ಅನುಷ್ಕಾ ಶರ್ಮಾ- ಧನಶ್ರೀ ವರ್ಮಾ:IPL ಆಟಗಾರರ ಪತ್ನಿಯರು ಎಷ್ಷು ಓದಿದ್ದಾರೆ ನೋಡಿ!

First Published | Sep 28, 2021, 1:01 PM IST

IPL  2021 ರ ಎರಡನೇ ಹಂತವು ಭರದಿಂದ ಸಾಗಿದೆ. ಆಟಗಾರರ ಜೊತೆಯಲ್ಲಿ ಅವರ ಲೈಫ್‌ ಪಾರ್ಟನರ್‌ ಕೂಡ ಸಾಕಷ್ಟು ಚರ್ಚೆಯಲ್ಲಿದ್ದಾರೆ. ವಿರಾಟ್ ಕೊಹ್ಲಿಯ ಪತ್ನಿ ಅನುಷ್ಕಾ ಶರ್ಮಾ ಅವರಿಂದ ಧನಶ್ರೀ ವರ್ಮಾ ಮತ್ತು ಇತರ ಅನೇಕ ಆಟಗಾರರ ಪತ್ನಿಯರು(Wife) ಐಪಿಎಲ್‌ಗೆ ಗ್ಲಾಮರ್ ಟಚ್‌ ನೀಡಿದ್ದಾರೆ. ಈ ಆಟಗಾರರ ಪತ್ನಿಯರಲ್ಲಿ ಕೆಲವರು ಡಾಕ್ಟರ್(Doctor) ಮತ್ತು ಕೆಲವರು ಇಂಜಿನಿಯರಿಂಗ್ ಕೂಡ ಮಾಡಿದ್ದಾರೆ. ಯಾವ ಐಪಿಎಲ್ ಸ್ಟಾರ್ಸ್‌ನ  ಪತ್ನಿ  ಎಷ್ಟು ವಿದ್ಯಾವಂತರು ಎಂದು ತಿಳಿಯೋಣ.  

ಸಾಕ್ಷಿ ಧೋನಿ: ಸಿಎಸ್ ಕೆ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಕೋರ್ಸ್ ಮಾಡಿದ್ದಾರೆ. ಅವರು ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್, ಔರಂಗಾಬಾದ್‌ನಲ್ಲಿ ಅಧ್ಯಯನ ಮಾಡಿದ್ದಾರೆ.
 

ಅನುಷ್ಕಾ ಶರ್ಮಾ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಯಾವಾಗಲೂ ತನ್ನ ಪತಿ ವಿರಾಟ್‌ ಕೋಹ್ಲಿ ಮತ್ತು ಅವರ ತಂಡವನ್ನು ಹುರಿದುಂಬಿಸುವುದು ಕಂಡುಬರುತ್ತದೆ.  ಸೌಂದರ್ಯದಲ್ಲಿ ಟಾಪರ್ ಆಗಿರುವ ಅನುಷ್ಕಾ ಓದಿನಲ್ಲೂ ಹಿಂದೆ ಇಲ್ಲ.ಅವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

Tap to resize

ರಿತಿಕಾ ಸಜದೇಹ್: ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೆ ಈವೆಂಟ್ ಮ್ಯಾನೇಜ್‌ಮೆಂಟ್ ಕೋರ್ಸ್‌ ಮಾಡಿದ್ದಾರೆ. ಅವರು ಕೆಲವು ವರ್ಷಗಳ ಕಾಲ ಕ್ರೀಡಾ ಈವೆಂಟ್ ಮ್ಯಾನೇಜರ್ ಕೂಡ ಆಗಿದ್ದರು. ಅವರು ತಮ್ಮ  ಕಸಿನ್‌ ಬಂಟಿ ಸಾಜ್ದೆ ಅವರ ಜೊತೆ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು.

ಪ್ರಿಯಾಂಕಾ ರೈನಾ: CSK ತಂಡದ  ಡ್ಯಾಶಿಂಗ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಪ್ರಿಯಾಂಕಾ ರೈನಾ B.Tech ಮಾಡಿದ್ದಾರೆ. ಪ್ರಿಯಾಂಕಾ ಅಕ್ಸೆಂಚರ್ ಮತ್ತು ವಿಪ್ರೊದಂತಹ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. . ಯಾವಾಗಲೂ ತನ್ನ ಪತಿ  ಮತ್ತು ಅವರ ತಂಡವನ್ನು ಚಿಯರ್‌ ಮಾಡಲು ಫಿಲ್ಡ್‌ನಲ್ಲಿ  ಕಂಡುಬರುತ್ತಾರೆ. 

राधिका

ರಾಧಿಕಾ:
ದೆಹಲಿ ಕ್ಯಾಪಿಟಲ್ಸ್ ಆಟಗಾರ ಅಜಿಂಕ್ಯ ರಹಾನೆ ಅವರ ಪತ್ನಿ ರಾಧಿಕಾ ಅವರು  ಪದವಿ ಪಡೆದಿದ್ದಾರೆ. ಅವರು ಮುಂಬೈ ವಿಶ್ವವಿದ್ಯಾಲಯದ ಗಣೇಶ್ ವಿನಾಯಕ್ ವೆಜ್ ಕಾಲೇಜಿನಲ್ಲಿ ಅಧ್ಯಯನ ಮಾಡಿದರು.

ಸಂಜನಾ ಗಣೇಶನ್: ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಈ ವರ್ಷದ ಮಾರ್ಚ್‌ನಲ್ಲಿ ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಅವರನ್ನು ವಿವಾಹವಾದರು. ಸಂಜನಾ ಪುಣೆಯ ಸಿಂಬಯೋಸಿಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬಿಟೆಕ್ ಪದವಿ ಪಡೆದಿದ್ದಾರೆ.

ಧನಶ್ರೀ ವರ್ಮಾ: ಐಪಿಎಲ್ ಗೆ ಗ್ಲಾಮರ್ ಸೇರಿಸಿದ ಯುಜ್ವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮಾ ಡೆಂಟಲ್‌ ಸೈನ್ಸ್‌ ಅಧ್ಯಯನ ಮಾಡಿದ್ದಾರೆ. ಅವರು 2014 ರಲ್ಲಿ ನವಿ ಮುಂಬೈನ ಡಿವೈ ಪಾಟೀಲ್ ಡೆಂಟಲ್ ಕಾಲೇಜಿನಲ್ಲಿ ತಮ್ಮ ಡಾಕ್ಟರ್‌ ಡಿಗ್ರಿ ಪಡೆದರು. ಆದರೆ, ಅವರು ಡ್ಯಾನ್ಸ್‌ ಕೋರಿಯೊಗ್ರಾಫರ್‌ ಆಗಿ  ವೃತ್ತಿಜೀವನವನ್ನು ಆರಿಸಿಕೊಂಡಿದ್ದಾರೆ.

प्रीति अश्विन

ಪ್ರೀತಿ ಅಶ್ವಿನ್:
ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರ ಪತ್ನಿ ಪ್ರೀತಿ ಅಶ್ವಿನ್ ಎಸ್ ಎಸ್ ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಅಧ್ಯಯನ ಮಾಡಿದರು. ಪ್ರೀತಿ ಅಶ್ವಿನ್ ಮಾಹಿತಿ ತಂತ್ರಜ್ಞಾನದಿಂದ ಬಿ.ಟೆಕ್ ಮಾಡಿದ್ದಾರೆ. ಮದುವೆಗೆ ಮುಂಚೆ, ಅವರು ಕೆಲವು ಕಂಪನಿಗಳಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ. 

ರಿವಾ ಸೋಲಂಕಿ: ಸಿಎಸ್‌ಕೆ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರ ಪತ್ನಿ ರೀವಾ ಸೋಲಂಕಿ  ಇಂಜನಿಯರ್‌ ಆಗಿದ್ದಾರೆ. ರೀವಾ ಅವರು ರಾಜ್‌ಕೋಟ್‌ನ ಆಟೋಮಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಸೈನ್ಸ್‌ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮಾಡಿದ್ದಾರೆ.

Latest Videos

click me!