ನಿಕಿತಾ ಕೈಕೊಟ್ಟಾಗ ಸಿಕ್ಕಿದ್ದೇ ದೀಪಿಕಾ: ಇಲ್ಲಿದೆ ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ...!

Published : Mar 26, 2024, 04:34 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅನುಭವಿ ಕ್ರಿಕೆಟಿಗ, ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಯಾರಿಗೆ ಗೊತ್ತಿಲ್ಲ ಹೇಳಿ. ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಅವರದ್ದು ಸೆಲಿಬ್ರಿಟಿ ಜೋಡಿಗಳಲ್ಲಿ ಒಂದು ಎನಿಸಿದೆ. ನಾವಿಂದು ಡಿಕೆ-ದೀಪಿಕಾ ಲವ್‌ ಸ್ಟೋರಿ ಬಗ್ಗೆ ತಿಳಿಯೋಣ ಬನ್ನಿ.  

PREV
111
ನಿಕಿತಾ ಕೈಕೊಟ್ಟಾಗ ಸಿಕ್ಕಿದ್ದೇ ದೀಪಿಕಾ: ಇಲ್ಲಿದೆ ದಿನೇಶ್ ಕಾರ್ತಿಕ್-ದೀಪಿಕಾ ಪಲ್ಲಿಕಲ್ ಇಂಟ್ರೆಸ್ಟಿಂಗ್ ಲವ್‌ ಸ್ಟೋರಿ...!

ಆರ್‌ಸಿಬಿ ತಾರೆ ದಿನೇಶ್ ಕಾರ್ತಿಕ್, 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸ್ಪೋಟಕ ಮ್ಯಾಚ್ ಫಿನಿಶರ್ ಆಗಿ ಗಮನ ಸೆಳೆಯುತ್ತಿದ್ದಾರೆ. ಡಿಕೆ ಆಟದಷ್ಟೇ ಮಜವಾಗಿದೆ ಅವರ ಲವ್ ಸ್ಟೋರಿ

211

ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹಾಗೂ ಸ್ಕ್ವಾಶ್ ಪಟು ದೀಪಿಕಾ ಪಲ್ಲಿಕಲ್ ಅವರ ಲವ್ ಸ್ಟೋರಿ ಯಾವ ಸಿನಿಮಾ ಲವ್ ಸ್ಟೋರಿಗಿಂತ ಕಡಿಮೆಯಿಲ್ಲ. ಈ ಕ್ರೀಡಾ ಸೆಲಿಬ್ರಿಟಿ ಜೋಡಿಯ ಲವ್ ಸ್ಟೋರಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

311

ದಿನೇಶ್ ಕಾರ್ತಿಕ್‌ಗೆ ಸ್ಕ್ವಾಶ್ ಪಟು ದೀಪಿಕಾ ಪಲ್ಲಿಕಲ್ ಎರಡನೇ ಹೆಂಡತಿ ಎನ್ನುವುದು ಬಹುತೇಕ ಮಂದಿಗೆ ಗೊತ್ತಿಲ್ಲ. ಮೊದಲ ಹೆಂಡತಿ ಡಿಕೆಗೆ ಕೈಕೊಟ್ಟಗ, ಸಂಕಷ್ಟದಲ್ಲಿದ್ದಾಗ ಜತೆಯಾದವರು ದೀಪಿಕಾ ಪಲ್ಲಿಕಲ್.

411

ಹೌದು, ದೀಪಿಕಾ ಪಲ್ಲಿಕಲ್ ಸಿಗುವ ಮುನ್ನ ದಿನೇಶ್ ಕಾರ್ತಿಕ್ ನಿಕಿತಾ ಎನ್ನುವ ಗೆಳತಿಯನ್ನು ಮದುವೆಯಾಗಿದ್ದರು. ಆದರೆ ದಿನೇಶ್ ಕಾರ್ತಿಕ್ ಪತ್ನಿಯನ್ನು ಸಹ ಆಟಗಾರನಾಗಿದ್ದ ಮುರುಳಿ ವಿಜಯ್ ಲವ್ ಮಾಡಿದರು. ಪರಿಣಾಮ ನಿಕಿತಾ, 2012ರಲ್ಲಿ ದಿನೇಶ್ ಕಾರ್ತಿಕ್ ಅವರಿಂದ ಬೇರೆಯಾಗಿ ಮುರುಳಿ ವಿಜಯ್ ಕೈ ಹಿಡಿದರು.

511

ಇನ್ನು ಕ್ರೀಡೆಯ ಬಗ್ಗೆ ಅರಿವು ಇರುವವರಿಗೆ ದೀಪಿಕಾ ಪಲ್ಲಿಕಲ್ ಯಾರು ಎನ್ನುವುದು ಗೊತ್ತಾ ಎಂದು ಕೇಳಿದರೆ ಸಿಲ್ಲಿ ಎನಿಸಬಹುದು. ಹೌದು, ದೀಪಿಕಾ ಪಲ್ಲಿಕಲ್ ಭಾರತದ ತಾರಾ ಸ್ಕ್ವಾಶ್ ಆಟಗಾರ್ತಿ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೀಪಿಕಾ ಸ್ಕ್ವಾಶ್ ಕ್ರೀಡೆಯಲ್ಲಿ ಭಾರತಕ್ಕೆ ಪದಕ ಗೆದ್ದುಕೊಟ್ಟಿರುವ ಆಟಗಾರ್ತಿ.

611

ದಿನೇಶ್ ಕಾರ್ತಿಕ್ ಮೊದಲ ಪತ್ನಿ ನಿಕಿತಾ ಕೈಕೊಟ್ಟಾಗ, ಡಿಕೆಗೆ ಸಿಕ್ಕ ಗೆಳತಿಯೇ ಈ ದೀಪಿಕಾ ಪಲ್ಲಿಕಲ್. 2012ರಲ್ಲಿ ಜಿಮ್‌ನಲ್ಲಿ ಒಬ್ಬರೇ ಟ್ರೈನರ್ ಬಳಿ ದೀಪಿಕಾ ಹಾಗೂ ದಿನೇಶ್ ಅಭ್ಯಾಸ ನಡೆಸುತ್ತಿದ್ದರು.

711

ಸ್ವತಃ ಕ್ರೀಡಾಪಟುವಾಗಿದ್ದರೂ ಸಹಾ ದೀಪಿಕಾ ಪಲ್ಲಿಕಲ್‌ಗೆ ಕ್ರಿಕೆಟ್ ಹಾಗೂ ಕ್ರಿಕೆಟಿಗರ ಬಗ್ಗೆ ಅಷ್ಟೇ ಪರಿಚಯ ಇರಲಿಲ್ಲ. ಹೀಗಿರುವಾಗ ಜಿಮ್‌ನಲ್ಲಿ ಈ ಜೋಡಿ ಮೊದಲ ಬಾರಿಗೆ ಪರಿಚಯವಾಯಿತು.

811

ಇನ್ನು 2013ರಲ್ಲಿ ದಿನೇಶ್ ಕಾರ್ತಿಕ್ ಅವರು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಟೂರ್ನಿಯೊಂದರಲ್ಲಿ ಪಾಲ್ಗೊಂಡಿದ್ದ ದೀಪಿಕಾ ಪಲ್ಲಿಕಲ್ ಅವರನ್ನು ಭೇಟಿಯಾಗಲು ಭಾರತದಿಂದ ಯುಕೆಗೆ ಹಾರಿದ್ದರು. ಇದು ದೀಪಿಕಾ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. 

911

ಇದಾದ ಬಳಿಕ 2013ರಲ್ಲೇ ದಿನೇಶ್ ಕಾರ್ತಿಕ್, ದೀಪಿಕಾಗೆ ಲವ್ ಪ್ರಪೋಸ್ ಮಾಡಿದರು. ಮೊದಲಿನಿಂದ ಡಿಕೆ ಪರಿಚಯವಿದ್ದಿದ್ದರಿಂದ ದೀಪಿಕಾ ಪಲ್ಲಿಕಲ್  ಸಮ್ಮತಿ ಸೂಚಿಸಿದರು. ಇದಾದ ಕೆಲವೇ ದಿನಗಳಲ್ಲಿ ಈ ಇಬ್ಬರು ಜೋಡಿ ಎಂಗೇಜ್ ಆದರು.

1011

2013ರಲ್ಲೇ ಈ ಜೋಡಿ ಎಂಗೇಜ್ ಆದರೂ ಸಹ, ಇಬ್ಬರೂ ತಮ್ಮ ತಮ್ಮ ವೃತ್ತಿಪರ ಕ್ರೀಡೆಯಲ್ಲಿ ಬ್ಯುಸಿಯಾಗಿದ್ದರಿಂದ ಬರೋಬ್ಬರಿ ಎರಡು ವರ್ಷಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

1111

ಇದೀಗ ದಿನೇಶ್ ಕಾರ್ತಿಕ್ ಹಾಗೂ ದೀಪಿಕಾ ಪಲ್ಲಿಕಲ್ ಇಬ್ಬರು ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿಯಾಗಿದ್ದಾರೆ. ಈ ಜೋಡಿ ಇದೀಗ ಸುಂದರ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿ ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶ ಕೂಡಾ ಮಾಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories