IPL 2021: ಮುಂಬೈ ಇಂಡಿಯನ್ಸ್‌ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಎರಡು ಬದಲಾವಣೆ?

First Published | Sep 26, 2021, 6:01 PM IST

ದುಬೈ: 14ನೇ ಆವೃತ್ತಿಯ ಐಪಿಎಲ್‌(IPL 2021) ಟೂರ್ನಿಯ 39ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡಗಳು ಮುಖಾಮುಖಿಯಾಗುತ್ತಿದ್ದು, ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಆತಿಥ್ಯವನ್ನು ವಹಿಸಿದೆ. ಸತತ 2 ಸೋಲುಗಳಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಇಂದಿನ ಮುಂಬೈ ವಿರುದ್ದದ ಪಂದ್ಯಕ್ಕೆ ಎರಡು ಮಹತ್ತರ ಬದಲಾವಣೆಯೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ಮುಂಬೈ ಎದುರಿನ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

1. ದೇವದತ್ ಪಡಿಕ್ಕಲ್‌: ಆರಂಭಿಕ ಎಡಗೈ ಬ್ಯಾಟ್ಸ್‌ಮನ್‌. ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವ ಮೂಲಕ ಮಿಂಚಿದ್ದ ಪಡಿಕ್ಕಲ್ ಇಂದೂ ಸಹಾ ದೊಡ್ಡ ಇನಿಂಗ್ಸ್‌ ಆಡಬೇಕಿದೆ. 

2. ವಿರಾಟ್ ಕೊಹ್ಲಿ: ತಂಡದ ನಾಯಕ ಹಾಗೂ ರನ್‌ ಮಷೀನ್‌. ಕೊಹ್ಲಿ ಸಹಾ ಸಿಎಸ್‌ಕೆ ಎದುರು ಅರ್ಧಶತಕ ಸಿಡಿಸಿ ಫಾರ್ಮ್‌ಗೆ ಮರಳಿದ್ದು, ರೋಹಿತ್ ಪಡೆ ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ

Tap to resize

3. ಶ್ರೀಕರ್ ಭರತ್: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಶ್ರೀಕರ್‌ಗೆ ಕಳೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇಂದಿನ ಪಂದ್ಯದಲ್ಲಿ ಭರತ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ. 

4. ಗ್ಲೆನ್‌ ಮ್ಯಾಕ್ಸ್‌ವೆಲ್‌: ಕಳೆದೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸೀಸ್‌ ಆಲ್ರೌಂಡರ್‌ ಇಂದಿನ ಪಂದ್ಯದಲ್ಲಾದರೂ ಅಬ್ಬರಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ

5. ಎಬಿ ಡಿವಿಲಿಯರ್ಸ್‌: ಎಬಿಡಿ ಕೂಡಾ ಕಳೆದೆರಡು ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಿಲ್ಲ. ಯಾವುದೇ ಕ್ಷಣದಲ್ಲಾದರೂ ಅಬ್ಬರಿಸುವ ಸಾಮರ್ಥ್ಯವಿರುವ ಎಬಿಡಿ ಮೇಲೆ ಅಭಿಮಾನಿಗಳು ಎಂದಿನಂತೆ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

6. ಟಿಮ್ ಡೇವಿಡ್: ಕಳೆದ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಟಿಮ್‌ ಡೆವಿಡ್ ಕಮಾಲ್‌ ಮಾಡಿರಲಿಲ್ಲ. ಹೀಗಿದ್ದೂ ಇಂದಿನ ಪಂದ್ಯದಲ್ಲಿ ಡೇವಿಡ್‌ಗೆ ಇನ್ನೊಂದು ಅವಕಾಶ ಸಿಗುವ ಸಾಧ್ಯತೆಯಿದೆ

7. ಕೈಲ್ ಜೇಮಿಸನ್‌: ಕಳೆದ ಪಂದ್ಯದಲ್ಲಿ ಜೇಮಿಸನ್‌ಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಹಸರಂಗ ಸಾಕಷ್ಟು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಲಂಕಾ ಆಲ್ರೌಂಡರ್ ಬದಲಿಗೆ ಜೇಮಿಸನ್ ತಂಡ ಕೂಡಿಕೊಳ್ಳುವುದು ಬಹುತೇಕ ಖಚಿತ ಎನಿಸಿದೆ.
 

8. ಶಹಬಾಜ್ ಅಹಮ್ಮದ್: ಅದೇ ರೀತಿ ಕಳೆದ ಪಂದ್ಯದಲ್ಲಿ ನವದೀಪ್ ಸೈನಿ ಕೂಡಾ ಸಾಕಷ್ಟು ದುಬಾರಿಯಾಗಿದ್ದರು. ಸೈನಿ ಬದಲಿಗೆ ಶಹಬಾಜ್ ಅಹಮ್ಮದ್ ಇಂದಿನ ಪಂದ್ಯದಲ್ಲಿ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ

9. ಹರ್ಷಲ್‌ ಪಟೇಲ್: ಆರ್‌ಸಿಬಿ ಡೆತ್ ಓವರ್‌ ಸ್ಪೆಷಲಿಸ್ಟ್‌ ಹರ್ಷಲ್‌ ಪಟೇಲ್ ಮತ್ತೊಮ್ಮೆ ತಮ್ಮ ಹಳೆಯ ಖದರ್ ತೋರಿಸಲು ಸಜ್ಜಾಗಿದ್ದಾರೆ. ಬಲಿಷ್ಠ ಮುಂಬೈ ಬ್ಯಾಟರ್‌ಗಳೆದುರು ಹರ್ಷಲ್‌ ಪಟೇಲ್‌ಗೆ ಅಗ್ನಿ ಪರೀಕ್ಷೆ ಎನಿಸಿದೆ

10. ಮೊಹಮ್ಮದ್ ಸಿರಾಜ್: ಆರ್‌ಸಿಬಿ ವೇಗದ ಅಸ್ತ್ರ. ಇತ್ತೀಚಿನ ದಿನಗಳಲ್ಲಿ ಮೊನಚಾದ ದಾಳಿ ಸಂಘಟಿಸುತ್ತಾ ಬಂದಿರುವ ಮೊಹಮ್ಮದ್ ಸಿರಾಜ್ ಪವರ್ ಪ್ಲೇ ಬೌಲಿಂಗ್‌ನಲ್ಲೇ ವಿಕೆಟ್ ಕಬಳಿಸಿದರೆ ಆರ್‌ಸಿಬಿಗೆ ಯಶಸ್ಸು ದಕ್ಕಬಹುದು

11. ಯುಜುವೇಂದ್ರ ಚಹಲ್‌: ಆರ್‌ಸಿಬಿ ತಂಡದ ಅನುಭವಿ ಲೆಗ್‌ಸ್ಪಿನ್ನರ್. ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗುತ್ತಿದ್ದರೂ ಸಹಾ ಅಗತ್ಯ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯ ಚಹಲ್‌ಗಿದೆ.

Latest Videos

click me!