ಪಂಜಾಬ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ತಂಡದಲ್ಲಿಂದು ಮೇಜರ್ ಚೇಂಜ್..! ಇಲ್ಲಿದೆ ಸಂಭಾವ್ಯ ತಂಡ

First Published Mar 25, 2024, 4:14 PM IST

ಬೆಂಗಳೂರು: 2024ನೇ ಐಪಿಎಲ್ ಟೂರ್ನಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಮುಗ್ಗರಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇದೀಗ ತವರಿನಲ್ಲಿ ಮೊದಲ ಪಂದ್ಯವನ್ನಾಡಲು ಸಜ್ಜಾಗಿದೆ. ಈ ಪಂದ್ಯದಲ್ಲಿ ಆರ್‌ಸಿಬಿ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿಂದು ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ.

1. ಫಾಫ್ ಡು ಪ್ಲೆಸಿಸ್:

ಆರ್‌ಸಿಬಿ ತಂಡದ ನಾಯಕ ಫಾಪ್ ಡು ಪ್ಲೆಸಿಸ್, ಚೆನ್ನೈ ಸೂಪರ್ ಕಿಂಗ್ಸ್ ಎದುರು ಸ್ಪೋಟಕ 35 ರನ್ ಸಿಡಿಸಿದ್ದರು. ಇದೀಗ ತವರಿನ ಮೈದಾನದಲ್ಲೂ ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
 

2. ವಿರಾಟ್ ಕೊಹ್ಲಿ:

ಆರ್‌ಸಿಬಿ ತಂಡದ ರನ್ ಮಷೀನ್ ವಿರಾಟ್ ಕೊಹ್ಲಿ ಮೊದಲ ಪಂದ್ಯದಲ್ಲಿ ಮಂದಗತಿಯಲ್ಲಿ ಬ್ಯಾಟಿಂಗ್ ನಡೆಸಿದ್ದರು. ಬೆಂಗಳೂರಿನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಕೊಹ್ಲಿ ದೊಡ್ಡ ಮೊತ್ತ ಕಲೆಹಾಕುವ ವಿಶ್ವಾಸದಲ್ಲಿದ್ದಾರೆ.
 

3. ರಜತ್ ಪಾಟೀದಾರ್:

ಕಳೆದ ಪಂದ್ಯದಲ್ಲಿ ಪಾಟೀದಾರ್ ಶೂನ್ಯ ಸುತ್ತಿ ನಿರಾಸೆ ಅನುಭವಿಸಿದ್ದರು. ಇದೀಗ ಫಾರ್ಮ್‌ಗೆ ಮರಳಲು ಬೆಂಗಳೂರಿನಲ್ಲಿ ರಜತ್‌ಗೆ ಉತ್ತಮ ಅವಕಾಶವಾಗಿದ್ದು, ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದ್ದಾರೆ.
 

4. ಗ್ಲೆನ್ ಮ್ಯಾಕ್ಸ್‌ವೆಲ್:

ಆಸೀಸ್ ಮೂಲದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಚೆನ್ನೈ ಎದುರು ಖಾತೆ ತೆರೆಯಲು ವಿಫಲವಾಗಿದ್ದರು. ಇದೀಗ ಚಿನ್ನಸ್ವಾಮಿ ಮೈದಾನದಲ್ಲಿ ಸ್ಪೋಟಕ ಬ್ಯಾಟಿಂಗ್ ಆಡಲು ಮ್ಯಾಕ್ಸಿ ಸಜ್ಜಾಗಿದ್ದಾರೆ.
 

5. ಕ್ಯಾಮರೋನ್ ಗ್ರೀನ್:

ಆಸೀಸ್ ಮೂಲದ ಮತ್ತೋರ್ವ ಆಲ್ರೌಂಡರ್ ಗ್ರೀನ್ ಕೂಡಾ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ಬೌಲಿಂಗ್‌ನಲ್ಲಿ 2 ವಿಕೆಟ್ ಕಬಳಿಸಿದ್ದರು. ಆರ್‌ಸಿಬಿ ತಂಡವು ಗ್ರೀನ್ ಅವರಿಂದ ಆಲ್ರೌಂಡ್ ಆಟ ನಿರೀಕ್ಷಿಸುತ್ತಿದೆ.
 

6. ದಿನೇಶ್ ಕಾರ್ತಿಕ್:

ಅನುಭವಿ ಕ್ರಿಕೆಟಿಗ ಹಾಗೂ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿರುವ ಡಿಕೆ, ಚೆನ್ನೈನಲ್ಲಿ ಅಜೇಯ 38 ರನ್ ಸಿಡಿಸಿದ್ದರು. ದಿನೇಶ್ ಕಾರ್ತಿಕ್ ಫಾರ್ಮ್‌ ಆರ್‌ಸಿಬಿ ತಂಡಕ್ಕೆ ಬಹು ಮುಖ್ಯ ಎನಿಸಿದೆ.
 

7. ಅನೂಜ್ ರಾವತ್(ವಿಕೆಟ್ ಕೀಪರ್):

ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ಅನೂಜ್ ರಾವತ್, ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಎದುರು ಕೇವಲ 25 ಎಸೆತಗಳಲ್ಲಿ 48 ರನ್ ಸಿಡಿಸಿದ್ದರು. ರಾವತ್ ಇದೀಗ ಅದೇ ಲಯ ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದ್ದಾರೆ.
 

8. ಮಯಾಂಕ್ ದಾಗರ್:

ಬೌಲಿಂಗ್ ಆಲ್ರೌಂಡರ್ ದಾಗರ್, ಮೊದಲ ಪಂದ್ಯದಲ್ಲಿ ಎರಡು ಓವರ್ ಬೌಲಿಂಗ್ ಮಾಡಿ ಕೇವಲ 6 ರನ್ ಮಾತ್ರ ನೀಡಿದ್ದರು. ಬೆಂಗಳೂರಿನಲ್ಲಿ ದಾಗರ್ ಜವಾಬ್ದಾರಿಯುತ ಆಟ ಆಡಲು ಸಜ್ಜಾಗಿದ್ದಾರೆ.
 

9. ಲಾಕಿ ಫರ್ಗ್ಯೂಸನ್:

ಮೊದಲ ಪಂದ್ಯದಲ್ಲಿ ಅಲ್ಜಾರಿ ಜೋಸೆಫ್ ಕೊಂಚ ದುಬಾರಿಯಾಗಿದ್ದರು. ಹೀಗಾಗಿ ಇಂದು ಕಿವೀಸ್ ಅನುಭವಿ ವೇಗಿ ಲಾಕಿ ಫರ್ಗ್ಯೂಸನ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದೆ.
 

10. ಕರ್ಣ್ ಶರ್ಮಾ:

ಆರ್‌ಸಿಬಿ ತಜ್ಞ ಸ್ಪಿನ್ನರ್ ಕರ್ಣ್ ಶರ್ಮಾ, ಸಿಎಸ್‌ಕೆ ಎದುರು ಎರಡು ಓವರ್ ಬೌಲಿಂಗ್ ಮಾಡಿ 24 ರನ್ ನೀಡಿ ಒಂದು ವಿಕೆಟ್ ಕಬಳಿಸಿದ್ದರು. ಇಂದು ಇನ್ನಷ್ಟು ಉತ್ತಮ ಬೌಲಿಂಗ್ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
 

11. ಮೊಹಮ್ಮದ್ ಸಿರಾಜ್:

ಆರ್‌ಸಿಬಿ ವೇಗದ ದಾಳಿಯನ್ನು ಮುನ್ನಡೆಸುತ್ತಿರುವ ಸಿರಾಜ್ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಕಳೆದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ಸಿರಾಜ್, ಇಂದು ತವರಿನಲ್ಲಿ ಮಾರಕ ದಾಳಿ ನಡೆಸಲು ಎದುರು ನೋಡುತ್ತಿದ್ದಾರೆ.
 

click me!