ಚುನಾವಣಾ ಕಸರತ್ತಿನ ನಡುವೆ ಆರ್‌ಸಿಬಿ ಪಂದ್ಯ ವೀಕ್ಷಿಸಿದ ಸಿದ್ದರಾಮಯ್ಯ!

First Published | Apr 2, 2023, 10:26 PM IST

ಕರ್ನಾಟಕ ವಿಧಾನಸಭಾ ಚುನಾವಣಾ ಕಸರತ್ತು ಜೋರಾಗಿದೆ. ಈ ಒತ್ತಡದ ನಡುವೆ ಸಿದ್ದರಾಮಯ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂರ್ಸ್ ಬೆಂಗಳೂರು ಪಂದ್ಯ ವೀಕ್ಷಿಸಿದ್ದಾರೆ. ಸಿದ್ದು ಜೊತೆ ಹಲವು ನಾಯಕರು ಪಂದ್ಯ ವೀಕ್ಷಿಸಿದ್ದಾರೆ.

ಒಂದೆಡೆ ಚುನವಣಾ ತಯಾರಿ, ವರುಣಾದಲ್ಲಿ ಸ್ಪರ್ಧೆ, ಕೋಲಾರದತ್ತ ಮನಸ್ಸು. ಮತ್ತೊಂದೆಡೆ ಅಭ್ಯರ್ಥಿಗಳ ಟಿಕೆಟ್ ಫೈನಲ್, ಪ್ರಚಾರ ಕಾರ್ಯ. ಹೀಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಫುಲ್ ಬ್ಯುಸಿ. ಈ ಒತ್ತಡದ ನಡುವೆ ಸಿದ್ದರಾಮಯ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಪಂದ್ಯ ವೀಕ್ಷಿಸಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ  ಇಂಡಿಯನ್ಸ್ ನಡುವಿನ ಐಪಿಎಲ್ ಪಂದ್ಯಕ್ಕೆ ಸಿದ್ದರಾಮಯ್ಯ ಹಾಜರಾಗಿದ್ದಾರೆ. ರಾಜಕೀಯ ಒತ್ತಡದ ನಡುವೆ ರಿಲಾಕ್ಸ್ ಆಗಿ ಪಂದ್ಯ ವೀಕ್ಷಿಸಿದ್ದಾರೆ. 

Tap to resize

ಸಿದ್ದರಾಮಯ್ಯಗೆ ವಿಧಾನ ಪರಿಷತ್ ಸದಸ್ಯ, ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ರಾಥೋಡ್ ಸಾಥ್ ನೀಡಿದರು. ಇತ್ತ ಎಂಎಲ್‌ಸಿ ಗೋವಿಂದರಾಜು ಕೂಡ ಸಿದ್ದುಗೆ ಸಾಥ್ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಪಂದ್ಯ ವೀಕ್ಷೆಣೆಗೆ ಆಗಮಿಸಿದ ಬೆನ್ನಲ್ಲೇ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಆಗಮಿಸಿ ಮಾತುಕತೆ ನಡೆಸಿದರು. ಇದೇ ವೇಳೆ ಸಿದ್ದು ಜೊತೆ ಕುಳಿತು ಪಂದ್ಯ ವೀಕ್ಷಿಸಿದರು.

ಸಿದ್ದರಾಮಯ್ಯ ಜೊತೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಕೂಡ RCB vs MI ನಡುವಿನ ಪಂದ್ಯ ವೀಕ್ಷಣೆ ಮಾಡಿದರು. ಇದೇ ವೇಳೆ ಕ್ರಿಕೆಟ್ ಕುರಿತು ಸಿದ್ದು ಹಾಗೂ ಇತರ ನಾಯಕರು ಚರ್ಚಿಸಿದ್ದಾರೆ.

ಸಿದ್ದರಾಮಯ್ಯ ಹಲವು ಬಾರಿ ಐಪಿಎಲ್ ಪಂದ್ಯಕ್ಕೆ ಹಾಜರಾಗಿದ್ದಾರೆ. ಇಷ್ಟೇ ಅಲ್ಲ ಟೀಂ ಇಂಡಿಯಾ ಪಂದ್ಯವನ್ನೂ ವೀಕ್ಷಿಸಿದ್ದಾರೆ. ಕೆಲಸದ ಒತ್ತಡದ ನಡುವೆ ಸಿದ್ದು ಈ ರೀತಿ ಪಂದ್ಯ ವೀಕ್ಷಿಸಿ ಅಚ್ಚರಿ ನೀಡಿದ್ದಾರೆ.

election

ಕರ್ನಾಟಕದಲ್ಲಿ ಮೇ.10ಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ. 13ಕ್ಕೆ ಫಲಿತಾಂಶ ಘೋಷಣೆಯಾಗಲಿದೆ. ಮೂರು ಪಕ್ಷಗಳು ಬಿರುಸಿನ ತಯಾರಿ ಮಾಡಿಕೊಳ್ಳುತ್ತಿದೆ.

siddaramaiah

ಸಿದ್ದರಾಮಯ್ಯ ವರುಣ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.ಇತ್ತ ಕೋಲಾರದಿಂದಲೂ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇದೀಗ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ.

Latest Videos

click me!