IPL 2022 ಆರೆಂಜ್ ಕ್ಯಾಪ್ ಒಡೆಯ ಜೋಸ್ ಬಟ್ಲರ್‌ ಈ ಬಾರಿ ಪ್ರಶಸ್ತಿ ಮೂಲಕ ಗಳಿಸಿದ ಮೊತ್ತವೆಷ್ಟು?

Published : May 31, 2022, 08:49 AM IST

ಬೆಂಗಳೂರು: 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿದು ಎರಡು ದಿನ ಕಳೆಯುತ್ತಾ ಬಂದರೂ, ಐಪಿಎಲ್‌ ಬಗೆಗಿನ ಮಾತುಕತೆ ಇನ್ನೂ ಕಡಿಮೆಯಾಗಿಲ್ಲ. ಚೊಚ್ಚಲ ಪ್ರಯತ್ನದಲ್ಲೇ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿದ್ದರೂ ಸಹಾ ಹೆಚ್ಚು ಗಮನ ಸೆಳೆದದ್ದು ರಾಜಸ್ಥಾನ ರಾಯಲ್ಸ್ ತಂಡದ ಸ್ಪೋಟಕ ಬ್ಯಾಟರ್‌ ಜೋಸ್ ಬಟ್ಲರ್‌. ಜೋಸ್ ಬಟ್ಲರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್‌ ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಇದೀಗ ಜೋಸ್ ಬಟ್ಲರ್ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಪ್ರಶಸ್ತಿಗಳ ಮೂಲಕ ಗಳಿಸಿದ ಬಹುಮಾನ ಮೊತ್ತವೆಷ್ಟು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...

PREV
19
IPL 2022 ಆರೆಂಜ್ ಕ್ಯಾಪ್ ಒಡೆಯ ಜೋಸ್ ಬಟ್ಲರ್‌ ಈ ಬಾರಿ ಪ್ರಶಸ್ತಿ ಮೂಲಕ ಗಳಿಸಿದ ಮೊತ್ತವೆಷ್ಟು?
Image credit: PTI

15ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನದ ಜತೆಗೆ 4 ಶತಕ ಸಿಡಿಸಿ ಅಬ್ಬರಿಸಿದ್ದ ಜೋಸ್ ಬಟ್ಲರ್, ಟೂರ್ನಿಯಲ್ಲಿ ಬರೋಬ್ಬರಿ 37 ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಈ ಮೂಲಕ ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಗರಿಷ್ಟ ಬಾರಿ ಐಪಿಎಲ್‌ ಅವಾರ್ಡ್‌ ಜಯಿಸಿದ ಆಟಗಾರ ಎನ್ನುವ ಕೀರ್ತಿಗೆ ರಾಜಸ್ಥಾನ ರಾಯಲ್ಸ್‌ನ ಬಟ್ಲರ್ ಪಾತ್ರರಾಗಿದ್ದಾರೆ.

29

ಪಂದ್ಯಶ್ರೇಷ್ಠ ಪ್ರಶಸ್ತಿ 3 ಬಾರಿ: ಒಟ್ಟು 7 ಲಕ್ಷ ರುಪಾಯಿ

ಜೋಸ್ ಬಟ್ಲರ್ ಲೀಗ್ ಹಂತದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅದ್ಭುತ ಪ್ರದರ್ಶನ ತೋರಿದ್ದಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಹೀಗಾಗಿ ಲೀಗ್ ಹಂತದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗಾಗಿ ತಲಾ ಒಂದು ಲಕ್ಷದಂತೆ 2 ಲಕ್ಷ ರುಪಾಯಿ ಗಳಿಸಿದ್ದರು. ಇನ್ನು ಪ್ಲೇ ಆಫ್‌ ಹಂತದ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ ಎದುರು ಶತಕ ಸಿಡಿಸಿ ಮತ್ತೊಮ್ಮೆ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಪ್ಲೇ ಆಫ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದ್ದಕ್ಕೆ ಬಟ್ಲರ್‌ಗೆ 5 ಲಕ್ಷ ರುಪಾಯಿ ದೊರೆಯಿತು. 

39
Jos Buttler

ಪವರ್‌ ಪ್ಲೇಯರ್ 5 ಬಾರಿ: ಒಟ್ಟು 15 ಲಕ್ಷ ರುಪಾಯಿ

ಪವರ್‌ ಪ್ಲೇ ನಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರಿದ್ದಕ್ಕೆ ನೀಡಲಾಗುವ ಪವರ್ ಪ್ಲೇಯರ್ ಪ್ರಶಸ್ತಿಯನ್ನು ಬಟ್ಲರ್ ಒಟ್ಟು 5 ಬಾರಿ ಜಯಿಸಿದರು. ಹೀಗಾಗಿ 5 ಲಕ್ಷ ರುಪಾಯಿ ಬಟ್ಲರ್ ಪಾಲಾಯಿತು. ಇನ್ನು ಟೂರ್ನಿ ಮುಗಿದ ಬಳಿಕ ಈ ಆವೃತ್ತಿಯ ಪವರ್ ಪ್ಲೇಯರ್ ಆಟಗಾರ ಎನ್ನುವ ಪ್ರಶಸ್ತಿ(10 ಲಕ್ಷ)ಗೆ ಪಾತ್ರರಾದರು. ಹೀಗಾಗಿ ಈ ವಿಭಾಗದಲ್ಲಿ 15 ಲಕ್ಷ ರುಪಾಯಿ ಬಟ್ಲರ್ ಪಾಲಾಯಿತು.

49

ಗೇಮ್ ಚೇಂಜರ್ ಪ್ರಶಸ್ತಿ 6 ಬಾರಿ: ಒಟ್ಟು 16 ಲಕ್ಷ ರುಪಾಯಿ

ಬಲಗೈ ಬ್ಯಾಟರ್‌ ಜೋಸ್ ಬಟ್ಲರ್, ಐಪಿಎಲ್ ಲೀಗ್ ಹಂತದಲ್ಲಿ 4 ಬಾರಿ ಹಾಗೂ ಪ್ಲೇ ಆಫ್‌ನಲ್ಲಿ ಎರಡು ಬಾರಿ ಗೇಮ್ ಚೇಂಜರ್ ಪ್ರಶಸ್ತಿ(ತಲಾ ಒಂದು ಲಕ್ಷ) ಜಯಿಸಿದರು. ಇದರ ಜತೆಗೆ ಈ ಆವೃತ್ತಿಯ ಗೇಮ್ ಚೇಂಜರ್ ಪ್ರಶಸ್ತಿ(10) ಕೂಡಾ ಬಟ್ಲರ್ ಪಾಲಾಯಿತು. ಹೀಗಾಗಿ ಒಟ್ಟು ಈ ವಿಭಾಗದಲ್ಲಿ 16 ಲಕ್ಷ ರುಪಾಯಿ ಬಟ್ಲರ್ ತಮ್ಮ ಜೇಬಿಗಿಳಿಸಿಕೊಂಡರು.

59

ಸೂಪರ್‌ ಸ್ಟ್ರೈಕರ್‌ ಪ್ರಶಸ್ತಿ 2 ಬಾರಿ: 2 ಲಕ್ಷ ರುಪಾಯಿ

ಸ್ಪೋಟಕ ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯದಲ್ಲಿ ಗಮನ ಸೆಳೆಯುವ ಆಟಗಾರರಿಗೆ ನೀಡಲಾಗುವ ಸೂಪರ್‌ ಸ್ಟ್ರೈಕರ್ ಪ್ರಶಸ್ತಿಯನ್ನು (ಒಂದು ಲಕ್ಷ) ಜೋಸ್ ಬಟ್ಲರ್ 2 ಬಾರಿ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲೀಗ್ ಹಂತದಲ್ಲಿ ಒಮ್ಮೆ ಹಾಗೂ ಪ್ಲೇ ಆಫ್‌ ಹಂತದಲ್ಲಿ ಒಮ್ಮೆ ಬಟ್ಲರ್ ಸೂಪರ್ ಸ್ಟ್ರೈಕರ್ ಪ್ರಶಸ್ತಿ ಜಯಿಸಿದ್ದಾರೆ.

69

ಅತಿಹೆಚ್ಚು ಬೌಂಡರಿ ಹಾಗೂ ಸಿಕ್ಸರ್ ಬಾರಿಸಿದ ಪ್ರಶಸ್ತಿ: 32 ಲಕ್ಷ

ಜೋಸ್ ಬಟ್ಲರ್ ಈ ಬಾರಿಯ ಐಪಿಎಲ್ ಟೂರ್ನಿಯ 7 ಪಂದ್ಯಗಳಲ್ಲಿ ಗರಿಷ್ಠ ಬೌಂಡರಿ ಬಾರಿಸುವ ಮೂಲಕ 7 ಲಕ್ಷ ರುಪಾಯಿಗಳನ್ನು ಜೇಬಿಗಿಳಿಸಿಕೊಂಡರು. ಇನ್ನು ಟೂರ್ನಿಯಲ್ಲಿ ಗರಿಷ್ಠ ಬೌಂಡರಿ (83 ಬೌಂಡರಿ) ಬಾರಿಸಿದ್ದಕ್ಕಾಗಿ ಬಟ್ಲರ್ 10 ಲಕ್ಷ ರುಪಾಯಿ ಗಳಿಸಿದರು. ಈ ಮೂಲಕ ಬೌಂಡರಿ ವಿಭಾಗದಲ್ಲಿ ಬಟ್ಲರ್ 17 ಲಕ್ಷ ರುಪಾಯಿ ಗಳಿಸಿದರು.
 

79
Jos Buttler

ಬೌಂಡರಿ ಮಾತ್ರವಲ್ಲದೇ ಸಿಕ್ಸರ್ ಬಾರಿಸುವ ವಿಚಾರದಲ್ಲೂ ಬಟ್ಲರ್ ಹಿಂದೆ ಬೀಳಲಿಲ್ಲ. ಐಪಿಎಲ್‌ನ 5 ಪಂದ್ಯಗಳಲ್ಲಿ ಬಟ್ಲರ್ ಅತಿ ಹೆಚ್ಚು ಸಿಕ್ಸರ್ ಸಿಡಿಸುವ ಮೂಲಕ 5 ಲಕ್ಷ ರುಪಾಯಿ ಗಳಿಸಿದರು. ಇದರ ಜತೆಗೆ ಟೂರ್ನಿಯಲ್ಲಿ ಗರಿಷ್ಠ ಸಿಕ್ಸರ್ (45 ಸಿಕ್ಸರ್) ಸಿಡಿಸಿದ್ದಕ್ಕಾಗಿ 10 ಲಕ್ಷ ರುಪಾಯಿಗಳನ್ನು ಬಟ್ಲರ್ ಗಳಿಸಿದರು. ಇದರೊಂದಿಗೆ ಸಿಕ್ಸರ್‌ ವಿಭಾಗದಲ್ಲಿ ಒಟ್ಟು 15 ಲಕ್ಷ ರುಪಾಯಿ ಗಳಿಸಿದರು.

89

ಅತ್ಯಂತ ಅಮೂಲ್ಯ ಆಟಗಾರ ಪ್ರಶಸ್ತಿ: 13 ಲಕ್ಷ ರುಪಾಯಿ

ಜೋಸ್ ಬಟ್ಲರ್ ಮೂರು ಪಂದ್ಯಗಳಲ್ಲಿ ಮೋಸ್ಟ್ ವ್ಯಾಲ್ಯೂಯೇಬಲ್ ಪ್ರಶಸ್ತಿಗಳನ್ನು ಜಯಿಸುವ ಮೂಲಕ 3 ಲಕ್ಷ ರುಪಾಯಿ ಗಳಿಸಿದರು. ಇದರ ಜತೆಗೆ ಟೂರ್ನಿಯ ಮೋಸ್ಟ್‌ ವ್ಯಾಲ್ಯೂಯೇಬಲ್ ಆಟಗಾರ(10 ಲಕ್ಷ ರುಪಾಯಿ) ಎನ್ನುವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಒಟ್ಟಾರೆ 13 ಲಕ್ಷ ರುಪಾಯಿಗಳನ್ನು ಗಳಿಸಿದರು.

99

ಇನ್ನು ಇದಷ್ಟೇ ಅಲ್ಲದೇ ಜೋಸ್ ಬಟ್ಲರ್ 17 ಪಂದ್ಯಗಳಿಂದ 863 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗಳಿಸಿದ ಜೋಸ್ ಬಟ್ಲರ್ 10 ಲಕ್ಷ ರುಪಾಯಿಗಳನ್ನು ಜಯಿಸಿದರು. ಹೀಗಾಗಿ ಒಟ್ಟು 37 ಐಪಿಎಲ್ ಅವಾರ್ಡ್‌ಗಳಿಂದ ಬರೋಬ್ಬರಿ 95 ಲಕ್ಷ ರುಪಾಯಿಗಳನ್ನು ಕೊಳ್ಳೆಹೊಡೆಯುವಲ್ಲಿ ಜೋಸ್ ಬಟ್ಲರ್ ಯಶಸ್ವಿಯಾಗಿದ್ದಾರೆ.

(Photo souce- iplt20.com)

Read more Photos on
click me!

Recommended Stories