ಐಪಿಎಲ್‌ ಸಮರಕ್ಕೆ 10 ತಂಡಗಳು ಸಿದ್ಧ; ಈ ಸಲ ಕಪ್ ಯಾರದ್ದು?

First Published | Mar 30, 2023, 3:50 PM IST

ಬೆಂಗಳೂರು(ಮಾ.30): 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, 10 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಯಾವ ತಂಡದಲ್ಲಿ ತಾರಾ ಬ್ಯಾಟರ್‌ಗಳು ಯಾರು? ಯಾರು ಮ್ಯಾಚ್ ಫಿನಿಶರ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

1. ರಾಯಲ್ ಚಾಲೆಂಜರ್ಸ್‌ ಬೆಂಗಳೂರು:

ಫಾಫ್‌ ಡು ಪ್ಲೆಸಿ ನಾಯಕತ್ವದ ತಂಡದಲ್ಲಿ ಕೊಹ್ಲಿ, ಆ್ಯಲೆನ್‌, ಕಾರ್ತಿಕ್‌ರಂತಹ ತಜ್ಞ ಬ್ಯಾಟರ್‌ಗಳಿದ್ದು, ಸಿರಾಜ್‌, ಟಾಪ್ಲಿ, ಹಸರಂಗ, ಹರ್ಷಲ್‌ರಂತಹ ಅನುಭವಿ ಬೌಲರ್‌ಗಳಿದ್ದಾರೆ. ಮ್ಯಾಕ್ಸ್‌ವೆಲ್‌, ಬ್ರೇಸ್‌ವೆಲ್‌ ತಂಡದ ತಾರಾ ಆಲ್ರೌಂಡರ್‌ಗಳು.
 

2. ಚೆನ್ನೈ ಸೂಪರ್ ಕಿಂಗ್ಸ್‌

ಧೋನಿ ನಾಯಕತ್ವದ ತಂಡದಲ್ಲಿ ಋುತುರಾಜ್‌, ಕಾನ್‌ವೇ, ರಾಯುಡುರಂತಹ ಸ್ಫೋಟಕ ಬ್ಯಾಟರ್‌ಗಳಿದ್ದು, ಸ್ಟೋಕ್ಸ್‌, ಅಲಿ, ಜಡೇಜಾ, ಸ್ಯಾಂಟ್ನರ್‌ರಂತಹ ತಾರಾ ಆಲ್ರೌಂಡರ್‌ಗಳ ಬಲವೂ ಇದೆ. ಚಹರ್‌, ಮಗಾಲ, ತೀಕ್ಷಣರಂತಹ ತಜ್ಞ ಟಿ20 ಬೌಲರ್‌ಗಳಿದ್ದಾರೆ.
 

Tap to resize

3. ಡೆಲ್ಲಿ ಕ್ಯಾಪಿಟಲ್ಸ್‌

ಪಂತ್‌ ಅನುಪಸ್ಥಿತಿಯಲ್ಲಿ ವಾರ್ನರ್‌ ತಂಡ ಮುನ್ನಡೆಸಲಿದ್ದು, ಶಾ, ಪೋವೆಲ್‌, ಮಾಷ್‌ರ್‍, ಸಾಲ್ಟ್‌, ಸರ್ಫರಾಜ್‌, ಪಾಂಡೆ ಬ್ಯಾಟಿಂಗ್‌ ಬಲ. ಅಕ್ಷರ್‌ ತಂಡದ ಪ್ರಮುಖ ಆಲ್ರೌಂಡರ್‌. ನೋಕಿಯ, ಎನ್‌ಗಿಡಿ, ಕುಲ್ದೀಪ್‌, ಮುಸ್ತಾಫಿಜುರ್‌, ಸಕಾರಿಯಾ ಪ್ರಮುಖ ಬೌಲರ್‌ಗಳು.
 

4. ಗುಜರಾತ್‌ ಟೈಟಾನ್ಸ್‌

ಹಾರ್ದಿಕ್‌ ನಾಯಕತ್ವದ ತಂಡಕ್ಕೆ ಗಿಲ್‌, ಮಿಲ್ಲರ್‌, ವೇಡ್‌, ಅಭಿನವ್‌ ಪ್ರಮುಖ ಬ್ಯಾಟರ್‌ಗಳ ಬಲವಿದೆ. ತೆವಾಟಿಯಾ, ವಿಜಯ್‌ ಶಂಕರ್‌, ರಶೀದ್‌ ಖಾನ್‌, ಲಿಟ್ಲ್‌, ಒಡಿಯನ್‌ ಸ್ಮಿತ್‌ರಂತಹ ಆಲ್ರೌಂಡರ್‌ಗಳ ದಂಡೇ ಇದೆ. ಶಮಿ ತಂಡದ ಬೌಲಿಂಗ್‌ ಟ್ರಂಪ್‌ಕಾರ್ಡ್‌.
 

5. ಕೋಲ್ಕತಾ ನೈಟ್‌ ರೈಡರ್ಸ್‌

ಶ್ರೇಯಸ್‌ ಅನುಪಸ್ಥಿತಿಯಲ್ಲಿ ರಾಣಾ ತಂಡ ಮುನ್ನಡೆಸಲಿದ್ದಾರೆ. ರಹಮಾನುಲ್ಲಾ, ರಿಂಕು, ಜಗದೀಶನ್‌, ಲಿಟನ್‌ ಪ್ರಮುಖ ಬ್ಯಾಟರ್‌ಗಳು. ರಸೆಲ್‌, ನರೇನ್‌, ವೆಂಕಿ ಅಯ್ಯರ್‌, ಶಕೀಬ್‌ ತಾರಾ ಆಲ್ರೌಂಡರ್‌ಗಳು. ಉಮೇಶ್‌, ಸೌಥಿ, ವರುಣ್‌ ಬೌಲಿಂಗ್‌ ಅಸ್ತ್ರಗಳು.
 

6. ಲಖನೌ ಸೂಪರ್ ಜೈಂಟ್ಸ್‌

ರಾಹುಲ್‌ ನಾಯಕತ್ವದ ತಂಡಕ್ಕೆ ಡಿ ಕಾಕ್‌, ಬದೋನಿ, ಹೂಡಾ, ಮೇಯ​ರ್‍ಸ್, ಪೂರನ್‌ ಬ್ಯಾಟಿಂಗ್‌ ಬಲ ಇದೆ. ಸ್ಟೋಯ್ನಿಸ್‌, ಕೆ.ಗೌತಮ್‌, ಕೃನಾಲ್‌, ಸ್ಯಾಮ್ಸ್‌ ಆಲ್ರೌಂಡರ್‌ಗಳು. ಉನಾದ್ಕತ್‌, ಬಿಷ್ಣೋಯ್‌, ವುಡ್‌, ಆವೇಶ್‌ ಬೌಲಿಂಗ್‌ ತಾರೆಯರು.
 

7. ಮುಂಬೈ ಇಂಡಿಯನ್ಸ್‌

ರೋಹಿತ್‌ ನಾಯಕತ್ವದ ತಂಡಕ್ಕೆ ಬ್ರೆವಿಸ್‌, ಸೂರ್ಯ, ಕಿಶನ್‌, ತಿಲಕ್‌, ಡೇವಿಡ್‌ರಂತಹ ಸ್ಫೋಟಕ ಬ್ಯಾಟರ್‌ಗಳ ಬಲವಿದೆ. ಗ್ರೀನ್‌ ತಂಡದ ಅಗ್ರ ಆಲ್ರೌಂಡರ್‌. ಬೂಮ್ರಾ ಅನುಪಸ್ಥಿತಿಯಲ್ಲಿ ಆರ್ಚರ್‌ ಬೌಲಿಂಗ್‌ ಮುನ್ನಡೆಸಲಿದ್ದು, ಅರ್ಷದ್‌ ಖಾನ್‌ ಮೇಲೆ ನಿರೀಕ್ಷೆ ಇದೆ.
 

8. ಪಂಜಾಬ್‌ ಕಿಂಗ್ಸ್‌

ಧವನ್‌ ತಂಡದ ಹೊಸ ನಾಯಕ. ರಾಜಪಕ್ಸೆ, ಜಿತೇಶ್‌, ಶಾರೂಖ್‌, ಲಿವಿಂಗ್‌ಸ್ಟೋನ್‌ ತಂಡದ ಬ್ಯಾಟಿಂಗ್‌ ಆಧಾರಸ್ತಂಭ. ಸ್ಯಾಮ್‌ ಕರ್ರನ್‌, ಸಿಕಂದರ್‌ ರಾಜಾ ತಾರಾ ಆಲ್ರೌಂಡರ್‌ಗಳು. ರಬಾಡ, ಅಶ್‌ರ್‍ದೀಪ್‌, ವಿದ್ವತ್‌, ರಾಹುಲ್‌ ಚಹರ್‌ ಪ್ರಮುಖ ಬೌಲರ್‌ಗಳು.
 

9. ರಾಜಸ್ಥಾನ ರಾಯಲ್ಸ್

ಸ್ಯಾಮ್ಸನ್‌ ನಾಯಕತ್ವದ ತಂಡದಲ್ಲಿ ಪಡಿಕ್ಕಲ್‌, ಬಟ್ಲರ್‌, ಹೆಟ್ಮೇಯರ್‌, ಯಶಸ್ವಿ, ರಿಯಾನ್‌, ರೂಟ್‌ರಂತಹ ತಾರಾ ಬ್ಯಾಟರ್‌ಗಳೇ ದಂಡೇ ಇದೆ. ಅಶ್ವಿನ್‌, ಚಹಲ್‌, ಬೌಲ್ಟ್‌, ಜಂಪಾ ಪ್ರಮುಖ ಬೌಲರ್‌ಗಳು. ಹೋಲ್ಡರ್‌ ತಾರಾ ಆಲ್ರೌಂಡರ್‌.
 

10. ಸನ್‌ರೈಸ​ರ್ಸ್‌ ಹೈದರಾಬಾದ್‌

ಮಾರ್ಕ್ರಮ್‌ ಹೊಸ ನಾಯಕ. ಮಯಾಂಕ್‌, ಫಿಲಿಫ್ಸ್‌, ಅಭಿಷೇಕ್‌, ತ್ರಿಪಾಠಿ, ಸಮದ್‌, ಬ್ರೂಕ್‌ರಂತಹ ಸ್ಫೋಟಕ ಬ್ಯಾಟರ್‌ಗಳಿದ್ದಾರೆ. ವೇಗಿಗಳೇ ದಂಡೇ ಇದ್ದು ಯಾನ್ಸನ್‌, ನಟರಾಜನ್‌, ತ್ಯಾಗಿ, ಉಮ್ರಾನ್‌, ಭುವನೇಶ್ವರ್‌ ಮೇಲೆ ನಿರೀಕ್ಷೆ ಇದೆ. ಆದಿಲ್‌ ರಶೀದ್‌ ಪ್ರಮುಖ ಸ್ಪಿನ್ನರ್‌.

Latest Videos

click me!