IPL 2022 ಸನ್‌ರೈಸರ್ಸ್‌ ಹೈದರಾಬಾದ್ ಬೆಡಗಿ Kavya Maran ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published | Mar 30, 2022, 6:29 PM IST

ಐಪಿಎಲ್ (Indian Premier League) ನಲ್ಲಿ ಮಿಸ್ಟರಿ ಗರ್ಲ್ ಎಂಬ ಹೆಸರಲ್ಲಿ ಖ್ಯಾತಿ ಗಳಿಸಿರುವ ಸನ್‌ರೈಸರ್ಸ್ ಹೈದರಾಬಾದ್ ( Sunrisers Hyderabad) ತಂಡದ ಕಾವ್ಯಾ ಮಾರನ್ (Kaviya Maran) ನ್ಯಾಷನಲ್‌ ಕ್ರಶ್ ಆಗಿದ್ದಾರೆ. SRHನ ಯಾವುದೇ ಪಂದ್ಯವಿರಲಿ, ತಂಡ ಗೆಲ್ಲಲಿ ಅಥವಾ ಸೋಲಲಿ ಆದರೆ ಕಾವ್ಯ ಮಾರನ್ ಖಂಡಿತವಾಗಿಯೂ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಆಗುತ್ತಾರೆ. ಅದೇ ರೀತಿ, ಐಪಿಎಲ್ 2022 ರ ಐದನೇ ಪಂದ್ಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ರಾಜಸ್ಥಾನ್ ರಾಯಲ್ಸ್ (SRH vs RR) ವಿರುದ್ಧ ಸೋತಿದ್ದರೂ, ಕಾವ್ಯಾ ಮಾರನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ವೈರಲ್ ಆಗುತ್ತಿದ್ದಾರೆ. ಅಷ್ಟಕ್ಕೂ ಕಾವ್ಯ ಮಾರನ್ ಯಾರು ಮತ್ತು ಕೆಲವೇ ವರ್ಷಗಳಲ್ಲಿ ಅವರು ಹೇಗೆ ಜನರ ಹೃದಯ ಮತ್ತು ಮನಸ್ಸನ್ನು ಸೆಳೆದಿದ್ದಾರೆ ಎಂಬ ವಿವರ ಇಲ್ಲಿದೆ.

ಕಾವ್ಯಾ ಮಾರನ್ ಅವರು ಸನ್ ನೆಟ್‌ವರ್ಕ್ ಮಾಲೀಕ ಕಲಾನಿಧಿ ಮಾರನ್ ಅವರ ಪುತ್ರಿ. ಅವರ ಕಂಪನಿಯು ಏಷ್ಯಾದ ಅತಿದೊಡ್ಡ ಮಾಧ್ಯಮ ಕಂಪನಿಗಳಲ್ಲಿ ಒಂದಾಗಿದೆ ಮತ್ತು ಅವರು ಐಪಿಎಲ್ ಫ್ರ್ಯಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್‌ನ ಮಾಲೀಕರಾಗಿದ್ದಾರೆ ಮತ್ತು ಈಗ ಅವರ ಮಗಳು ಕಾವ್ಯಾ ಮುಖ್ಯಸ್ಥರಾಗಿದ್ದಾರೆ.

ಇವರ ತಾಯಿಯ ಕಾವೇರಿ ಕಲಾನಿಧಿ. ಕಾವ್ಯ ಮಾರನ್‌ಗೆ ಯಾವುದೇ ಒಡಹುಟ್ಟಿದವರಿಲ್ಲ. ಕಾವ್ಯ ಮಾರನ್ ಅವರ ತಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಸೋದರಳಿಯ. ಕಾವ್ಯಾ ಅವರ ಚಿಕ್ಕಪ್ಪ ದಯಾನಿಧಿ ಮಾರನ್ ಕೂಡ ಮಾಜಿ ಕೇಂದ್ರ ಸಚಿವರಾಗಿದ್ದರು.

Tap to resize

6 ಆಗಸ್ಟ್ 1992 ರಂದು ಕಾವ್ಯ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು ಮತ್ತು MBA ಪದವಿ ಪಡೆದಿದ್ದಾರೆ. ಅಂದಿನಿಂದ ಅವರು ತನ್ನ ತಂದೆ ಕಲಾನಿದಿ ಮಾರನ್ ಅವರ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದರು.

ಕಾವ್ಯಾ ಮಾರನ್, 2018ರ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಮೈದಾನದಲ್ಲಿ ತನ್ನ ತಂಡ SRH ಅನ್ನು ಹುರಿದುಂಬಿಸುತ್ತಿರುವುದು ಟಿವಿಯಲ್ಲಿ ಕಂಡುಬಂದಿತ್ತು. ಆ ಸಮಯದಲ್ಲಿ ಅವರು ತನ್ನ ಕುಟುಂಬದೊಂದಿಗೆ ಇದ್ದರು.

29ರ ಹರೆಯದ ಕಾವ್ಯ ಕ್ರಿಕೆಟ್‌ನಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ, ಆದ್ದರಿಂದ ಅವಳು ತನ್ನ ತಂಡದ ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಳ್ಳುತ್ತಾರೆ. ಇದರ ಜತೆಗೆ ಐಪಿಎಲ್ ಹರಾಜಿನ ವೇಳೆಯಲ್ಲಿಯೂ ಕಾವ್ಯ ಕಾಣಿಸಿಕೊಂಡಿದ್ದರು.
 

ಕಾವ್ಯಾ ಅವರ ನಿವ್ವಳ ಮೌಲ್ಯದ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಆದರೆ ಅವರ ವೇತನ ಪ್ಯಾಕೇಜ್ 87.5 ಕೋಟಿ ರೂ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಇಷ್ಟು ದೊಡ್ಡ ಸ್ಥಾನವನ್ನು ಗಳಿಸಿರುವ ಕಾವ್ಯ ಹಲವರಿಗೆ ಸ್ಫೂರ್ತಿ ಕೂಡ ಆಗಿದ್ದಾರೆ.
 

ಮಾಧ್ಯಮ ವರದಿಗಳ ಪ್ರಕಾರ, ಗಣೇಶನನ್ನು ತುಂಬಾ ನಂಬುವ ಕಾವ್ಯ ಅವರಿಗೆ ನಾಯಿಗಳೆಂದರೆ ತುಂಬಾ ಇಷ್ಟ.  ಇದಲ್ಲದೆ, ಅವರು ಸಂಗೀತ ಮತ್ತು ಪ್ರಯಾಣವನ್ನು ಪ್ರೀತಿಸುತ್ತಾರೆ.  ಕಾವ್ಯಾ ಮಾರನ್ ಫಿಟ್ ಆಗಿರಲು ಪ್ರತಿದಿನ ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ. ಅವರ ಎತ್ತರ 5 ಅಡಿ 4 ಇಂಚು ಮತ್ತು ತೂಕ ಸುಮಾರು 55 ಕಿಲೋ.  

ಕಳೆದ ಕೆಲವು ವರ್ಷಗಳಿಂದ, ಅವರು ಐಪಿಎಲ್‌ನಲ್ಲಿ ಆರೆಂಜ್‌ ಬಣ್ಣದ ಜೆರ್ಸಿಯಲ್ಲಿ ತಮ್ಮ ತಂಡ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಹುರಿದುಂಬಿಸುತ್ತಿದ್ದಾರೆ. ಪಂದ್ಯದ ವೇಳೆ ಅವರ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

Latest Videos

click me!