ಐಪಿಎಲ್‌ 2021: ಪ್ರತಿ ತಂಡದ ಪ್ಲೇ-ಆಫ್‌ ಲೆಕ್ಕಾಚಾರ ಹೇಗೆ?

First Published | Sep 18, 2021, 12:59 PM IST

ಬೆಂಗಳೂರು: 14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಯುಎಇ ಚರಣದ ಪಂದ್ಯಗಳಿಗೆ ಕ್ಷಣಗಣನೆ ಆರಂಭವಾಗಿದೆ. ಸೆಪ್ಟೆಂಬರ್ 19ರಿಂದ ಐಪಿಎಲ್‌ ಭಾಗ 2 ಆರಂಭವಾಗಲಿದ್ದು, ಎಲ್ಲಾ ತಂಡಗಳು ಪ್ಲೇ ಆಫ್‌ಗೇರಲು ಸಕಲ ರಣತಂತ್ರಗಳನ್ನು ರೂಪಿಸಿದೆ. ಸದ್ಯ ಯಾವ ತಂಡಗಳು ಎಷ್ಟು ಪಂದ್ಯಗಳನ್ನು ಜಯಿಸಿದರೆ ಫ್ಲೇ ಆಫ್‌ಗೇರಲಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ
 

ಡೆಲ್ಲಿ ಕ್ಯಾಪಿಟಲ್ಸ್‌- ಪಂದ್ಯ ಬಾಕಿ: 06, ಬೇಕಿರುವ ಗೆಲುವು: 02

8 ಪಂದ್ಯಗಳಲ್ಲಿ 6ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಬಾಕಿಯಿರುವ 6 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ ಸಾಕು ಪ್ಲೇ-ಆಫ್‌ಗೆ ಪ್ರವೇಶ ಸಿಗಲಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 03

2020ರಲ್ಲಿ ಕಳಪೆ ಆಟವಾಡಿದ್ದ ಚೆನ್ನೈ, ಈ ವರ್ಷ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ನೇ ಸ್ಥಾನದಲ್ಲಿದೆ. 7 ಪಂದ್ಯ ಬಾಕಿ ಇದ್ದು, ಕನಿಷ್ಠ 3ರಲ್ಲಿ ಗೆದ್ದರೆ ದಾಖಲೆಯ 11ನೇ ಬಾರಿಗೆ ಪ್ಲೇ-ಆಫ್‌ಗೇರಲಿದೆ.

Tap to resize

ಆರ್‌ಸಿಬಿ- ಪಂದ್ಯ ಬಾಕಿ: 7, ಬೇಕಿರುವ ಗೆಲುವು: 03

ಸತತ 4 ಗೆಲುವುಗಳೊಂದಿಗೆ ಟೂರ್ನಿ ಆರಂಭಿಸಿದ ಕೊಹ್ಲಿ ಪಡೆ, 7 ಪಂದ್ಯಗಳಲ್ಲಿ 5 ಗೆಲುವು ಸಾಧಿಸಿ 3ನೇ ಸ್ಥಾನದಲ್ಲಿದೆ. ಬಾಕಿ ಇರುವ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದರೆ ಪ್ಲೇ-ಆಫ್‌ನಲ್ಲಿ ಸ್ಥಾನ ಸಿಗಲಿದೆ.

ಮುಂಬೈ ಇಂಡಿಯನ್ಸ್‌- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 04

ಆರಂಭದಲ್ಲಿ ಎಡವಿದರೂ ಪುಟಿದೆದ್ದ ಹಾಲಿ ಚಾಂಪಿಯನ್‌ ಮುಂಬೈ, 7 ಪಂದ್ಯಗಳಲ್ಲಿ 4 ಗೆಲುವು ಕಂಡು 4ನೇ ಸ್ಥಾನದಲ್ಲಿದೆ. ಉಳಿದಿರುವ 7 ಪಂದ್ಯಗಳಲ್ಲಿ 4 ಗೆಲುವು ಸಾಧಿಸಬೇಕಿದೆ.

ರಾಜಸ್ಥಾನ ರಾಯಲ್ಸ್‌ - ಪಂದ್ಯ ಬಾಕಿ: 07, ಬೇಕಿರುವ ಗೆಲುವು: 04

ಸಂಜು ಸ್ಯಾಮ್ಸನ್‌ ಪಡೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ತಂಡ ಕೆಲ ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಬಾಕಿ ಇರುವ 7 ಪಂದ್ಯಗಳಲ್ಲಿ 4ರಲ್ಲಿ ಗೆಲ್ಲಲೇ ಬೇಕಿದೆ.

ಪಂಜಾಬ್‌ ಕಿಂಗ್ಸ್‌- ಪಂದ್ಯ ಬಾಕಿ: 06, ಬೇಕಿರುವ ಗೆಲುವು: 05

ರಾಹುಲ್‌ ನೇತೃತ್ವದ ಪಂಜಾಬ್‌ ಅತ್ಯುತ್ತಮ ತಂಡ ಹೊಂದಿದ್ದರೂ ಉತ್ತಮ ಆಟವಾಡುವಲ್ಲಿ ಎಡವಿದೆ. 8 ಪಂದ್ಯಗಳಲ್ಲಿ ಕೇವಲ 3ರಲ್ಲಿ ಗೆದ್ದಿದ್ದು, ಬಾಕಿ ಇರುವ 6ರಲ್ಲಿ 5 ಪಂದ್ಯ ಗೆಲ್ಲಬೇಕಿದೆ.

ಕೋಲ್ಕತಾ ನೈಟ್‌ರೈಡ​ರ್ಸ್‌- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 05

ಕೆಕೆಆರ್‌ ತಂಡದ ಪ್ಲೇ-ಆಫ್‌ ಹಾದಿಯೂ ಬಹಳ ಕಠಿಣವಾಗಿದೆ. ತಂಡ 7ನೇ ಸ್ಥಾನದಲ್ಲಿದ್ದು, ಬಾಕಿ ಇರುವ 7 ಪಂದ್ಯಗಳಲ್ಲಿ ಕನಿಷ್ಠ 5ರಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಸನ್‌ರೈಸ​ರ್ಸ್‌ ಹೈದರಾಬಾದ್‌- ಪಂದ್ಯ ಬಾಕಿ: 07, ಬೇಕಿರುವ ಗೆಲುವು: 06

7 ಪಂದ್ಯಗಳಲ್ಲಿ ಕೇವಲ 1 ಗೆಲುವು ಕಂಡಿರುವ ಸನ್‌ರೈಸ​ರ್ಸ್‌ ಕೊನೆ ಸ್ಥಾನದಲ್ಲಿದೆ. ವಿಲಿಯಮ್ಸನ್‌ರ ತಂಡ ಪ್ಲೇ-ಆಫ್‌ಗೇರಬೇಕಿದ್ದರೆ ಬಾಕಿ ಇರುವ 7 ಪಂದ್ಯಗಳಲ್ಲಿ 6ರಲ್ಲಿ ಗೆಲ್ಲಬೇಕು.

Latest Videos

click me!