ಐಪಿಎಲ್ 2021: ಟೂರ್ನಿ ಆರಂಭಕ್ಕೂ ರಾಜಸ್ಥಾನ ರಾಯಲ್ಸ್‌ಗೆ ಬಿಗ್ ಶಾಕ್‌

First Published Apr 1, 2021, 12:54 PM IST

ಮುಂಬೈ: ಬಹುನಿರೀಕ್ಷಿತ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೌಂಟ್‌ಡೌನ್ ಆರಂಭವಾಗಿದೆ. ಭಾರತದ ಚುಟುಕು ಕ್ರಿಕೆಟ್ ಹಬ್ಬ ಎನಿಸಿಕೊಂಡಿರುವ ಐಪಿಎಲ್‌ ಟೂರ್ನಿಯಲ್ಲಿ ಕಪ್‌ ಜಯಿಸಲು ಎಲ್ಲಾ 8 ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಹೀಗಿರುವಾಗಲೇ ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಬರಸಿಡಲಿನಂತೆ ಬಂದೆರಗಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಏಪ್ರಿಲ್‌ 9ರಿಂದ ಆರಂಭವಾಗಲಿದ್ದು, ಚೆಪಾಕ್‌ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೆಣಸಾಡಲಿವೆ.
undefined
ಇನ್ನು ಐಪಿಎಲ್ ಚೊಚ್ಚಲ ಆವೃತ್ತಿಯ ಚಾಂಪಿಯನ್ ರಾಜಸ್ಥಾನ ರಾಯಲ್ಸ್ ತಂಡವು ಮುಂಬೈನಲ್ಲಿ ಏಪ್ರಿಲ್‌ 12ರಂದು ತನ್ನ ಮೊದಲ ಪಂದ್ಯವನ್ನು ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಲಿದೆ.
undefined
ಪಂಜಾಬ್‌ ವಿರುದ್ದ ಗೆಲುವಿನೊಂದಿಗೆ ಶುಭಾರಂಭ ಮಾಡುವ ಲೆಕ್ಕಾಚಾರದಲ್ಲಿದ್ದ ರಾಜಸ್ಥಾನ ರಾಯಲ್ಸ್‌ ಪಾಲಿಗೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.
undefined
ರಾಜಸ್ಥಾನ ರಾಯಲ್ಸ್‌ನ ಮಾರಕ ವೇಗಿ ಜೋಫ್ರಾ ಆರ್ಚರ್‌ 14ನೇ ಆವೃತ್ತಿಯ ಐಪಿಎಲ್‌ನ ಮೊದಲ 4 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
undefined
ಭಾರತ ವಿರುದ್ಧ ಸರಣಿಗೂ ಮೊದಲು ಮನೆಯಲ್ಲಿ ಮೀನಿನ ತೊಟ್ಟಿ ಶುಚಿಗೊಳಿಸುವಾಗ ಗಾಜು ಒಡೆದು ಬಲಗೈ ಮಧ್ಯದ ಬೆರಳಿಗೆ ಗಾಯವಾಗಿತ್ತು. ಆದರೆ ಭಾರತ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಆರ್ಚರ್‌ ಆಡಿದ್ದರು.
undefined
ಮೊಣಕೈ ನೋವಿನ ಕಾರಣ ವೈದ್ಯಕೀಯ ತಪಾಸಣೆಗೆ ಒಳಪಟ್ಟ ವೇಳೆ ಅವರ ಬೆರಳಿನಲ್ಲಿ ಗಾಜಿನ ಚೂರೊಂದು ಉಳಿದುಕೊಂಡಿದ್ದು ಕಂಡುಬಂದಿದೆ. ಈ ಕಾರಣ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.
undefined
ಸದ್ಯದಲ್ಲೇ ಜೋಫ್ರಾ ಆರ್ಚರ್ ಐಪಿಎಲ್‌ನಲ್ಲಿ ಪಾಲ್ಗೊಳ್ಲಲು‌ ಲಂಡನ್‌ನಿಂದ ಭಾರತಕ್ಕೆ ಆಗಮಿಸಲಿದ್ದು, 7 ದಿನಗಳ ಕ್ವಾರಂಟೈನ್‌ ಬಳಿಕ ತಂಡ ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
undefined
ತಂಡದ ವೇಗದ ಅಸ್ತ್ರವಾಗಿ ಗುರುತಿಸಿಕೊಂಡಿರುವ ಜೋಫ್ರಾ ಆರ್ಚರ್‌ ಅನುಪಸ್ಥಿತಿ ಆರಂಭಿಕ ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವನ್ನು ಕಾಡುವ ಸಾಧ್ಯತೆಯಿದೆ.
undefined
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಸಂಜು ಸ್ಯಾಮ್ಸನ್‌ ಪೂರ್ಣಾವಧಿಗೆ ರಾಜಸ್ಥಾನ ರಾಯಲ್ಸ್‌ ತಂಡವನ್ನು ಮುನ್ನಡೆಸಲಿದ್ದಾರೆ.
undefined
click me!