1. ಚೆನ್ನೈ:
ಹಾಲಿ ಚಾಂಪಿಯನ್ ಚೆನ್ನೈ ಹೆಚ್ಚೂ ಕಡಿಮೆ ಕಳೆದ ಬಾರಿ ತಂಡವನ್ನೇ ಉಳಿಸಿಕೊಂಡಿದೆ. ಇದರ ಹೊರತಾಗಿಯೂ ತಂಡಕ್ಕೆ ಮ್ಯಾಚ್ ವಿನ್ನರ್ ಆಲ್ರೌಂಡರ್ ಆಗತ್ಯವಿದೆ. ಭಾರತೀಯ ಬ್ಯಾಟರ್, ವಿದೇಶಿ ವೇಗಿ ಮೇಲೆ ತಂಡ ಕಣ್ಣಿಟ್ಟಿದೆ.
2. ಡೆಲ್ಲಿ:
ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಬಾರಿಯ 9 ಆಟಗಾರರನ್ನು ತಂಡದಿಂದ ಕೈಬಿಟ್ಟಿದೆ. 2024ರಲ್ಲಿ ರಿಷಭ್ ಪಂತ್ ಆಡುವ ಸಾಧ್ಯತೆಯಿದ್ದರೂ ಮೀಸಲು ವಿಕೆಟ್ ಕೀಪರ್ ತಂಡಕ್ಕೆ ಅತ್ಯಗತ್ಯ. ಭಾರತೀಯ ವೇಗಿ, ವಿದೇಶಿ ಹಾಗೂ ಭಾರತೀಯ ಬ್ಯಾಟರ್‌ಗಳು ಕೂಡಾ ತಂಡಕ್ಕೆ ಬೇಕಾಗಿದ್ದಾರೆ.
3. ಗುಜರಾತ್:
ಹಾರ್ದಿಕ್ ಮುಂಬೈ ಸೇರಿರುವ ಕಾರಣ ಅವರ ಸ್ಥಾನ ತುಂಬಬಲ್ಲ ಆಲ್ರೌಂಡರನ್ನು ಗುಜರಾತ್ ಹುಡುಕುತ್ತಿದೆ. ಮೀಸಲು ವಿಕೆಟ್ ಕೀಪರ್ ಮೇಲೂ ತಂಡ ಕಣ್ಣಿಟ್ಟಿದ್ದು, ಮಧ್ಯಮ ಕ್ರಮಾಂಕದ ಬ್ಯಾಟರ್ ಜೊತೆಗೆ ದೇಸಿ ಹಾಗೂ ವಿದೇಶಿ ವೇಗಿಗಳೂ ತಂಡಕ್ಕೆ ಅಗತ್ಯವಿದ್ದಾರೆ.
4. ಕೋಲ್ಕತಾ:
ಪ್ರಮುಖ ವೇಗಿಗಳನ್ನೆಲ್ಲಾ ತಂಡದಿಂದ ಕೈಬಿಟ್ಟಿರುವ ಕೋಲ್ಕತಾಕ್ಕೆ ಹರಾಜಿನಲ್ಲಿ ಭಾರತ ಹಾಗೂ ವಿದೇಶಿ ವೇಗಿಗಳನ್ನು ಖರೀದಿಸುವುದು ಪ್ರಮುಖ ಗುರಿ. ಮೀಸಲು ವಿಕೆಟ್ ಕೀಪರ್, ಆಲ್ರೌಂಡರ್ ಹೊಣೆ ನಿಭಾಯಿಸಬಲ್ಲ ಆಟಗಾರರೂ ತಂಡಕ್ಕೆ ಅತ್ಯಗತ್ಯ.
5. ಲಖನೌ:
ತಂಡದ ಬಳಿ ಇತರೆಲ್ಲಾ ತಂಡಕ್ಕಿಂತ ಕನಿಷ್ಠ ಅಂದರೆ ₹13.15 ಕೋಟಿ ಇದೆ. ಇಷ್ಟರಲ್ಲೇ ಮಧ್ಯಮ ಕ್ರಮಾಂಕದ ಬ್ಯಾಟರ್, ವೇಗದ ಬೌಲಿಂಗ್ ಆಲ್ರೌಂಡರ್, ತಜ್ಞ ವೇಗಿಯನ್ನು ತಂಡ ಖರೀದಿಸಬೇಕಿದೆ.
6. ಮುಂಬೈ:
ಹಾರ್ದಿಕ್ ಮರಳಿದ್ದರಿಂದ ತಂಡ ಬಲಿಷ್ಠವಾಗಿ ತೋರುತ್ತಿದ್ದರೂ ತಜ್ಞ ವೇಗಿಗಳ ಕೊರತೆ ಎದುರಾಗಬಹುದು. ಹೀಗಾಗಿ ಮುಂಚೂಣಿ ವೇಗಿಗಳ ಹುಡುಕಾಟದಲ್ಲಿದೆ. ಸ್ಪಿನ್ ಆಲ್ರೌಂಡರ್ ಕೂಡಾ ತಂಡದ ಮುಂದಿರುವ ಪ್ರಮುಖ ಗುರಿ.
7. ಪಂಜಾಬ್:
ತಂಡದ ಬಳಿ ₹29.1 ಕೋಟಿ ಇದ್ದು, 8 ಆಟಗಾರರು ಅಗತ್ಯವಿದೆ. ತಂಡಕ್ಕೆ ಅಗ್ರ, ಮಧ್ಯಮ ಕ್ರಮಾಂಕದ ದೇಸಿ, ವಿದೇಶಿ ಬ್ಯಾಟರ್ ಅಗತ್ಯವಿದ್ದು, ಕೆಲ ತಜ್ಞ ಭಾರತೀಯ ವೇಗಿಗಳು, ಆಲ್ರೌಂಡರ್‌ಗಳು ಬೇಕಾಗಿದ್ದಾರೆ.
8. ರಾಜಸ್ಥಾನ:
ರಾಜಸ್ಥಾನ ದೇಸಿ ಬೌಲಿಂಗ್ ಆಲ್ರೌಂಡರ್ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟರ್ ಕೊರತೆ ಎದುರಿಸುತ್ತಿದೆ. ಆದರೆ ಒಟ್ಟು 8 ಆಟಗಾರರನ್ನು ಖರೀದಿಸಲು ತಂಡದ ಬಳಿ ಕೇವಲ ₹14.5 ಕೋಟಿ ಇದೆ. ಹೀಗಾಗಿ ಹರಾಜಿನಲ್ಲಿ ಅಳೆದುತೂಗಿ ಖರೀದಿ ಮಾಡಬೇಕಾಗಬಹುದು.
9. ಆರ್‌ಸಿಬಿ:
ಬ್ಯಾಟಿಂಗ್ ವಿಭಾಗ ಈ ಬಾರಿಯೂ ಉತ್ತಮವಾಗಿರುವಂತೆ ತೋರುತ್ತಿದ್ದರೂ, ಮಧ್ಯಮ ಕ್ರಮಾಂಕದ ಬ್ಯಾಟರ್ ಅಗತ್ಯವಿದೆ. ತಂಡಕ್ಕೆ ಪ್ರಮುಖವಾಗಿ ಬೇಕಿರುವುದು ವೇಗಿಗಳು. ಮುಂಚೂಣಿ ಸ್ಪಿನ್ನರ್ ಕೊರತೆಯೂ ತಂಡಕ್ಕಿದ್ದು, ಮೀಸಲು ವಿಕೆಟ್ ಕೀಪರ್ ಕೂಡಾ ಬೇಕಿದೆ.
10. ಹೈದ್ರಾಬಾದ್:
ತಂಡದ ಬಳಿ ಸಾಕಷ್ಟು ಹಣವಿದ್ದು, ಪ್ರಮುಖ ಗುರಿ ವಿಶ್ವ ಶ್ರೇಷ್ಠ ಸ್ಪಿನ್ನರ್ ಹಾಗೂ ವಿದೇಶಿ ಬ್ಯಾಟರ್. ಪಂದ್ಯ ಗೆಲ್ಲಿಸಬಲ್ಲ ಆಲ್ರೌಂಡರ್ ಕೂಡಾ ತಂಡಕ್ಕೆ ಅತ್ಯಗತ್ಯ. ಮುಖ್ಯವಾಗಿ ಭಾರತೀಯ ವೇಗಿಯ ಕೊರತೆ ಎದುರಿಸುತ್ತಿದೆ.