ಕ್ರಿಕೆಟ್‌ ಬಿಟ್ಟರೂ ಕೋಟಿಗಟ್ಟಲೇ ಸಂಪಾದನೆ, ಕೊಹ್ಲಿ ಆದಾಯದ 8 ದೊಡ್ಡ ಮೂಲಗಳು!

First Published | Sep 21, 2021, 11:14 AM IST

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ(Virat Kohli) ಟಿ 20 ಕ್ರಿಕೆಟ್ ಮತ್ತು ಐಪಿಎಲ್ ಫ್ರಾಂಚೈಸಿ ಆರ್‌ಸಿಬಿ(RCB) ನಾಯಕತ್ವಕ್ಕೆ ಗುಡ್‌ಬೈ ಹೇಳಲಿದ್ದಾರೆ. ಹೀಗಿದ್ದರೂ ಅವರ ಆದಾಯ ಕಡಿಮೆಯಾಗುವುದಿಲ್ಲ, ಕೋಟಿಗಟ್ಟಲೇ ಆದಾಯ ಮುಂದುವರೆಯಲಿದೆ. ಹೌದು ವಿರಾಟ್ ಕೊಹ್ಲಿ ಕೇವಲ ನಾಯಕತ್ವ ಮತ್ತು ಐಪಿಎಲ್‌ನಿಂದ ಹಣ ಗಳಿಸುವುದಿಲ್ಲ. ಇದನ್ನು ಹೊರತುಪಡಿಸಿ ಇನ್ನಿತರ ಮೂಲಗಳಿಂದಲೂ ಅವರು ಹಣ ಸಂಪಾದಿಸುತ್ತಾರೆ. ಮಾಸಿಕವಾಗಿ ಅಲ್ಲ, ಪ್ರತಿ ದಿನವೂ ಕೋಟಿಗಟ್ಟಲೆ ಆದಾಯ ಬರುತ್ತದೆ. 
 

ಕ್ರಿಕೆಟ್ ಹೊರತುಪಡಿಸಿ, ಕೊಹ್ಲಿ(Virat Kohli) 150 ಕೋಟಿ ರೂಪಾಯಿಗೂ ಅಧಿಕ ಹಣ ಸಂಪಾದಿಸುವ 20 ವಿಭಿನ್ನ ಬ್ರಾಂಡ್‌ಗಳ ಪ್ರಚಾರ ಮಾಡುತ್ತಾರೆ. ಇನ್ನು ಇವುಗಳ ಒಂದು ದಿನದ ಚಿತ್ರೀಕರಣಕ್ಕಾಗಿ ಅವರು ಸುಮಾರು 1 ಮಿಲಿಯನ್ ಯುಎಸ್ ಡಾಲರ್ (70 ಕೋಟಿಗೂ ಅಧಿಕ) ಚಾರ್ಜ್ ಪಡೆಯುತ್ತಾರೆ ಎನ್ನಲಾಗಿದೆ. ಅವರು ಪುಮಾ, ಆಡಿ, ಎಮ್‌ಆರ್‌ಎಫ್, ಟಿಸ್ಸಾಟ್, ಅಮೇಜ್ ಬ್ಯಾಟರಿ ಮತ್ತು ಇನ್ವರ್ಟರ್, ಹೀರೋ ಮೋಟೋಕಾರ್ಪ್, ವೊಲಿನಿ, ಟೂ ಯಮ್, ಮಾನ್ಯವರ್, ಬೂಸ್ಟ್, ಅಮೇರಿಕನ್ ಟೂರಿಸ್ಟರ್, ಉಬರ್, ವಿಕ್ಸ್, ಫಿಲಿಪ್ಸ್ ಇಂಡಿಯಾ ಸೇರಿದಂತೆ ಇನ್ನೂ ಕೆಲ ಪ್ರಖ್ಯಾತ ಕಂಪನಿಗಳ ಜಾಹೀರಾತು ಮಾಡುತ್ತಾರೆ.

ವಿರಾಟ್ ಕೊಹ್ಲಿ(Virat Kohli) ಒಂದು ಫ್ಯಾಷನ್ ವೇರ್ ಬ್ರ್ಯಾಂಡ್, ವೋಗನ್‌ ಕೂಡಾ ಹೊಂದಿದ್ದಾರೆ. ಈ ಫ್ಯಾಷನ್ ಬ್ರಾಂಡ್ ಕೋಲ್ಕತ್ತಾ ನೈಟ್ ರೈಡರ್ಸ್(KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಯ ಕಿಟ್ ಪಾರ್ಟ್ನರ್ ಕೂಡಾ ಹೌದು.

Tap to resize

ಇದಲ್ಲದೇ, ಕೊಹ್ಲಿ ಪತ್ನಿ ಅನುಷ್ಕಾ(Anushka Sharma) ಕೂಡ ನುಶ್ ಹೆಸರಿನ ಫ್ಯಾಶನ್ ಲೇಬಲ್ ಹೊಂದಿದ್ದಾರೆ. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ(Virat Kohli)ಯ ಈ ಫ್ಯಾಷನ್‌ ವೇರ್‌ ಬ್ರ್ಯಾಂಡ್‌ನ ಬಟ್ಟೆಗಳು ಜನಪ್ರಿಯ ಆನ್‌ಲೈನ್ ಶಾಪಿಂಗ್ ಸೈಟ್‌ಗಳಲ್ಲಿ ಸುಲಭವಾಗಿ ಲಭ್ಯವಿದೆ.

ಅನುಷ್ಕಾ ಶರ್ಮಾ(Anushka Sharma) ಅವರು 'ಕ್ಲೀನ್ ಸ್ಲೇಟ್ ಫಿಲ್ಮ್ಸ್' ಹೆಸರಿನ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಪಾತಾಲ್ ಲೋಕದಂತಹ ಪ್ರಸಿದ್ಧ ವೆಬ್ ಸೀರೀಸ್‌ ಹಾಗೂ ಬುಲ್ಬುಲ್, ಪರಿಯಂತಹ ಅನೇಕ ಚಿತ್ರಗಳು ಅವರ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣಗೊಂಡಿವೆ.

ವಿರಾಟ್ ಕೊಹ್ಲಿ(Virat Kohli) ದೆಹಲಿಯಲ್ಲಿ ನಿವಾ ಹೆಸರಿನ ತನ್ನದೇ ಆದ ಸ್ವಂತ ರೆಸ್ಟೋರೆಂಟ್ ಹೊಂದಿದ್ದಾರೆ. ಈ ಐಷಾರಾಮಿ ರೆಸ್ಟೋರೆಂಟ್‌ನಿಂದ ವಿರಾಟ್ ಕೊಹ್ಲಿ ಒಂದು ವರ್ಷದಲ್ಲಿ 9 ಕೋಟಿಗೂ ಹೆಚ್ಚು ಸಂಪಾದಿಸುತ್ತಾರೆ.

ವಿರಾಟ್ ಕೊಹ್ಲಿ Chisel fitness ಸೆಂಟರ್‌ನಲ್ಲಿ 90 ಕೋಟಿ ರೂ ಹೂಡಿಕೆ ಮಾಡಿದ್ದಾರೆ. ದೇಶಾದ್ಯಂತ ಈ ಫಿಟ್ನೆಸ್‌ ಸೆಂಟರ್‌ನ ಅನೇಕ ಶಾಖೆಗಳಿವೆ.

ಕೊಹ್ಲಿ ಎಫ್‌ಸಿ ಗೋವಾದಲ್ಲಿ ಫುಟ್‌ಬಾಲ್ ತಂಡದ ಮಾಲೀಕತ್ವ ಕೂಡಾ ವಹಿಸಿದ್ದಾರರೆ. ಇದಲ್ಲದೇ, ಅವರು ಯುಎಇ ರಾಯಲ್ಸ್‌ನ ಟೆನ್ನಿಸ್ ತಂಡ, ಬೆಂಗಳೂರು ವಾರಿಯರ್ಸ್‌ನಲ್ಲಿ ಕುಸ್ತಿ ತಂಡ ಮತ್ತು ಲಂಡನ್ ಮೂಲದ ಸ್ಪೋರ್ಟ್ಸ್ ಟೆಕ್ ಸ್ಟಾರ್ಟ್ ಅಪ್‌-ಸ್ಪೋರ್ಟ್ಸ್ ಕಾನ್ವೊದಿಂದಲೂ ಸಾಕಷ್ಟು ಹಣ ಗಳಿಸುತ್ತಾರೆ.

ಇವೆಲ್ಲವನ್ನು ಹೊರತುಪಡಿಸಿ ವಿರಾಟ್ ಕೊಹ್ಲಿ(Virat Kohli) ಸೋಶಿಯಲ್ ಮೀಡಿಯಾ ಮೂಲಕ ಕೋಟಿಗಟ್ಟಲೆ ಹಣ ಸಂಪಾದಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಅವರು 150 ಮಿಲಿಯನ್‌ಹೂ ಅಧಿಕ ಫಾಲೋವರ್ಸ್‌ ಹೊಂದಿದ್ದಾರೆ. ಅವರು ಪ್ರಾಯೋಜಿತ ಪೋಸ್ಟ್‌ಗೆ ಸುಮಾರು 5 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಪಡೆಯುತ್ತಾರೆ. 

Latest Videos

click me!