IPL 2024 ಆರ್‌ಸಿಬಿ-ಚೆನ್ನೈ ತಂಡಗಳ ಪ್ಲೇ ಆಫ್ ಚಾನ್ಸ್ ಎಷ್ಟಿದೆ..? ಭವಿಷ್ಯ ನುಡಿದ ಸ್ಟಾರ್ ಸ್ಪೋರ್ಟ್ಸ್

First Published | May 16, 2024, 5:00 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಿರ್ಣಾಯಕ ಘಟ್ಟದತ್ತ ಸಾಗುತ್ತಿದೆ. ಹೀಗಿರುವಾಗಲೇ ದಿನದಿಂದ ಪ್ಲೇ ಆಫ್ ಲೆಕ್ಕಾಚಾರ ಜೋರಾಗುತ್ತಿದೆ. ಹೀಗಿರುವಾಗ ಯಾವ ತಂಡಕ್ಕೆ ಪ್ಲೇ ಆಫ್‌ಗೇರಲು ಎಷ್ಟು % ಅವಕಾಶವಿದೆ ನೋಡೋಣ ಬನ್ನಿ.
 

17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಈಗಾಗಲೇ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಈಗಾಗಲೇ ತಮ್ಮ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿವೆ.

ಇನ್ನುಳಿದ ಎರಡು ಸ್ಥಾನಕ್ಕಾಗಿ 5 ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.

Tap to resize

ಉಳಿದೆಲ್ಲಾ ತಂಡಗಳಿಗೆ ಹೋಲಿಸಿದರೆ, ಪ್ಯಾಟ್ ಕಮಿನ್ಸ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್‌ ಅವಕಾಶ ಹೆಚ್ಚಿದೆ. ಸನ್‌ರೈಸರ್ಸ್ ಹೈದರಾಬಾದ್ ತಂಡವು ಎರಡು ಪಂದ್ಯಗಳ ಪೈಕಿ ಒಂದು ಪಂದ್ಯ ಜಯಿಸಿದರೂ ಪ್ಲೇ ಆಫ್‌ಗೆ ಅಧಿಕೃತವಾಗಿ ಲಗ್ಗೆಯಿಡಲಿದೆ.

ಹೀಗಾಗಿ ಕೊನೆಯ ಒಂದು ಸ್ಥಾನಕ್ಕಾಗಿ ಉಳಿದ 4 ತಂಡಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಡಲಿದೆ. ಈ ಕಾರಣಕ್ಕಾಗಿ ಪ್ಲೇ ಆಫ್ ಪ್ರವೇಶಿಸುವ ದೃಷ್ಟಿಯಿಂದ ನೆಟ್‌ ರನ್‌ರೇಟ್‌ ಮಹತ್ವದ್ದೆನಿಸಿದೆ.

ಐಪಿಎಲ್ 2024ರ ಅಧಿಕೃತ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಪ್ಲೇ ಆಫ್‌ ಅವಕಾಶ 87.3% ಇದೆ ಎಂದು ತಿಳಿಸಿದೆ.

ಸನ್‌ರೈಸರ್ಸ್ ಹೈದರಾಬಾದ್ ಬಳಿಕ ಋತುರಾಜ್ ಗಾಯಕ್ವಾಡ್ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಕೂಡಾ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದೆ.

ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್‌ಸಿಬಿ ತಂಡಗಳು ತಲಾ 13 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 7 ಸಹಿತ 12 ಅಂಕ ಗಳಿಸಿವೆ. ಮೇ 18ರಂದು ನಡೆಯಲಿರುವ ನಡೆಯಲಿರುವ ಪಂದ್ಯವು ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿದೆ.

ಹೀಗಿದ್ದೂ ನೆಟ್ ರನ್‌ರೇಟ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ್ದು ಉತ್ತಮವಾಗಿದ್ದು, ಹೀಗಾಗಿ ಸ್ಟಾರ್ ಸ್ಪೋರ್ಟ್ಸ್ ಪ್ರಕಾರ ಸಿಎಸ್‌ಕೆ ಪ್ಲೇ ಆಫ್ ಚಾನ್ಸ್ 72.7% ಆಗಿದ್ದರೇ, ಆರ್‌ಸಿಬಿ ಪ್ಲೇ ಆಫ್ ಚಾನ್ಸ್ 39.3% ಆಗಿದೆ.

ಹೀಗಿದ್ದೂ ನೆಟ್ ರನ್‌ರೇಟ್ ಚೆನ್ನೈ ಸೂಪರ್‌ ಕಿಂಗ್ಸ್ ತಂಡದ್ದು ಉತ್ತಮವಾಗಿದ್ದು, ಹೀಗಾಗಿ ಸ್ಟಾರ್ ಸ್ಪೋರ್ಟ್ಸ್ ಪ್ರಕಾರ ಸಿಎಸ್‌ಕೆ ಪ್ಲೇ ಆಫ್ ಚಾನ್ಸ್ 72.7% ಆಗಿದ್ದರೇ, ಆರ್‌ಸಿಬಿ ಪ್ಲೇ ಆಫ್ ಚಾನ್ಸ್ 39.3% ಆಗಿದೆ.

Latest Videos

click me!