IPL 2022-Indian Premier League 15ರ ಯುವ ಆಟಗಾರರು

First Published Mar 28, 2022, 5:43 PM IST

ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಅನೇಕ ಕ್ರಿಕೆಟಿಗರು ಅಂತರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಗಳಿಸಿ ತಮ್ಮ ಸಾಮರ್ಥ್ಯವನ್ನು  ಸಾಬೀತುಪಡಿಸುವ ವೇದಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ನಿರ್ಧರಿಸುವ ಯುವ ಆಟಗಾರರಿಂದ ಈ ಬಾರಿ ಇದೇ ರೀತಿಯದ್ದನ್ನು ನಿರೀಕ್ಷಿಸಲಾಗಿದೆ. ಹಾಗಾಗಿ ಐಪಿಎಲ್‌ 15 ಸೀಸನ್‌ ಮೇಲೆ ಸಂಪೂರ್ಣ ಎಲ್ಲರ ಕಣ್ಣು ನೆಟ್ಟಿದೆ, ಈ ಬಾರಿ ಐಪಿಎಲ್‌ ಸೀಸನ್‌ನಲ್ಲಿ ಕೆಲವು ಯುವ ಆಟಗಾರರ ಮೇಲೆ ಬಾರೀ ನೀರಿಕ್ಷೆ ಇದೆ ಮತ್ತು   ಅವರ ಭವಿಷ್ಯವು ಈ ಋತುವಿನ ಮೇಲೆ ಆಧಾರಿತವಾಗಿರುತ್ತದೆ. ಆ ಯುವ ಆಟಗಾರರು ಯಾರಾರು ನೋಡೋಣ

ಯಶಸ್ವಿ ಜೈಸ್ವಾಲ್ (ರಾಜಸ್ಥಾನ್ ರಾಯಲ್ಸ್)

ಎಡಗೈ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ 2020 U19 ವಿಶ್ವಕಪ್‌ನಲ್ಲಿ ಫೇವರೇಟ್‌ ಆಟಗಾರರಾಗಿ ಹೊರ ಬಂದರು. ಈ ಕಾರಣಕ್ಕಾಗಿ ರಾಜಸ್ಥಾನ್ ರಾಯಲ್ಸ್ ಅವರನ್ನು 8 ಕೋಟಿಗೆ ತನ್ನ ತಂಡದಲ್ಲಿ ಉಳಿಸಿಕೊಂಡಿದೆ. ಈ ಹಿಂದೆ ಐಪಿಎಲ್ 2020 ರಲ್ಲಿ ರಾಜಸ್ಥಾನ ಅವರನ್ನು 2.4 ಕೋಟಿಗೆ ಖರೀದಿಸಿತ್ತು. ಉತ್ತರ ಪ್ರದೇಶದವರಾದ ಯಶಸ್ವಿ 10ನೇ ವಯಸ್ಸಿನಿಂದ ಕ್ರಿಕೆಟ್ ಆಡುತ್ತಿದ್ದಾರೆ. ಐಪಿಎಲ್‌ನ 2 ಸೀಸನ್‌ಗಳಲ್ಲಿ ಅವರು 13 ಪಂದ್ಯಗಳಲ್ಲಿ 289 ರನ್ ಗಳಿಸಿದ್ದಾರೆ.

ಮಹಿಪಾಲ್ ಲೊಮ್ರೋರ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು)

ಈ ವರ್ಷ ಮಹಿಪಾಲ್ ಲೊಮೊರೊರ್ ಅವರನ್ನು RCB 95 ಲಕ್ಷಕ್ಕೆ ಖರೀದಿಸಿದೆ. ಎಡಗೈ ಆಟಗಾರ ಮಹಿಪಾಲ್ ಅವರನ್ನು  RCB ಮಧ್ಯಮ ಕ್ರಮಾಂಕದಲ್ಲಿ ಬಳಸಿಕೊಳ್ಳಲು  ಪ್ರಯತ್ನಿಸಬಹುದು. ಐಪಿಎಲ್ 2021 ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿರುವ ಲೋಮ್ರೋರ್ ಕೇವಲ 17 ಎಸೆತಗಳಲ್ಲಿ 43 ರನ್ ಗಳಿಸಿದರು.

Latest Videos


ರಾಹುಲ್ ತ್ರಿಪಾಠಿ (ಸನ್‌ರೈಸರ್ಸ್ ಹೈದರಾಬಾದ್)

ರಾಹುಲ್ ತ್ರಿಪಾಠಿ ಐಪಿಎಲ್‌ನಲ್ಲಿ 62 ಪಂದ್ಯಗಳಲ್ಲಿ 1385 ರನ್ ಗಳಿಸಿದ್ದಾರೆ. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆ ಕೆಲವು ಸೀಸನ್‌ಗಳಲ್ಲಿ ಆಡಿದ  ನಂತರ, ಬಲಗೈ ಬ್ಯಾಟ್ಸ್‌ಮನ್‌ ಈಗ ಹೈದರಾಬಾದ್ ತಂಡ ಸೇರಿದ್ದಾರೆ.  ತ್ರಿಪಾಠಿ ಅವರು ಅದ್ಭುತ ಹಿಟ್ಟಿಂಗ್‌ಗೆ ಫೇಮಸ್‌.  
 

ಡೆವಾಲ್ಡ್ ಬ್ರೆವಿಸ್ (ಮುಂಬೈ ಇಂಡಿಯನ್ಸ್)

'ಜೂನಿಯರ್ ಎಬಿಡಿ' ಅಕಾ ಡೆವಾಲ್ಡ್ ಬ್ರೆವಿಸ್ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ 506 ರನ್‌ಗಳೊಂದಿಗೆ ಸ್ಪ್ಲಾಶ್ ಮಾಡಿದರು ಮತ್ತು ಅವರ ಪ್ರದರ್ಶನವನ್ನು ನೋಡಿ, ಬಲಗೈ ಬ್ಯಾಟ್ಸ್‌ಮನ್ ಅವರನ್ನು ಮುಂಬೈ ಇಂಡಿಯನ್ಸ್ ಮೆಗಾ ಹರಾಜಿನಲ್ಲಿ 3 ಕೋಟಿ ರೂ.ಗೆ ತನ್ನ ತಂಡಕ್ಕೆ ಸೇರಿಸಿಕೊಂಡಿತು. ರೋಹಿತ್ ಶರ್ಮಾ ನೇತೃತ್ವದ  ತಂಡ ಈ ಬ್ಯಾಟ್ಸ್‌ಮನ್ ಅನ್ನು ಮೂರು ಅಥವಾ ನಾಲ್ಕನೇ ಸ್ಥಾನದಲ್ಲಿ ಆಡಲು ಕಳುಹಿಸಬಹುದು.

ಯಶ್ ಧುಲ್ (ದೆಹಲಿ ಕ್ಯಾಪಿಟಲ್ಸ್)

ಭಾರತ U19 ವಿಜೇತ ನಾಯಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ ಮತ್ತು ಅವರು ರಣಜಿ ಟ್ರೋಫಿಯಲ್ಲಿ ದೊಡ್ಡ  ರನ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ಯಶಸ್ವಿಯಾಗಿದ್ದಾರೆ. ಯಶ್ ಧುಲ್ ತಮ್ಮ ಪ್ರಥಮ ದರ್ಜೆ ಪಂದ್ಯದಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದರು.  ದೆಹಲಿ 50 ಲಕ್ಷ ರೂಪಾಯಿಗೆ ಈ ಆಟಗಾರನನ್ನು ತನ್ನ ತಂಡದ ಭಾಗವಾಗಿಸಿಕೊಂಡಿದೆ. 

ರಾಜ್ ಬಾವಾ (ಪಂಜಾಬ್ ಕಿಂಗ್ಸ್)

ತನ್ನ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದ ರಾಜ್ ಬಾವಾ, ಐಪಿಎಲ್ 2022 ಗೆ ಉತ್ತಮ ಆರಂಭವನ್ನು ಹೊಂದಿಲ್ಲ, ಆದರೆ ಈ ಆಟಗಾರ ತನ್ನ ಆಲ್‌ರೌಂಡರ್ ಸಾಮರ್ಥ್ಯದಿಂದಾಗಿ ತಂಡದ ಅಮೂಲ್ಯ ಆಟಗಾರ ಎಂದು ಸಾಬೀತುಪಡಿಸಬಹುದು. ಅಂಡರ್-19 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯರಲ್ಲಿ ಬಾವಾ ಎರಡನೇ ಸ್ಥಾನದಲ್ಲಿದ್ದಾರೆ. ಇವರನ್ನು ಪಂಜಾಬ್ ಕಿಂಗ್ಸ್ 2 ಕೋಟಿ ರೂ.ಗೆ  ತಂಡಕ್ಕೆ ಸೇರಿಸಿಕೊಂಡಿದೆ.

click me!