IPL 2021 KKR ಎದುರಿನ ಮಹತ್ವದ ಪಂದ್ಯದಲ್ಲಿ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

Suvarna News   | Asianet News
Published : Oct 11, 2021, 05:54 PM IST

ದುಬೈ: 14ನೇ ಆವತ್ತಿಯ ಐಪಿಎಲ್‌ (IPL 2021) ಟೂರ್ನಿಯ ಮಹತ್ವದ ಎಲಿಮಿನೇಟರ್‌ ಪಂದ್ಯ ರಾಯಲ್‌ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೋಲ್ಕತ ನೈಟ್‌ ರೈಡರ್ಸ್‌ (Kolkata Knight Riders) ತಂಡಗಳು ಮುಖಾಮುಖಿಯಾಗುತ್ತಿವೆ. ಈ ಹೈವೋಲ್ಟೇಜ್‌ ಪಂದ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಒಂದು ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದೆ. ಕೆಕೆಆರ್ ಎದುರಿನ ಮಹತ್ವದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ

PREV
111
IPL 2021 KKR ಎದುರಿನ ಮಹತ್ವದ ಪಂದ್ಯದಲ್ಲಿ RCB ತಂಡದಲ್ಲಿ ಒಂದು ಮಹತ್ವದ ಬದಲಾವಣೆ..!

1. ವಿರಾಟ್ ಕೊಹ್ಲಿ: ಆರ್‌ಸಿಬಿ ತಂಡದ ನಾಯಕ, ರನ್‌ ಮಷೀನ್‌, ಕಳೆದ ಕೆಲ ಪಂದ್ಯಗಳಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟಲು ವಿಫಲವಾಗಿರುವ ಕೊಹ್ಲಿ, ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಕಟ್ಟುವ ನಿರೀಕ್ಷೆಯಲ್ಲಿದ್ದಾರೆ 

211

2. ದೇವದತ್ ಪಡಿಕ್ಕಲ್‌: ಕರ್ನಾಟಕ ಮೂಲದ ಯುವ ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್‌ ಕೂಡಾ ಕಳೆದೆರಡು ಪಂದ್ಯಗಳಲ್ಲಿ ರನ್‌ಗಳಿಸಲು ವಿಫಲವಾಗಿದ್ದಾರೆ. ಇದೀಗ ಪಡಿಕ್ಕಲ್‌ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡಲು ಎದುರು ನೋಡುತ್ತಿದ್ದಾರೆ  
 

311

3. ಕೆ.ಎಸ್‌. ಭರತ್: ಆರ್‌ಸಿಬಿ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಭರತ್ ಕಳೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಸಿಡಿಸುವುದರ ಜತೆಗೆ ಕೊನೆಯ ಎಸೆತದಲ್ಲಿ ಅಮೋಘ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ರೂವಾರಿ ಎನಿಸಿದ್ದರು. ಭರತ್‌ ಮತ್ತೊಮ್ಮೆ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ

(Photo source- iplt20.com)

411

4. ಗ್ಲೆನ್‌ ಮ್ಯಾಕ್ಸ್‌ವೆಲ್: ಆರ್‌ಸಿಬಿ ತಂಡದ ಸ್ಟಾರ್ ಆಲ್ರೌಂಡರ್. ಡೆಲ್ಲಿ ವಿರುದ್ದ ಆಕರ್ಷಕ ಅರ್ಧಶತಕ ಸಿಡಿಸಿದ್ದು, ಆರ್‌ಸಿಬಿ ಪರ ಅತ್ಯಂತ ಸ್ಥಿರ ಪ್ರದರ್ಶನ ತೋರುವ ಮೂಲಕ ಬೆಂಗಳೂರು ತಂಡದ ಬ್ಯಾಟಿಂಗ್ ಬೆನ್ನೆಲುಬು ಎನಿಸಿದ್ದಾರೆ.

511

5. ಎಬಿ ಡಿವಿಲಿಯರ್ಸ್‌: ಯುಎಇ ಚರಣದಲ್ಲಿ ಇದುವರೆಗೂ ಎಬಿಡಿ ಶೋ ನೋಡಲು ಸಿಕ್ಕಿಲ್ಲ. ಆದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ಅಬ್ಬರಿಸಿ ಪಂದ್ಯದ ದಿಕ್ಕನ್ನೇ ಬದಲಾಯಿಸುವ ಸಾಮರ್ಥ್ಯ ಎಬಿ ಡಿವಿಲಿಯರ್ಸ್‌ಗಿದೆ. ಕೆಕೆಆರ್ ಎದುರು ಮಿಂಚಲು ಎಬಿಡಿ ಎದುರು ನೋಡುತ್ತಿದ್ದಾರೆ

611
Daniel Christian

6.ಡೇನಿಯಲ್ ಕ್ರಿಶ್ಚಿಯನ್‌: ಆಸೀಸ್‌ ಅನುಭವಿ ಆಲ್ರೌಂಡರ್ ಡೇನಿಯಲ್‌ ಕ್ರಿಶ್ಚಿಯನ್‌ ಬ್ಯಾಟಿಂಗ್‌ನಲ್ಲಿ ಮಿಂಚಲು ವಿಫಲವಾಗಿದ್ದರೂ, ಬೌಲಿಂಗ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

711

7. ಶಾಬಾಜ್ ಅಹಮ್ಮದ್‌: ಆರ್‌ಸಿಬಿಯ ಮತ್ತೋರ್ವ ಆಲ್ರೌಂಡರ್‌, ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್‌ನಲ್ಲಿ ತನ್ನದೇ ಆದ ಕಾಣಿಕೆ ನೀಡಬಲ್ಲ ಉಪಯುಕ್ತ ಆಟಗಾರ. ಕಳೆದ ಪಂದ್ಯದಲ್ಲಿ ಮಿಂಚಲು ಶಾಬಾಜ್‌ಗೆ ಸಾಧ್ಯವಾಗಿರಲಿಲ್ಲ.

811

8. ಕೈಲ್ ಜೇಮಿಸನ್‌: ನ್ಯೂಜಿಲೆಂಡ್ ಮೂಲದ ವೇಗದ ಬೌಲರ್‌. ಯುಎಇ ಚರಣದಲ್ಲಿ ಅಷ್ಟೇನು ಪರಿಣಾಮಕಾರಿ ಪ್ರದರ್ಶನವನ್ನು ಜೇಮಿಸನ್ ನೀಡಿಲ್ಲ. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ ನಂಬಿಕೆ ಉಳಿಸಿಕೊಳ್ಳಲು ನೀಳಕಾಯದ ವೇಗಿ ಎದುರು ನೋಡುತ್ತಿದ್ದಾರೆ. ಜಾರ್ಜ್‌ ಗಾರ್ಟನ್‌ ಬದಲಿಗೆ ಜೇಮಿಸನ್ ತಂಡಕೂಡಿಕೊಳ್ಳುವ ಸಾಧ್ಯತೆಯಿದೆ 

911
Harshal Patel

9. ಹರ್ಷಲ್‌ ಪಟೇಲ್‌: ಮುಂಬೈ ಇಂಡಿಯನ್ಸ್ ವಿರುದ್ದ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಪಂದ್ಯ ಆರ್‌ಸಿಬಿಯತ್ತ ವಾಲುವಂತೆ ಮಾಡಿದ್ದ ಹರ್ಷಲ್‌ ಪಟೇಲ್‌ ಮತ್ತೊಮ್ಮೆ ಬೌಲಿಂಗ್‌ನಲ್ಲಿ ಮಿಂಚಲು ಎದುರು ನೋಡುತ್ತಿದ್ದಾರೆ.

1011

10. ಮೊಹಮ್ಮದ್ ಸಿರಾಜ್‌: ಆರ್‌ಸಿಬಿ ತಂಡದ ವೇಗದ ಬೌಲಿಂಗ್ ಅಸ್ತ್ರ ಸಿರಾಜ್ ಇತ್ತೀಚಿನ ದಿನಗಳಲ್ಲಿ ಅತ್ಯಂತ ಪರಿಣಾಮಕಾರಿ ಬೌಲಿಂಗ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದಷ್ಟೇ ಅಲ್ಲದೇ ರನ್‌ವೇಗಕ್ಕೂ ಕಡಿವಾಣ ಹಾಕುತ್ತಿರುವುದು ಆರ್‌ಸಿಬಿ ಪಾಲಿಗೆ ಒಳ್ಳೆಯ ಬೆಳವಣಿಗೆ

1111

11. ಯುಜುವೇಂದ್ರ ಚಹಲ್: ಆರ್‌ಸಿಬಿ ತಂಡದ ಸ್ಪಿನ್‌ ಬೌಲಿಂಗ್ ಅಸ್ತ್ರ. ಅಗತ್ಯ ಸಂದರ್ಭದಲ್ಲಿ ತಂಡಕ್ಕೆ ವಿಕೆಟ್ ಕಬಳಿಸಿಕೊಡಬಲ್ಲ ಚಹಲ್‌, ಉತ್ತಮ ಫಾರ್ಮ್‌ನಲ್ಲಿದ್ದು, ಮತ್ತೊಮ್ಮೆ ಮಿಂಚುವ ಸಾಧ್ಯತೆಯಿದೆ. 
 

click me!

Recommended Stories