್ಲಿ ಇವರಿಬ್ಬರ ಪೋಷಕರು ಕೂಡಾ ಈ ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ.

78

ಅಂಜುಂ ಖಾನ್ ಉತ್ತರ ಪ್ರದೇಶ ಮೂಲದವರಾಗಿದ್ದು, ವೃತ್ತಿಪರ ಮಾಡೆಲ್ ಹಾಗೂ ಕಿರುತೆರೆ ನಟಿಯಾಗಿದ್ದವರು. ಅಂಜುಂ ಖಾನ್ ಈ ಮೊದಲು ಹಿಂದಿ ಸೀರಿಯಲ್ ಹಾಗೂ ಕೆಲವು ಮ್ಯೂಸಿಕ್ ಆಲ್ಬಂಗಳಲ್ಲಿ ಕಾಣಿಸಿಕೊಂಡಿದ್ದರು.

88

ಶಿವಂ ದುಬೆ ಹಾಗೂ ಅಂಜುಂ ಖಾನ್ ತಾವು ಮದುವೆಯಾಗುವ ವಿಚಾರವನ್ನು ಬಹಿರಂಗಪಡಿಸಿದಾಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವ್ಯಾಪಕ ಟೀಕೆಗೆ ವ್ಯಕ್ತವಾಗಿತ್ತು. ಆದರೆ ಅವರ ಕುಟುಂಬ ಇವರ ಮದುವೆಗೆ ಬೆಂಬಲವಾಗಿ ನಿಂತರು. ಹಾಗಾಗಿ ಏನೂ ಸಮಸ್ಯೆಯಾಗಲಿಲ್ಲ.

Read more Photos on
click me!

Recommended Stories