IPL 2021 ಕೆಕೆಆರ್ ಎದುರಿನ ಪಂದ್ಯದಲ್ಲಿ ಅಪರೂಪದ ಐಪಿಎಲ್ ದಾಖಲೆ ಬರೆಯಲು ರೆಡಿಯಾದ ಹರ್ಷಲ್ ಪಟೇಲ್‌..!

Suvarna News   | Asianet News
Published : Oct 11, 2021, 06:30 PM IST

ಶಾರ್ಜಾ: 14ನೇ ಆವೃತ್ತಿಯ ಐಪಿಎಲ್‌ (IPL 2021) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಪರ ಹರ್ಷಲ್ ಪಟೇಲ್‌ (Harshal Patel) ಮಿಂಚಿನ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಕೋಲ್ಕತ ನೈಟ್ ರೈಡರ್ಸ್ (Kolkata Knight Riders) ಎದುರಿನ ಎಲಿಮಿನೇಟರ್ ಪಂದ್ಯದಲ್ಲಿ ಹರ್ಷಲ್ ಪಟೇಲ್‌ ಐಪಿಎಲ್‌ನಲ್ಲೇ ಹೊಸ ಮೈಲಿಗಲ್ಲು ನೆಡಲು ಸಜ್ಜಾಗಿದ್ದಾರೆ. ಏನದು ದಾಖಲೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

PREV
19
IPL 2021 ಕೆಕೆಆರ್ ಎದುರಿನ ಪಂದ್ಯದಲ್ಲಿ ಅಪರೂಪದ ಐಪಿಎಲ್ ದಾಖಲೆ ಬರೆಯಲು ರೆಡಿಯಾದ ಹರ್ಷಲ್ ಪಟೇಲ್‌..!

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್ ರೈಡರ್ಸ್ ತಂಡಗಳಿಂದು ಶಾರ್ಜಾ ಕ್ರಿಕೆಟ್‌ ಮೈದಾನದಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಗೆಲುವಿಗಾಗಿ ಕಾದಾಟ ನಡೆಸಲಿವೆ.

29
Harshal Patel

ಹರ್ಷಲ್ ಪಟೇಲ್ ಟೂರ್ನಿಯ ಆರಂಭದಿಂದಲೇ ಅಮೋಘ ಪ್ರದರ್ಶನ ತೋರುವ ಮೂಲಕ ಪರ್ಪಲ್‌ ಕ್ಯಾಪ್‌ ಮುಡಿಗೇರಿಸಿಕೊಂಡು ಮಿಂಚುತ್ತಿದ್ದು, ಎದುರಾಳಿ ತಂಡಗಳ ಪಾಲಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ.

39

ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ ಹರ್ಷಲ್ ಪಟೇಲ್ ಒಟ್ಟು 30 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಆಗಿ ಹೊರಹೊಮ್ಮುವುದರೊಂದಿಗೆ ಪರ್ಪಲ್‌ ಕ್ಯಾಪ್ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ.

49

avesh khan

ಇನ್ನು ಈ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ವೇಗಿ ಆವೇಶ್ ಖಾನ್ ಒಟ್ಟು 23 ವಿಕೆಟ್ ಕಬಳಿಸುವುದರೊಂದಿಗೆ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆವೇಶ್‌ ಖಾನ್‌ಗಿಂತ ಹರ್ಷಲ್‌ ಪಟೇಲ್ ಒಟ್ಟು 7 ವಿಕೆಟ್‌ ಮುಂದಿದ್ದಾರೆ.

59

ಕೆಲ ದಿನಗಳ ಹಿಂದಷ್ಟೇ ಹರ್ಷಲ್ ಪಟೇಲ್ 28 ವಿಕೆಟ್ ಕಬಳಿಸುವುದರೊಂದಿಗೆ ಮುಂಬೈ ವೇಗಿ ಜಸ್ಪ್ರೀತ್ ಬುಮ್ರಾ ಹೆಸರಿನಲ್ಲಿದ್ದ (27) ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಭಾರತದ ಬೌಲರ್ ಎನ್ನುವ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

Photo- iplt20

69

ಇದೀಗ ಐಪಿಎಲ್‌ ಇತಿಹಾಸದಲ್ಲೇ ಆವೃತ್ತಿಯೊಂದಲ್ಲೇ ಗರಿಷ್ಠ ವಿಕೆಟ್‌ ಕಬಳಿಸಿದ ಬೌಲರ್ ಎನ್ನುವ ದಾಖಲೆ ಬರೆದಿರುವ ಡ್ವೇನ್‌ ಬ್ರಾವೋ ಅವರ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆಯನ್ನು ಅಳಿಸಿ ಹಾಕಲು ಹರ್ಷಲ್ ಪಟೇಲ್ ರೆಡಿಯಾಗಿದ್ದಾರೆ.

79

ಹೌದು, 2013ನೇ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಡ್ವೇನ್ ಬ್ರಾವೋ ಒಟ್ಟು 18 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸಿ, ಐಪಿಎಲ್ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನ್ನುವ ದಾಖಲೆ ಬರೆದಿದ್ದರು.

89
Harshal Patel

ಸದ್ಯ ಹರ್ಷಲ್ ಪಟೇಲ್ ಕೇವಲ 14 ಪಂದ್ಯಗಳನ್ನಾಡಿ 30 ವಿಕೆಟ್ ಕಬಳಿಸಿದ್ದು, ಇಂದಿನ ಕೆಕೆಆರ್ ವಿರುದ್ದದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಇನ್ನು ಕೇವಲ 3 ವಿಕೆಟ್ ಕಬಳಿಸಿದರೆ, ಬ್ರಾವೋ ದಾಖಲೆ ನುಚ್ಚು ನೂರಾಗಲಿದೆ. 

99

ಕೆಕೆಆರ್ ವರ್ಸಸ್‌ ಆರ್‌ಸಿಬಿ ನಡುವಿನ ಎಲಿಮಿನೇಟರ್ ಪಂದ್ಯದಲ್ಲಿ ಗೆಲುವು ಸಾಧಿಸಿದ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ದ ಫೈನಲ್‌ಗಾಗಿ ಕಾದಾಡಲಿದೆ.

click me!

Recommended Stories