IPL 2022: ಹರಾಜಿಗೂ ಮುನ್ನ Delhi Capitals ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

Suvarna News   | Asianet News
Published : Nov 11, 2021, 03:36 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್ (IPL) ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೀಗ 15ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ. 2018ರಲ್ಲಿ ಡೇರ್‌ ಡೆವಿಲ್ಸ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಆಗಿ ಹೆಸರು ಬದಲಿಸಿಕೊಂಡ ಬಳಿಕ ಡೆಲ್ಲಿ ತಂಡದ ಅದೃಷ್ಟ ಬದಲಾಗಿದೆ. ಆದರೆ ಕಪ್‌ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಇದೀಗ 2022ನೇ ಸಾಲಿನ ಐಪಿಎಲ್‌ಗೂ ಮುನ್ನ ಮೆಗಾ ಹರಾಜು (Mega Auction) ನಡೆಯಲಿದ್ದು, ಈ ನಾಲ್ವರು ಆಟಗಾರರನ್ನು ಡೆಲ್ಲಿ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಯಾರು ಆ ನಾಲ್ವರು ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
18
IPL 2022: ಹರಾಜಿಗೂ ಮುನ್ನ Delhi Capitals ಈ ನಾಲ್ವರು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬಹುದು..!

1. ರಿಷಭ್ ಪಂತ್‌
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹಾಲಿ ನಾಯಕ ರಿಷಭ್ ಪಂತ್ 2016ರಿಂದಲೂ ಡೆಲ್ಲಿ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ. 2018ರ ಹರಾಜಿಗೂ ಮುನ್ನ ಫ್ರಾಂಚೈಸಿ ಮನ ಗೆದ್ದಿದ್ದರಿಂದ ಪಂತ್ ಡೆಲ್ಲಿ ತಂಡದಲ್ಲೇ ಉಳಿದಿದ್ದರು.

28

ಇನ್ನು 14ನೇ ಆವೃತ್ತಿಯ ಐಪಿಎಲ್‌ಗೂ ಮುನ್ನ ಶ್ರೇಯಸ್ ಅಯ್ಯರ್ ಗಾಯಗೊಂಡಿದ್ದರಿಂದ ಪಂತ್‌ಗೆ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಪಂತ್ ನಾಯಕತ್ವದಲ್ಲಿ ಡೆಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ವಿಕೆಟ್ ಕೀಪರ್ ಹಾಗೂ ಫಿನಿಶರ್ ಆಗಿ ಮಹತ್ವದ ಪಾತ್ರ ನಿಭಾಯಿಸುವ ಪಂತ್‌ರನ್ನು ಡೆಲ್ಲಿ ಆಧ್ಯತೆಯ ಮೇರೆ ತನ್ನ ತಂಡದಲ್ಲೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚು.

38

2. ಶ್ರೇಯಸ್ ಅಯ್ಯರ್:

2015ರಲ್ಲಿ ಡೆಲ್ಲಿ ತಂಡ ಕೂಡಿಕೊಂಡ ಶ್ರೇಯಸ್ ಅಯ್ಯರ್, ತಾವಾಡಿದ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲೇ 14 ಪಂದ್ಯಗಳನ್ನಾಡಿ 439 ರನ್ ಬಾರಿಸುವ ಮೂಲಕ ಉದಯೋನ್ಮಖ ಆಟಗಾರನಾಗಿ ಹೊರಹೊಮ್ಮಿದ್ದರು. 
 

48

ಇನ್ನು 2018ರಲ್ಲಿ ಶ್ರೇಯಸ್ ಅಯ್ಯರ್‌ಗೆ ನಾಯಕತ್ವ ಪಟ್ಟ ಕಟ್ಟಲಾಯಿತು. 2019ರಲ್ಲಿ ಅಯ್ಯರ್ ನೇತೃತ್ವದ ತಂಡ ಪ್ಲೇ ಆಫ್‌ ಪ್ರವೇಶಿತ್ತು. ಇನ್ನು 2020ರ ಐಪಿಎಲ್ ಪ್ರವೇಶಿಸಿತ್ತಾದರೂ, ಕೂದಲೆಳೆ ಅಂತರದಲ್ಲಿ ಚೊಚ್ಚಲ ಕಪ್ ಗೆಲ್ಲುವ ಅವಕಾಶ ಕೈಚೆಲ್ಲಿತ್ತು. ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸುವ ಆಟಗಾರ ಶ್ರೇಯಸ್‌ ಅಯ್ಯರ್ ಮತ್ತೆ ಡೆಲ್ಲಿ ತಂಡದಲ್ಲೇ ಕಾಣಿಸಿಕೊಂಡರೆ ಅಚ್ಚರಿಪಡುವಂತಹದ್ದು ಇಲ್ಲ.
 

58

3. ಕಗಿಸೋ ರಬಾಡ
ಆಫ್ರಿಕಾ ಮೂಲದ ಮಾರಕ ವೇಗಿ ಕಗಿಸೋ ರಬಾಡ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. 2017ರಿಂದಲೂ ರಬಾಡ, ಡೆಲ್ಲಿ ವೇಗದ ದಾಳಿಯನ್ನು ಮುನ್ನಡೆಸುತ್ತಿದ್ದಾರೆ.

68

2020ರಲ್ಲಿ ರಬಾಡ 30 ವಿಕೆಟ್ ಕಬಳಿಸುವ ಮೂಲಕ ಡೆಲ್ಲಿ ಫೈನಲ್‌ಗೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದುವರೆಗೂ 50 ಐಪಿಎಲ್‌ ಪಂದ್ಯಗಳನ್ನಾಡಿ 76 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ರಬಾಡ ತನ್ನಲ್ಲೇ ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ.

78

4. ಶಿಖರ್ ಧವನ್
ಗಬ್ಬರ್ ಸಿಂಗ್ ಖ್ಯಾತಿಯ ಬ್ಯಾಟರ್ ಶಿಖರ್ ಧವನ್ ಚೊಚ್ಚಲ ಆವೃತ್ತಿಯ ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು ಪ್ರತಿನಿಧಿಸಿದ್ದರು. ಇದಾದ ಬಳಿಕ ಮುಂಬೈ, ಡೆಕ್ಕನ್ ಚಾರ್ಜರ್ಸ್‌, ಸನ್‌ರೈಸರ್ಸ್‌ ತಂಡವನ್ನು ಪ್ರತಿನಿಧಿಸಿ 2019ರಲ್ಲಿ ಧವನ್ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತೆಕ್ಕೆಗೆ ಜಾರಿದ್ದರು.
 

88

2020ರ ಐಪಿಎಲ್‌ನಲ್ಲಿ ಸತತ ಎರಡು ಶತಕ ಚಚ್ಚಿ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದ ಧವನ್, 2021ರ ಐಪಿಎಲ್‌ನಲ್ಲಿ ಧವನ್ 587 ರನ್ ಸಿಡಿಸಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್, ಧವನ್ ಅವರನ್ನು ರೀಟೈನ್‌ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.
 

Read more Photos on
click me!

Recommended Stories