2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!

Published : Jun 02, 2022, 08:30 AM IST

ಬೆಂಗಳೂರು: 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಮುಗಿದು ವಾರ ಕಳೆಯುತ್ತಾ ಬಂದರೂ, ಐಪಿಎಲ್‌ ಬಗೆಗಿನ ಕ್ರೇಜ್ ಇನ್ನೂ ಕಮ್ಮಿಯಾಗಿಲ್ಲ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿದ ಗುಜರಾತ್ ಟೈಟಾನ್ಸ್ ಚಾಂಪಿಯನ್‌ ಆಗಿಹೊರಹೊಮ್ಮಿದೆ. ಹೊಡಿ-ಬಡಿಯಾಟಕ್ಕೆ ಹೆಸರುವಾಸಿಯಾಗಿರುವ ಐಪಿಎಲ್‌ನಲ್ಲಿ ಈ ಬಾರಿ ಬೌಂಡರಿ ಹಾಗೂ ಸಿಕ್ಸರ್‌ಗಳ ಸುರಿಮಳೆಯೇ ಸುರಿದಿದೆ. ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಟ ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.  

PREV
110
2022ರ ಐಪಿಎಲ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಚಚ್ಚಿಸಿಕೊಂಡ ಟಾಪ್ 5 ಬೌಲರ್‌ಗಳಿವರು..!

5. ಕುಲ್ದೀಪ್ ಯಾದವ್: 22 ಸಿಕ್ಸರ್‌ 

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 14 ಪಂದ್ಯಗಳಲ್ಲಿ ಬೌಲಿಂಗ್‌ ಮಾಡಿ ಬರೋಬ್ಬರಿ 22 ಸಿಕ್ಸರ್ ಚಚ್ಚಿಸಿಕೊಂಡಿದ್ದಾರೆ. ಕುಲ್ದೀಪ್ ಅದ್ಭುತವಾಗಿ ಬೌಲಿಂಗ್ ಮಾಡಿದರೂ ಸಹಾ, ಎದುರಾಳಿ ಬ್ಯಾಟರ್‌ಗಳು ಹಿಂಜರಿಯಲಿಲ್ಲ.
 

210

ಕುಲ್ದೀಪ್ ಯಾದವ್, 14 ಪಂದ್ಯಗಳಿಂದ 419 ರನ್ ಬಿಟ್ಟುಕೊಟ್ಟಿದ್ದಾರೆ. ಈ ಪೈಕಿ 132 ರನ್‌ಗಳು ಕೇವಲ ಸಿಕ್ಸರ್‌ಗಳಿಂದಲೇ ಬಂದಿವೆ. ಹೀಗಿದ್ದೂ ಕುಲ್ದೀಪ್ ಯಾದವ್ 4 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದು ವಿಶೇಷ.

310

4. ಶಾರ್ದೂಲ್ ಠಾಕೂರ್: 23 ಸಿಕ್ಸರ್

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮತ್ತೋರ್ವ ಬೌಲರ್‌ ಶಾರ್ದೂಲ್ ಠಾಕೂರ್ ಕೂಡಾ 2022ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ 23 ಸಿಕ್ಸರ್‌ ಚಚ್ಚಿಸಿಕೊಳ್ಳುವ ಮೂಲಕ ಸಾಕಷ್ಟು ದುಬಾರಿ ಬೌಲರ್ ಎನಿಸಿದರು. ಶಾರ್ದೂಲ್ ಠಾಕೂರ್ 14 ಪಂದ್ಯಗಳನ್ನಾಡಿ 23 ಸಿಕ್ಸರ್‌ ಚಚ್ಚಿಸಿಕೊಂಡಿದ್ದಾರೆ.

(photo source- Instagram)

410

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 10.75 ಕೋಟಿ ರುಪಾಯಿ ನೀಡಿ ಶಾರ್ದೂಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಠಾಕೂರ್ 14 ಪಂದ್ಯಗಳನ್ನಾಡಿ 473 ರನ್ ಬಿಟ್ಟುಕೊಟ್ಟಿದ್ದರು. ಈ ಪೈಕಿ ಸಿಕ್ಸರ್‌ ಮೂಲಕವೇ 138 ರನ್ ನೀಡಿ ದುಬಾರಿ ಬೌಲರ್ ಎನಿಸಿದರು.

510

3. ಯುಜುವೇಂದ್ರ ಚಹಲ್: 27 ಸಿಕ್ಸರ್‌

ಅಚ್ಚರಿ ಎನಿಸಿದರೂ ಇದು ಸತ್ಯ. 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪರ್ಪಲ್ ಕ್ಯಾಪ್ ಒಡೆಯ ರಾಜಸ್ಥಾನ ರಾಯಲ್ಸ್‌ ತಂಡದ ಯುಜುವೇಂದ್ರ ಚಹಲ್, ಈ ಬಾರಿಯ ಟೂರ್ನಿಯಲ್ಲಿ ಗರಿಷ್ಟ ಸಿಕ್ಸರ್ ಚಚ್ಚಿಸಿಕೊಂಡ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಚಹಲ್ 17 ಪಂದ್ಯಗಳನ್ನಾಡಿ 27 ಸಿಕ್ಸರ್‌ ಚಚ್ಚಿಸಿಕೊಂಡಿದ್ದಾರೆ.
 

610

ಚಹಲ್ ಟೂರ್ನಿಯಲ್ಲಿ 7.75ರ ಎಕಾನಮಿಯಲ್ಲಿ ಬರೋಬ್ಬರಿ 527 ರನ್ ಬಿಟ್ಟುಕೊಟ್ಟಿದ್ದರು. ಈ ಪೈಕಿ ಸಿಕ್ಸರ್ ಮೂಲಕವೇ 162 ರನ್‌ಗಳನ್ನು ಎದುರಾಳಿ ತಂಡಕ್ಕೆ ನೀಡಿದ್ದಾರೆ. ಹೀಗಿದ್ದೂ ಚಹಲ್ ಐಪಿಎಲ್‌ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಗರಿಷ್ಟ ವಿಕೆಟ್ ಕಬಳಿಸಿದ ಬೌಲರ್(27 ವಿಕೆಟ್) ಎನ್ನುವ ದಾಖಲೆ ಬರೆದರು.

710
Image Credit: Hasaranga Instagram

2. ವನಿಂದು ಹಸರಂಗ: 30 ಸಿಕ್ಸರ್
ಅಗತ್ಯ ಸಂದರ್ಭದಲ್ಲಿ ಆರ್‌ಸಿಬಿ ಪಾಲಿಗೆ ವಿಕೆಟ್ ಕಬಳಿಸುವ ಮೂಲಕ ಆಸರೆಯಾಗಿದ್ದ ವನಿಂದು ಹಸರಂಗ, ಸಿಕ್ಸರ್ ಚಚ್ಚಿಸಿಕೊಳ್ಳುವ ವಿಚಾರದಲ್ಲಿ ಬೆಂಗಳೂರು ತಂಡದ ಪಾಲಿಗೆ ಕೊಂಚ ನಿರಾಸೆ ಮೂಡಿಸಿದರು. ಹಸರಂಗ 16 ಪಂದ್ಯಗಳನ್ನಾಡಿ 30 ಸಿಕ್ಸರ್ ಚಚ್ಚಿಸಿಕೊಂಡರು.

810

ಹಸರಂಗ 16 ಪಂದ್ಯಗಳಿಂದ ಒಟ್ಟು 430 ರನ್ ಬಿಟ್ಟುಕೊಟ್ಟಿದ್ದಾರೆ. ಈ ಪೈಕಿ 180 ರನ್‌ಗಳು ಕೇವಲ ಸಿಕ್ಸರ್ ಮೂಲಕವೇ ಬಂದಿವೆ. ಇದೆಲ್ಲದರ ನಡುವೆ ಹಸರಂಗ ಟೂರ್ನಿಯಲ್ಲಿ 26 ವಿಕೆಟ್ ಕಬಳಿಸುವ ಮೂಲಕ ಕೂದಲೆಳೆ ಅಂತರದಲ್ಲಿ ಪರ್ಪಲ್ ಕ್ಯಾಪ್ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದರು. 

910

1. ಮೊಹಮ್ಮದ್ ಸಿರಾಜ್
ಆರ್‌ಸಿಬಿ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ರೀಟೈನ್ ಮಾಡಿಕೊಂಡ ಮೂವರು ಆಟಗಾರರಲ್ಲಿ ಮೊಹಮ್ಮದ್ ಸಿರಾಜ್ ಕೂಡಾ ಒಬ್ಬರಾಗಿದ್ದರು. ಆದರೆ ಸಿರಾಜ್ ಈ ಬಾರಿ ಬೆಂಗಳೂರು ಫ್ರಾಂಚೈಸಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಲಿಲ್ಲ.

1010

ಮೊಹಮ್ಮದ್ ಸಿರಾಜ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ 15 ಪಂದ್ಯಗಳನ್ನಾಡಿ 514 ರನ್ ನೀಡಿದ್ದಾರೆ. ಇವುಗಳ ಪೈಕಿ 31 ಸಿಕ್ಸರ್‌ಗಳಿಂದ 186 ರನ್‌ಗಳು ಬಿಟ್ಟುಕೊಟ್ಟು, ಐಪಿಎಲ್ ಇತಿಹಾಸದಲ್ಲಿ ಆವೃತ್ತಿಯೊಂದರಲ್ಲಿ ಅತಿಹೆಚ್ಚು ಸಿಕ್ಸರ್ ಬಿಟ್ಟುಕೊಟ್ಟ ಬೌಲರ್‌ ಎನ್ನುವ ಕುಖ್ಯಾತಿಗೆ ಪಾತ್ರವಾಗಿದ್ದಾರೆ.
 

Read more Photos on
click me!

Recommended Stories