IPL 2022: ಹರಾಜಿಗೂ ಮುನ್ನ RCB ಈ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಬಹುದು..!

Suvarna News   | Asianet News
Published : Nov 02, 2021, 04:58 PM IST

ಬೆಂಗಳೂರು: 2022ನೇ ಐಪಿಎಲ್‌ (IPL 2022) ಟೂರ್ನಿಗೆ ಎರಡು ಹೊಸ ತಂಡಗಳು ಸೇರ್ಪಡೆಯಾಗಿರುವುದರಿಂದ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಮೆಗಾ ಹರಾಜು (Mega Auction) ನಡೆಯಲಿದೆ. ಮೆಗಾ ಹರಾಜಿಗೂ ಮುನ್ನ ಈಗಿರುವ 8 ಫ್ರಾಂಚೈಸಿಗಳಿಗೆ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಲು ಬಿಸಿಸಿಐ (BCCI) ಅವಕಾಶ ನೀಡಿದೆ. ಹೀಗಾಗಿ ಬೆಂಗಳೂರು ಮೂಲದ ಫ್ರಾಂಚೈಸಿಯಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಯಾವೆಲ್ಲಾ 4 ಆಟಗಾರರನ್ನು ಉಳಿಸಿಕೊಳ್ಳಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
18
IPL 2022: ಹರಾಜಿಗೂ ಮುನ್ನ RCB ಈ ನಾಲ್ವರು ಆಟಗಾರರನ್ನು ರೀಟೈನ್‌ ಮಾಡಬಹುದು..!
1. ವಿರಾಟ್ ಕೊಹ್ಲಿ

ಮೊದಲ ಆವೃತ್ತಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ವಿರಾಟ್‌ ಕೊಹ್ಲಿ ತಮ್ಮ ನಾಯಕತ್ವ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಆದಾಗಿಯೂ ತಾವು ಕೊನೆವರೆಗೂ ಆರ್‌ಸಿಬಿ ತಂಡದ ಪರವೇ ಆಡುವುದಾಗಿ ಕೊಹ್ಲಿ ಘೋಷಿಸಿದ್ದಾರೆ. ಹೀಗಾಗಿ ಬೆಂಗಳೂರು ಫ್ರಾಂಚೈಸಿ ಮೊದಲ ಆಧ್ಯತೆಯ ಮೇರೆಗೆ ಕೊಹ್ಲಿಯನ್ನು ರೀಟೈನ್‌ ಮಾಡಲಿದೆ

28

ವಿರಾಟ್‌ ಕೊಹ್ಲಿ (Virat Kohli) ಆರ್‌ಸಿಬಿ ಪರ ಒಟ್ಟು 207 ಪಂದ್ಯಗಳನ್ನಾಡಿ 37.39ರ ಸರಾಸರಿಯಲ್ಲಿ 6,283 ರನ್‌ ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿಕೊಂಡಿರುವ ಕೊಹ್ಲಿಯನ್ನು ಆರ್‌ಸಿಬಿ ತನ್ನಲ್ಲಿಯೇ ಉಳಿಸಿಕೊಳ್ಳಲಿದೆ

38
2. ಎಬಿ ಡಿವಿಲಿಯರ್ಸ್‌

ಮಿಸ್ಟರ್ 360 ಖ್ಯಾತಿಯ ಸ್ಪೋಟಕ ಬ್ಯಾಟರ್‌ ಎಬಿ ಡಿವಿಲಿಯರ್ಸ್ (Ab De Villiers)‌, 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಯಾವುದೇ ಕ್ಷಣದಲ್ಲಿ ಬೇಕಾದರೂ ಸಹಾ ಅಬ್ಬರಿಸುವ ಕ್ಷಮತೆ ಎಬಿಡಿಗಿದೆ.

48

ಕೊಹ್ಲಿಯಂತೆ ಎಬಿಡಿ ಕೂಡಾ ಈಗಾಗಲೇ ತಾವು ಆರ್‌ಸಿಬಿ ಪರ ಮಾತ್ರ ಐಪಿಎಲ್ ಆಡುವುದಾಗಿ ತಿಳಿಸಿದ್ದಾರೆ. ಒಂದು ದಶಕದಿಂದ ಆರ್‌ಸಿಬಿ ತಂಡದ ಭಾಗವಾಗಿರುವ ಎಬಿಡಿ, ಬೆಂಗಳೂರು ತಂಡದ ಪರ 156 ಪಂದ್ಯಗಳನ್ನಾಡಿ 40.64ರ ಸರಾಸರಿಯಲ್ಲಿ 4491 ರನ್‌ ಸಿಡಿಸಿದ್ದಾರೆ.

58
3. ಗ್ಲೆನ್‌ ಮ್ಯಾಕ್ಸ್‌ವೆಲ್

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪರ ಆಲ್ರೌಂಡ್ ಪ್ರದರ್ಶನ ತೋರಿದ ಆಟಗಾರನೆಂದರೆ ಅದು ಗ್ಲೆನ್ ಮ್ಯಾಕ್ಸ್‌ವೆಲ್‌ (Glenn Maxwell). 2021ನೇ ಸಾಲಿನ ಐಪಿಎಲ್‌ನಲ್ಲಿ ಮ್ಯಾಕ್ಸ್‌ವೆಲ್ 15 ಪಂದ್ಯಗಳನ್ನಾಡಿ 42.75ರ ಸರಾಸರಿಯಲ್ಲಿ 513 ರನ್ ಚಚ್ಚಿದ್ದರು.

68

ಎರಡು ವಿದೇಶಿ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶವಿರುವುದರಿಂದ ಆರ್‌ಸಿಬಿ ಫ್ರಾಂಚೈಸಿ ಗ್ಲೆನ್‌ ಮ್ಯಾಕ್ಸ್‌ವೆಲ್ ಅವರನ್ನು ಆಧ್ಯತೆಯ ಮೇರೆಗೆ ಉಳಿಸಿಕೊಳ್ಳಲು ಬೆಂಗಳೂರು ಫ್ರಾಂಚೈಸಿ ಮುಂದಾಗುವ ಸಾಧ್ಯತೆಯಿದೆ.

78
4 ಹರ್ಷಲ್ ಪಟೇಲ್‌

ಮಧ್ಯಮ ವೇಗದ ಬೌಲರ್‌ ಹರ್ಷಲ್ ಪಟೇಲ್ (Harshal Patel) 2021ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸುವ ಮೂಲಕ ಪರ್ಪಲ್‌ ಕ್ಯಾಪ್‌ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಮೂಲಕ ಆರ್‌ಸಿಬಿ (RCB) ಹಲವು ಪಂದ್ಯಗಳ ಗೆಲುವಿನಲ್ಲಿ ಹರ್ಷಲ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು.

88

ಹರ್ಷಲ್ ಪಟೇಲ್ ಆರ್‌ಸಿಬಿ ಡೆತ್‌ ಓವರ್‌ ಸ್ಪೆಷಲಿಸ್ಟ್ (Death Over Specilist) ಆಗಿ ಗುರುತಿಸಿಕೊಂಡಿದ್ದರು. ಎದುರಾಳಿ ತಂಡದ ರನ್‌ ವೇಗಕ್ಕೆ ಕಡಿವಾಣ ಹಾಕಿದ್ದು ಮಾತ್ರವಲ್ಲದೇ ಮಹತ್ವದ ಘಟ್ಟದಲ್ಲಿ ವಿಕೆಟ್ ಕಬಳಿಸಿ ತಂಡಕ್ಕೆ ಆಸರೆಯಾಗಿದ್ದರು. ಹೀಗಾಗಿ ಚಹಲ್‌ಗಿಂತ ಹರ್ಷಲ್ ಪಟೇಲ್‌ ಅವರನ್ನು ಆರ್‌ಸಿಬಿ ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು

Read more Photos on
click me!

Recommended Stories