ಭಾರತೀಯ ಮೂಲದ ಹುಡುಗಿಯೊಂದಿಗೆ ಎಂಗೇಜ್‌ ಆಗಿರುವ RCBಯ ಫಾರಿನ್‌ ಆಟಗಾರ!

First Published | Sep 28, 2021, 1:10 PM IST

IPL 2021 39 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ( RCB) ಮುಂಬೈ ಇಂಡಿಯನ್ಸ್ (MI) ತಂಡವನ್ನು 54 ರನ್‌ಳಿಂದ ಸೋಲಿಸಿತು.  RCB ಪರವಾಗಿ ಗ್ಲೆನ್ ಮ್ಯಾಕ್ಸ್ ವೆಲ್ (Glenn Maxwell) ಅತಿ ಹೆಚ್ಚು ರನ್ ಗಳಿಸಿದರು. ಅವರು 37 ಎಸೆತಗಳಲ್ಲಿ 56 ರನ್ ಗಳಿಸಿದರು, ಈ ಸಮಯದಲ್ಲಿ ಅವರು 6 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಹೊಡೆದರು. ಇದರೊಂದಿಗೆ ಅವರು ಅದ್ಭುತ ಬೌಲಿಂಗ್ ಮಾಡುವಾಗ 2 ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಈ ವೇಗದ ಆಲ್ ರೌಂಡರ್ ಭಾರತದೊಂದಿಗೆ ವಿಶೇಷ ಸಂಬಂಧ ಹೊಂದಿದ್ದಾರೆ. ಆತನ ಹೃದಯ ಭಾರತೀಯ ಹುಡುಗಿಗೆ ಸೋತಿದೆ.  ಬಂದಿದೆ. ಮ್ಯಾಕ್ಸ್ ವೆಲ್ ಕಳೆದ ವರ್ಷ ಫೆಬ್ರವರಿ 21 ರಂದು ಭಾರತೀಯ ಮೂಲದ ವಿನಿ ರಾಮನ್ (vini raman) ಜೊತೆ ನಿಶ್ಚಿತಾರ್ಥ ಮಾಡಿಕೊಂಡರು. ಅವರ ಲವ್‌ ಲೈಫ್‌  ಬಗ್ಗೆ  ಇಲ್ಲಿದೆ ವಿವರ.

ವಿನಿ ರಾಮನ್ ಮೂಲತಃ ಭಾರತದವರು. ಅವರು ಆಸ್ಟ್ರೇಲಿಯಾದಲ್ಲಿಯೇ ಜನಿಸಿದರೂ ಅವರ ಪೋಷಕರು ದಕ್ಷಿಣ ಭಾರತದವರು. 27 ವರ್ಷದ ವಿನ್ನಿ ಮೆಲ್ಬೋರ್ನ್‌ನಲ್ಲಿ ವಾಸಿಸುತ್ತಿದ್ದಾರೆ. ಅವಳು ಮೆಂಟನ್ ಗರ್ಲ್ಸ್ ಸೆಕೆಂಡರಿ ಕಾಲೇಜಿನಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದರು.

ವಿದ್ಯಾಭ್ಯಾಸವನ್ನು ಮುಗಿಸಿದ ನಂತರ, ವಿನಿ ಫಾರ್ಮಸಿಸ್ಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ವಾಕಿಂಗ್‌ ಮತ್ತು ಸ್ವಿಮ್ಮಿಂಗ್‌ ಎಂದರೆ ವಿನಿ ಅವರಿಗೆ ತುಂಬಾ ಇಷ್ಟ. ಅವರು ಹಲವಾರು ಸಂದರ್ಭಗಳಲ್ಲಿ ಸ್ನೂಕರ್ ಮತ್ತು ಗಾಲ್ಫ್ ಆಡುತ್ತಿರುವುದನ್ನು ಸಹ ನೋಡಲಾಗಿದೆ. ಅವರು ಆಗಾಗ್ಗೆ ತನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ.

Tap to resize

ನಿಶ್ಚಿತಾರ್ಥ ವಾರ್ಷಿಕೋತ್ಸವದಂದು ತನ್ನ ಫಿಯಾನ್ಸಿಯೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್. '1 ವರ್ಷದ ಹಿಂದೆ ನಾನು ಒಬ್ಬ ಮನುಷ್ಯ ಮಾಡಬಹುದಾದ ಅತಿ  ಧೈರ್ಯದ ಕೆಲಸವನ್ನು ನಾನು ಮಾಡಿದ್ದೇನೆ. ಲವ್‌ ಯೂ @vini.raman ಮತ್ತು ಈಗ ನಾನು ನಿನ್ನೊಂದಿಗೆ ಮುದುಕನಾಗಲು  ಕಾಯಲು ಸಾಧ್ಯವಿಲ್ಲ' ಎಂದು ಮ್ಯಾಕ್ಸ್‌ ಫೋಟೋಗೆ ಕ್ಯಾಪ್ಷನ್‌ ನೀಡಿದ್ದರು.

ಈ ಜೋಡಿ ಎರೆಡು ಬಾರಿ ತಮ್ಮ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದಾರೆ ಮ್ಯಾಕ್ಸ್‌ವೆಲ್ ಮತ್ತು ವಿನಿ ಪಾಶ್ಚಾತ್ಯ ಶೈಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಒಂದು ತಿಂಗಳ ನಂತರ, ಇಬ್ಬರೂ ಭಾರತೀಯ ಪದ್ಧತಿಯಲ್ಲಿ ಮತ್ತೊಮ್ಮೆ ಎಂಗೇಜ್ಮೇಂಟ್‌ ಮಾಡಿಕೊಂಡರು.  ಅವರ  ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗಿದ್ದವು.

ಮ್ಯಾಕ್ಸ್‌ವೆಲ್ ಮತ್ತು ವಿನಿ ಬಹಳ ಕಾಲದಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಈ ಕಪಲ್‌ನ ದಂಪತಿಗಳ ಮೊದಲ ಫೋಟೋಗಳು 2017 ರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡವು. ಮ್ಯಾಕ್ಸ್‌ವೆಲ್ 2019 ರ ಆಸ್ಟ್ರೇಲಿಯಾ ಕ್ರಿಕೆಟ್ ಪಂದ್ಯದಲ್ಲಿ ತನ್ನ ಪಾರ್ಟನರ್‌ ವಿನಿಯೊಂದಿಗೆ ಗುರುತಿಸಿಕೊಂಡರು.

ಸಾಮಾಜಿಕ ಜಾಲತಾಣಗಳಲ್ಲಿ ಈ ಇಬ್ಬರೂ ಪರಸ್ಪರರ ತಮ್ಮ ಫೋಟೋಗಳನ್ನು ಹೆಚ್ಚಾಗಿ ಪೋಸ್ಟ್ ಮಾಡುತ್ತಾರೆ. ಮ್ಯಾಕ್ಸ್‌ವೆಲ್ ಹೊರಗೆ ಸುತ್ತಲು  ಹೋದಾಗಲೆಲ್ಲಾ, ವಿನಿ ಖಂಡಿತವಾಗಿಯೂ ಅವರೊಂದಿಗೆ ಇರುತ್ತಾರೆ. ಇಬ್ಬರು ಜೊತೆಯಾಗಿ ಕಾಲ ಕಳೆಯುವ ಸಾಕಷ್ಟು ಪೋಟೋಗಳು ಕಂಡುಬಂದಿವೆ.

Latest Videos

click me!