IPL ಇತಿಹಾಸದಲ್ಲಿ ಈ 5 ದಾಖಲೆ ಮುರಿಯೋದು ಕನಸಿನ ಮಾತು..!

Suvarna News   | Asianet News
Published : Mar 30, 2021, 05:20 PM IST

ಬೆಂಗಳೂರು: ದಾಖಲೆಗಳು ಇರುವುದೇ ಬ್ರೇಕ್‌ ಮಾಡಲಿಕ್ಕೆ ಎನ್ನುವ ಮಾತೊಂದಿದೆ. ಕ್ರಿಕೆಟ್‌ನಲ್ಲಿ ದಾಖಲೆಗಳು ನಿರ್ಮಾಣ ಆಗುವುದು, ಆ ಬಳಿಕ ಆ ದಾಖಲೆಗಳನ್ನು ಮತ್ತೊಬ್ಬರು ಅಳಿಸಿ ಹಾಕುವುದು ಸರ್ವೇ ಸಾಮಾನ್ಯ. ಆದರೆ ಕಳೆದ 13 ವರ್ಷಗಳ ಅವಧಿಯಲ್ಲಿ ನಿರ್ಮಾಣವಾದ ಈ 5 ದಾಖಲೆಗಳನ್ನು ಅಳಿಸಿಹಾಕುವುದು ಕಷ್ಟಕರ ಮಾತ್ರವಲ್ಲ, ಅಸಾಧ್ಯ ಎಂದರೂ ತಪ್ಪಾಗಲಾರದು. ಅಷ್ಟಕ್ಕೂ ಯಾವುದವು ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
110
IPL ಇತಿಹಾಸದಲ್ಲಿ ಈ 5 ದಾಖಲೆ ಮುರಿಯೋದು ಕನಸಿನ ಮಾತು..!

1. ಒಂದೇ ಆವೃತ್ತಿಯಲ್ಲಿ 4 ಶತಕ ಚಚ್ಚಿದ್ದಾರೆ ವಿರಾಟ್ ಕೊಹ್ಲಿ

210

2016ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ನಾಯಕ ವಿರಾಟ್‌ ಕೊಹ್ಲಿ 4 ಶತಕ ಬಾರಿಸಿದ್ದಾರೆ. 2016ರಲ್ಲಿ ಒಟ್ಟು 16 ಐಪಿಎಲ್‌ ಪಂದ್ಯ ಆಡಿದ್ದ 81.08ರ ಸರಾಸರಿಯಲ್ಲಿ 4 ಶತಕ ಹಾಗೂ 7 ಅರ್ಧಶತಕ ಸಹಿತ 973 ರನ್‌ ಚಚ್ಚಿದ್ದು, ಈ ದಾಖಲೆ ಮುರಿಯೋದು ಸುಲಭದ ಮಾತಲ್ಲ.

310

2. ಪಂದ್ಯವೊಂದರಲ್ಲಿ ಕ್ರಿಸ್‌ ಗೇಲ್ ಅಜೇಯ 175 ರನ್‌ ಚಚ್ಚಿದ್ದು

410

ಆರ್‌ಸಿಬಿ ತಂಡದಲ್ಲಿದ್ದಾಗ ಕ್ರಿಸ್‌ ಗೇಲ್‌ ಪುಣೆ ವಾರಿಯರ್ಸ್‌ ವಿರುದ್ದ ಅಜೇಯ 175 ರನ್‌ ಬಾರಿಸಿದ್ದನ್ನು ಯಾವ ಕ್ರಿಕೆಟ್‌ ಅಭಿಮಾನಿ ಮರೆಯಲು ಸಾಧ್ಯ ಹೇಳಿ. ಐಪಿಎಲ್‌ ಕ್ರಿಕೆಟ್‌ನ ಇನಿಂಗ್ಸ್‌ವೊಂದರಲ್ಲಿ ಮತ್ತೊಬ್ಬ ಬ್ಯಾಟ್ಸ್‌ಮನ್ 175 ರನ್‌ ಬಾರಿಸುವುದು ಕನಸಿನ ಮಾತೇ ಸರಿ.

510

3. ಒಂದೇ ಓವರ್‌ನಲ್ಲಿ 37 ರನ್‌..!

3. ಒಂದೇ ಓವರ್‌ನಲ್ಲಿ 37 ರನ್‌..!

610

ಓವರ್‌ನಲ್ಲಿ ಹೆಚ್ಚೆಂದರೆ 36 ರನ್‌ ಬಾರಿಸಬಹುದು, ಅದರೆ ಆರ್‌ಸಿಬಿ ತಂಡದಲ್ಲಿದ್ದ ಕ್ರಿಸ್ ಗೇಲ್‌ 2011ರಲ್ಲಿ ಕೇರಳ ಟಸ್ಕರ್ಸ್‌ ವಿರುದ್ದ ಓವರ್‌ವೊಂದರಲ್ಲಿ 37 ರನ್‌ ಚಚ್ಚಿದ್ದರು. ಪ್ರಶಾಂತ್‌ ಪರಮೇಶ್ವರನ್ ಬೌಲಿಂಗ್‌ನಲ್ಲಿ ಗೇಲ್‌ 3 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ ಗೇಲ್‌ 36 ರನ್‌ ಬಾರಿಸಿದರೆ, ಇನ್ನೊಂದು ರನ್‌ ನೋ ಬಾಲ್‌ ರೂಪದಲ್ಲಿ ತಂಡದ ಖಾತೆಗೆ ಸೇರಿತ್ತು.

710

4. ಎಬಿಡಿ-ಕೊಹ್ಲಿ 229 ರನ್‌ಗಳ ಜತೆಯಾಟ

4. ಎಬಿಡಿ-ಕೊಹ್ಲಿ 229 ರನ್‌ಗಳ ಜತೆಯಾಟ

810

ಐಪಿಎಲ್‌ನಲ್ಲಿ ಕಿಲಾಡಿ ಜೋಡಿ ಎಂದೇ ಗುರುತಿಸಿಕೊಂಡಿರುವ ವಿರಾಟ್ ಕೊಹ್ಲಿ-ಎಬಿ ಡಿವಿಲಿಯರ್ಸ್‌ ಜೋಡಿ 2016ರಲ್ಲಿ ಗುಜರಾತ್ ಲಯನ್ಸ್‌ ವಿರುದ್ದದ ಪಂದ್ಯದಲ್ಲಿ ಎರಡನೇ ವಿಕೆಟ್‌ಗೆ 229 ರನ್‌ಗಳ ಜತೆಯಾಟ ನಿಭಾಯಿಸಿದ್ದರು. ಈ ಜತೆಯಾಟದ ದಾಖಲೆ ಕೂಡಾ ಬ್ರೇಕ್ ಆಗೋದು ಅನುಮಾನ.

910

5. ಅಲ್ಜೆರಿ ಜೋಸೆಫ್ ಬೆಸ್ಟ್ ಬೌಲಿಂಗ್‌: 12/6

5. ಅಲ್ಜೆರಿ ಜೋಸೆಫ್ ಬೆಸ್ಟ್ ಬೌಲಿಂಗ್‌: 12/6

1010

ಮುಂಬೈ ಇಂಡಿಯನ್ಸ್‌ ವೇಗಿಯಾಗಿದ್ದ ಅಲ್ಜೆರಿ ಜೋಸೆಫ್ 2019ರಲ್ಲಿ ತಮ್ಮ ಪಾದಾರ್ಪಣೆಯ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ಕೇವಲ 12 ರನ್‌ ನೀಡಿ 6 ವಿಕೆಟ್‌ ಕಬಳಿಸುವ ಮೂಲಕ ಬೆಸ್ಟ್ ಬೌಲಿಂಗ್ ಮಾಡಿದ ದಾಖಲೆ ಮಾಡಿದ್ದಾರೆ. ಈ ಹಿಂದೆ ಸೋಹೆಲ್ ತನ್ವೀರ್‌ 14 ರನ್ ನೀಡಿ 6 ವಿಕೆಟ್‌ ಪಡೆದಿದ್ದರು, ಆದರೆ ಅಲ್ಜೆರಿ ಜೋಸೆಫ್‌ ಕೇವಲ 12 ರನ್‌ ನೀಡಿ 6 ವಿಕೆಟ್‌ ಕಬಳಿಸುವುದು ಚುಟುಕು ಕ್ರಿಕೆಟ್‌ ಕ್ರಿಕೆಟ್‌ನಲ್ಲಿ ಸುಲಭದ ಮಾತಲ್ಲ. ಹೀಗಾಗಿ ಈ ದಾಖಲೆ ಬ್ರೇಕ್ ಆಗೋದು ಡೌಟ್.

click me!

Recommended Stories