IPL 2021 ಹೀಗಿತ್ತು ನೋಡಿ ಕೆಕೆಆರ್ ತಂಡದ ಪ್ಲೇ ಆಫ್‌ ಜರ್ನಿ..!

First Published | Oct 11, 2021, 5:15 PM IST

ಬೆಂಗಳೂರು: ಇಯಾನ್‌ ಮಾರ್ಗನ್ (Eoin Morgan) ನೇತೃತ್ವದ ಕೋಲ್ಕತ ನೈಟ್‌ ರೈಡರ್ಸ್ (Kolkata Knight Riders) ತಂಡವು ಭಾರತದಲ್ಲಿ ನಡೆದ ಟೂರ್ನಿಯ ವೇಳೆ ನೀರಸ ಪ್ರದರ್ಶನ ತೋರಿತ್ತು. ಆದರೆ ಯುಎಇ ಚರಣದಲ್ಲಿ ಅಮೋಘ ಪ್ರದರ್ಶನ ತೋರುವ ಮೂಲಕ 14ನೇ ಆವೃತ್ತಿಯ ಐಪಿಎಲ್ (IPL 2021) ಟೂರ್ನಿಯಲ್ಲಿ 4ನೇ ತಂಡವಾಗಿ ಪ್ಲೇ ಆಪ್‌ ಪ್ರವೇಶಿಸಿದೆ. ಇದೀಗ ಶಾರ್ಜಾ ಮೈದಾನದಲ್ಲಿ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲು ಸಜ್ಜಾಗಿದೆ. ಕೆಕೆಆರ್ ತಂಡದ ಪ್ಲೇ ಆಫ್ (Play Off) ಜರ್ನಿ ಹೇಗಿತ್ತು ಎನ್ನೋದನ್ನು ನೋಡೋಣ ಬನ್ನಿ

ಮೊದಲ ಪಂದ್ಯ: ಏಪ್ರಿಲ್ 11

ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವು 10 ರನ್‌ಗಳ ಗೆಲುವು ಸಾಧಿಸುವ ಮೂಲಕ ಶುಭಾರಂಭ ಮಾಡಿತ್ತು.
 

ಎರಡನೇ ಪಂದ್ಯ: ಏಪ್ರಿಲ್‌ 13

ಮುಂಬೈ ಇಂಡಿಯನ್ಸ್ ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ 10 ರನ್‌ಗಳ ಅಂತರದ ರೋಚಕ ಸೋಲು ಅನುಭವಿಸಿತ್ತು.

Tap to resize

KKR vs RCB

ಮೂರನೇ ಪಂದ್ಯ: ಏಪ್ರಿಲ್ 18

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಚೆನ್ನೈನ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಮತ್ತೊಂದು ಸೋಲು ಕಂಡಿತು. ಆರ್‌ಸಿಬಿ 38 ರನ್‌ಗಳ ಗೆಲುವು ದಾಖಲಿಸಿತ್ತು.
 

4ನೇ ಪಂದ್ಯ: ಏಪ್ರಿಲ್ 21

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಹ್ಯಾಟ್ರಿಕ್ ಸೋಲು ಅನುಭವಿಸಿತು. ಸಿಎಸ್‌ಕೆ ತಂಡವು 18 ರನ್‌ಗಳ ಜಯ ದಾಖಲಿಸಿತು.

5ನೇ ಪಂದ್ಯ: ಏಪ್ರಿಲ್‌ 24

ರಾಜಸ್ಥಾನ ರಾಯಲ್ಸ್ ವಿರುದ್ದ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ಸತತ 4ನೇ ಸೋಲು ಕಂಡಿತು. ರಾಜಸ್ಥಾನ ರಾಯಲ್ಸ್ 6 ವಿಕೆಟ್‌ಗಳ ಜಯ ಸಾಧಿಸಿತು.

6ನೇ ಪಂದ್ಯ: ಏಪ್ರಿಲ್‌ 26

ಪಂಜಾಬ್ ಕಿಂಗ್ಸ್ ವಿರುದ್ದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಗೆಲುವಿನ ನಿಟ್ಟಸಿರುಬಿಟ್ಟಿತ್ತು.
 

7ನೇ ಪಂದ್ಯ: ಏಪ್ರಿಲ್ 29

ಡೆಲ್ಲಿ ಕ್ಯಾಪಿಟಲ್ಸ್ ಎದುರು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 7 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಮೊದಲ 7 ಪಂದ್ಯಗಳಲ್ಲಿ ಕೆಕೆಆರ್ ಬರೀ 2 ಪಂದ್ಯ ಗೆದ್ದು ನೀರಸ ಪ್ರದರ್ಶನ ತೋರಿತ್ತು.
 

8ನೇ ಪಂದ್ಯ: ಸೆಪ್ಟೆಂಬರ್ 20

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ಕೆಕೆಆರ್ ತಂಡವು 9 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಯುಎಇ ಚರಣದಲ್ಲಿ ಕಮ್‌ಬ್ಯಾಕ್ ಆಗುವ ಸೂಚನೆ ನೀಡಿತ್ತು.

9ನೇ ಪಂದ್ಯ: ಸೆಪ್ಟೆಂಬರ್ 23

ಮುಂಬೈ ಇಂಡಿಯನ್ಸ್ ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 7 ವಿಕೆಟ್‌ಗಳ ಜಯ ಸಾಧಿಸಿ ಬೀಗಿತ್ತು.

10ನೇ ಪಂದ್ಯ: ಸೆಪ್ಟೆಂಬರ್ 26

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಅಬುಧಾಬಿಯ ಶೇಕ್ ಜಾಯೆದ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸಿಎಸ್‌ಕೆ ತಂಡವು 2 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಕೆಕೆಆರ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತ್ತು.
 

11ನೇ ಪಂದ್ಯ: ಸೆಪ್ಟೆಂಬರ್ 28

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಇಯಾನ್ ಮಾರ್ಗನ್‌ ನೇತೃತ್ವದ ಕೆಕೆಆರ್ ತಂಡವು 3 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತು.
 

12ನೇ ಪಂದ್ಯ: ಅಕ್ಟೋಬರ್ 01

ಪಂಜಾಬ್ ಕಿಂಗ್ಸ್ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್ ತಂಡವು 5 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿತು.
 

13ನೇ ಪಂದ್ಯ: ಅಕ್ಟೋಬರ್ 03

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದ ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯ ಕೆಕೆಆರ್ ತಂಡವು 6 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿತು.

14ನೇ ಪಂದ್ಯ: ಅಕ್ಟೋಬರ್ 07

ರಾಜಸ್ಥಾನ ರಾಯಲ್ಸ್ ವಿರುದ್ದ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಕೆಕೆಆರ್ ತಂಡವು 86 ರನ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿತು.
 

Latest Videos

click me!