ಇಂಗ್ಲೆಂಡ್ ಪ್ರವಾಸದ ವೇಳೆ ಶಾರ್ದೂಲ್ ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಾರಣ ಸೋಶಿಯಲ್ ಮೀಡಿಯಾ ಲಾರ್ಡ್ ಬಿರುದು ನೀಡಿತ್ತು.
ರುತುರಾಜ್ ಗಾಯಕ್ವಾಡ್ ಬ್ಯಾಟಿಂಗ್ ಹಾಗೂ ಧೋನಿ ಚಾಣಾಕ್ಷ ನಾಯಕತ್ವದಿಂದ ಚೆನ್ನೈ 20 ರನ್ ಗೆಲವು ಕಂಡಿದೆ. ಈ ಗೆಲುವಿನೊಂದಿಗೆ ಚೆನ್ನೈ ಅಂಕಪಟ್ಟಿಯಲ್ಲಿ ಮತ್ತೆ ಮೊದಲ ಸ್ಥಾನಕ್ಕೇರಿದೆ.
ಚೆನ್ನೈ ಪರ ಬ್ಯಾಟಿಂಗ್ ಗೆ ಇಳಿದ ಶಾರ್ದೂಲ್ ಗಳಿಸಿದ್ದು ಒಂದೇ ರನ್.. ಆದರೆ ಅವರು ಗಳಿಸಿದ್ದು ತಂಡದ 150 ನೇ ರನ್ ಇದೇ ಕಾರಣಕ್ಕೆ ಮತ್ತೆ ಟ್ರೆಂಡ್ ಆದರು.
ಶಾರ್ದೂಲ್ ಠಾಕೂರ್ ಬೌಲಿಂಗ್ ನಲ್ಲಿ ಒಂದು ವಿಕೆಟ್ ಕಿತ್ತರು. ಸೂರ್ಯ ಕುಮಾರ್ ಯಾದವ್ ಅವರನ್ನು ಔಟ್ ಮಾಡಿದರು. ಇದು ಸಹ ಮಹತ್ವದ ವಿಕೆಟ್.
ಲಾರ್ಡ್ ಶಾರ್ದೂಲ್ ಅವರಿಂದಲೇ ಕ್ರಿಕೆಟ್ ನಡೆಯುತ್ತಿದೆ.. ಅವರು ಆಃಆರ ತಿನ್ನುವುದು ಕ್ರಿಕೆಟ್ ನಿಂದಲೇ.. ಅವರು ಸ್ಮೈಲ್ ಮಾಡುವುದು ಕ್ರಿಕೆಟ್ ನಿಂದಲೇ ಎಂದೆಲ್ಲಾ ಕಮೆಂಟ್ ಗಲು ಹರಿದಾಡಿವೆ.
ನಾನು ಮೆಮೆ ಮತ್ತು ಟ್ರೋಲ್ ಗಳನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಶಾರ್ದೂಲ್ ಈ ಹಿಂದೆ ಟ್ರೆಂಡ್ ಆದಾಗ ಹೇಳಿದ್ದರು. ಸೋಶಿಯಲ್ ಮೀಡಿಯಾದ ಬಿರುದನ್ನು ಅವರು ಒಪ್ಪಿಕೊಂಡಿದ್ದರು.
ಚಾಂಪಿಯನ್ ಬ್ರಾವೋ.. ಸರ್ ರವೀಂದ್ರ ಜಡೇಜಾ ಜತೆ ಈಗ ಲಾರ್ಡ್ ಶಾರ್ದೂಲ್ ಸೇರಿಕೊಂಡಿದೆ. ಒಟ್ಟಿನಲ್ಲಿ ಅಭಿಮಾನಿಗಳು ಪ್ರತಿಕ್ರಿಯೆ ನೀಡುವ ರೀತಿಯನ್ನು ಮಾತ್ರ ಮೆಚ್ಚಿಕೊಳ್ಳಬೇಕು .