IPL 2023: ಮುಂಬೈ ಎದುರಿನ ಮೊದಲ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ?

Published : Apr 02, 2023, 02:08 PM IST

ಬೆಂಗಳೂರು(ಏ.02): 16ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ತವರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಬಾರಿಯ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಹೈವೋಲ್ಟೇಜ್ ಪಂದ್ಯ ಕಣ್ತುಂಬಿಕೊಳ್ಳಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಮುಂಬೈ ಎದುರಿನ ಮೊದಲ ಪಂದ್ಯಕ್ಕೆ ಆರ್‌ಸಿಬಿ ತಂಡವು ಹೀಗಿದೆ ನೋಡಿ.  

PREV
111
IPL 2023: ಮುಂಬೈ ಎದುರಿನ ಮೊದಲ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಸ್ಥಾನ?
1. ಫಾಫ್ ಡು ಪ್ಲೆಸಿಸ್:

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ ನಾಯಕರಾಗಿ ಮಾತ್ರವಲ್ಲದೇ ಆರಂಭಿಕನಾಗಿಯೂ ಯಶಸ್ವಿಯಾಗಬೇಕಿದೆ. ತಂಡವು ನಾಯಕನಿಂದ ಉತ್ತಮ ಆರಂಭವನ್ನು ಎದುರು ನೋಡುತ್ತಿದೆ.

211
2. ಫಿನ್ ಅಲೆನ್‌:

ನ್ಯೂಜಿಲೆಂಡ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್‌ ಫಿನ್ ಅಲೆನ್‌ಗೆ ಇಂದು ಆರ್‌ಸಿಬಿ ಆಡುವ ಹನ್ನೊಂದರ ಬಳಗದಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಅವಕಾಶ ಸಿಗುವ ಸಾಧ್ಯತೆಯಿದೆ. ಅಲೆನ್‌, ಸ್ಪೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ.
 

311
3. ವಿರಾಟ್ ಕೊಹ್ಲಿ:

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ಹಾಗೂ ಅತ್ಯಂತ ನಂಬಿಗಸ್ಥ ಬ್ಯಾಟರ್ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. 3 ವರ್ಷಗಳ ಬಳಿಕ ತವರಿನಲ್ಲಿ ವಿರಾಟ್ ಕೊಹ್ಲಿ ಆರ್‌ಸಿಬಿ ಪರ ಘರ್ಜಿಸಲು ಸಜ್ಜಾಗಿದ್ದಾರೆ.

411
4. ಗ್ಲೆನ್‌ ಮ್ಯಾಕ್ಸ್‌ವೆಲ್‌:

ಆರ್‌ಸಿಬಿ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್‌ ಬ್ಯಾಟರ್‌ ಗ್ಲೆನ್‌ ಮ್ಯಾಕ್ಸ್‌ವೆಲ್ ಮೇಲೆ ಕೂಡಾ ತಂಡವು ಸಾಕಷ್ಟು ಅವಲಂಭಿತವಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಮ್ಯಾಕ್ಸಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. ಇನ್ನು ಅಗತ್ಯ ಸಂದರ್ಭದಲ್ಲಿ ಮ್ಯಾಕ್ಸಿ ಬೌಲಿಂಗ್ ಕೂಡಾ ಮಾಡಬಲ್ಲರು.

511
5. ಮಹಿಪಾಲ್ ಲೋಮ್ರರ್:

ಹಾರ್ಡ್‌ ಹಿಟ್ಟಿಂಗ್ ಎಡಗೈ ಬ್ಯಾಟರ್, ಮಹಿಪಾಲ್ ಲೋಮ್ರರ್ ಮ್ಯಾಚ್‌ ಫಿನಿಶರ್ ಪಾತ್ರವನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಮಹಿಪಾಲ್ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುವ ಕ್ಷಮತೆ ಹೊಂದಿದ್ದಾರೆ.
 

611
6. ದಿನೇಶ್ ಕಾರ್ತಿಕ್‌:

ಆರ್‌ಸಿಬಿ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟರ್‌ ದಿನೇಶ್ ಕಾರ್ತಿಕ್ ಕಳೆದ ಕೆಲ ವರ್ಷಗಳಲ್ಲಿ ಅಚ್ಚುಕಟ್ಟಾಗಿ ಮ್ಯಾಚ್ ಫಿನಿಶರ್‌ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಡಿಕೆ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
 

711
7. ಶಾಬಾಜ್ ಅಹಮ್ಮದ್:

ಎಡಗೈ ಬೌಲಿಂಗ್ ಆಲ್ರೌಂಡರ್ ಶಾಬಾಜ್ ಅಹಮ್ಮದ್‌, ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್‌ಗಿಂತ ಹೆಚ್ಚಾಗಿ ಬ್ಯಾಟಿಂಗ್‌ನಲ್ಲಿ ಮಿಂಚಿದ್ದರು. ಇದೀಗ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಿಂಚಲು ಶಾಬಾಜ್ ರೆಡಿಯಾಗಿದ್ದಾರೆ.
 

811
8. ಮಿಚೆಲ್ ಬ್ರೇಸ್‌ವೆಲ್‌:

ಇಂಗ್ಲೆಂಡ್‌ನ ವಿಲ್‌ ಜ್ಯಾಕ್ಸ್‌ ಬದಲಿಗೆ ಕಡೆಘಳಿಗೆಯಲ್ಲಿ ಆರ್‌ಸಿಬಿ ತಂಡ ಕೂಡಿಕೊಂಡಿರುವ ಮಿಚೆಲ್ ಬ್ರೇಸ್‌ವೆಲ್‌, ಆರ್‌ಸಿಬಿ ತಂಡದ ಪಾಲಿಗೆ ಗೇಮ್‌ ಚೇಂಜರ್‌ ಆಗುವಂತಹ ಆಟಗಾರ. ಹಸರಂಗ ಅನುಪಸ್ಥಿತಿಯಲ್ಲಿ ಬ್ರೇಸ್‌ವೆಲ್ ಯಾವ ರೀತಿ ಪ್ರದರ್ಶನ ತೋರಲಿದ್ದಾರೆ ಕಾದು ನೋಡಬೇಕಿದೆ.
 

911
9. ಮೊಹಮ್ಮದ್ ಸಿರಾಜ್‌:

ಆರ್‌ಸಿಬಿ ತಂಡದ ಮಾರಕ ವೇಗಿ ಸಿರಾಜ್‌, ಸದ್ಯ ಉತ್ತಮ ಲಯದಲ್ಲಿದ್ದು, ಮೊದಲ ಪಂದ್ಯದಲ್ಲೇ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡದ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.

1011
10. ಹರ್ಷಲ್ ಪಟೇಲ್‌:

ಆರ್‌ಸಿಬಿ ತಂಡದ ಮತ್ತೋರ್ವ ಅನುಭವಿ ವೇಗಿ ಹರ್ಷಲ್‌ ಪಟೇಲ್‌, ಕಳೆದ ಕೆಲ ದಿನಗಳಿಂದ ಉತ್ತಮ ಪ್ರದರ್ಶನ ತೋರಲು ವಿಫಲವಾಗಿದ್ದರು. ಆದರೆ ಇದೀಗ ಬೆಂಗಳೂರಿನಲ್ಲಿ ಫಾರ್ಮ್‌ಗೆ ಮರಳಲು ಎದುರು ನೋಡುತ್ತಿದ್ದಾರೆ.

1111
11. ಕರ್ಣ್ ಶರ್ಮಾ:

ಆರ್‌ಸಿಬಿ ತಂಡದ ನೀಳಕಾಯದ ಲೆಗ್‌ಸ್ಪಿನ್ನರ್ ಕರ್ಣ್ ಶರ್ಮಾ, ಇದೀಗ ಹಸರಂಗ ಅನುಪಸ್ಥಿತಿಯಲ್ಲಿ ಸ್ಪಿನ್ ಬೌಲಿಂಗ್‌ನಲ್ಲಿ ಜವಾಬ್ದಾರಿಯುತ ಪ್ರದರ್ಶನ ತೋರಬೇಕಿದೆ. 

Read more Photos on
click me!

Recommended Stories