ಬಾಬರ್ ಅಜಂ ವಾರ್ಷಿಕ ಸಂಭಾವನೆ ಕೊಹ್ಲಿಗಿಂತ 12 ಪಟ್ಟು ಕಮ್ಮಿ..! ಪಾಕ್ ನಾಯಕನಿಗಿಂತ ಡಬಲ್ ಸಂಬಳ ಸಂಜುಗೆ..!

First Published Mar 31, 2023, 2:57 PM IST

ನವದೆಹಲಿ(ಮಾ.31): ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿಕೊಂಡಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೆಲದಿನಗಳ ಹಿಂದಷ್ಟೇ ಕೇಂದ್ರ ಗುತ್ತಿಗೆ ಪ್ರಕಟಿಸಿದೆ. ಇದರಲ್ಲಿ 26 ಮಂದಿ ಸೆಂಟ್ರಲ್ ಕಾಂಟ್ರೆಕ್ಟ್‌ಗೆ ಒಳಪ್ಪಟ್ಟಿದ್ದಾರೆ. ಸಂದರ್ಭದಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನ ನಾಯಕ ಬಾಬರ್ ಅಜಂ ನಡುವಿನ ಸಂಭಾವನೆಯಲ್ಲಿ ಅಜಗಜಾಂತರ ವ್ಯತ್ಯಾಸವಿರುವುದು ಬೆಳಕಿಗೆ ಬಂದಿದೆ.
 

ಇತ್ತೀಚೆಗಷ್ಟೇ ಬಿಸಿಸಿಐ ಪ್ರಕಟಿಸಿದ ಕೇಂದ್ರ ಗುತ್ತಿಗೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಜತೆಗೆ ಆಲ್ರೌಂಡರ್ ರವೀಂದ್ರ ಜಡೇಜಾ A+ ಶ್ರೇಣಿ ಪಡೆಯುವ ಮೂಲಕ ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ.

ಕಳೆದ ಹಲವು ವರ್ಷಗಳಿಂದ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ A+ ದರ್ಜೆಯಲ್ಲಿ ಸ್ಥಾನ ಪಡೆದಿದ್ದು, ವಾರ್ಷಿಕ 7 ಕೋಟಿ ರುಪಾಯಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇದು ಪಾಕ್‌ ನಾಯಕ ಬಾಬರ್ ಅಜಂ ಅವರ ವಾರ್ಷಿಕ ಸಂಭಾವನೆಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ.
 

Babar Azam

ಪಾಕಿಸ್ತಾನ ನಾಯಕ ಬಾಬರ್ ಅಜಂ 2022-23ರಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯಿಂದ ಪಡೆಯುತ್ತಿರುವ ಸಂಭಾವನೆಗಿಂತ ವಿರಾಟ್ ಕೊಹ್ಲಿಯ ಸಂಭಾವನೆ 12 ಪಟ್ಟು ಹೆಚ್ಚಿಗೆಯಿದೆ.

ಬಾಬರ್ ಅಜಂ ವಾರ್ಷಿಕವಾಗಿ ಪಿಸಿಬಿಯಿಂದ 1.25 ಮಿಲಿಯನ್ ಪಾಕಿಸ್ತಾನ ರುಪೀಸ್ ಅಂದರೆ ಭಾರತದಲ್ಲಿ 43,50,000 ಲಕ್ಷ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. 

ಭಾರತದಲ್ಲಿ 'ಸಿ' ಕ್ಯಾಟೆಗೆರೆ ಹೊಂದಿರುವವರು ವಾರ್ಷಿಕವಾಗಿ ಒಂದು ಕೋಟಿ ರುಪಾಯಿ ಸಂಭಾವನೆಯನ್ನು ಪಡೆಯಲ್ಲಿದ್ದಾರೆ. ಯುವ ವೇಗಿ ಆರ್ಶದೀಪ್ ಸಿಂಗ್, ವಿಕೆಟ್‌ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆದರೆ, ಬಾಬರ್ ಅಜಂ ಅವರಿಗಿಂತ ಅರ್ಧಪಟ್ಟು ಕಡಿಮೆ ಸಂಭಾವನೆ ಪಡೆಯುತ್ತಿದ್ದಾರೆ.

ಬಿಸಿಸಿಐ ಆಟಗಾರರನಿಗೆ 4 ವಿಧದಲ್ಲಿ ಸಂಭಾವನೆ ನೀಡುತ್ತಾ ಬಂದಿದೆ. A+ ದರ್ಜೆಯವರು ವಾರ್ಷಿಕ 7 ಕೋಟಿ ರುಪಾಯಿ ಸಂಭಾವನೆ ಪಡೆದರೆ, A ಕೆಟೆಗೆರೆ ಪಡೆದ ಆಟಗಾರರು ವಾರ್ಷಿಕ 5 ಕೋಟಿ ರುಪಾಯಿ ಸಂಭಾವನೆ ಪಡೆಯಲಿದ್ದಾರೆ. ಇನ್ನು B ದರ್ಜೆಗೆ 3 ಕೋಟಿ ರುಪಾಯಿ ಹಾಗೂ C ದರ್ಜೆಗೆ ಒಂದು ಕೋಟಿ ರುಪಾಯಿ ವಾರ್ಷಿಕ ಸಂಭಾವನೆ ಪಡೆಯಲಿದ್ದಾರೆ.
 

click me!