ಪತಿ & ಆರ್‌ಸಿಬಿಯ ಈ ಆಟಗಾರನ ಜತೆ ಲೇಟ್‌ ನೈಟ್ ಪಾರ್ಟಿಯಲ್ಲಿ ಕಾಣಿಸಿಕೊಂಡ ಚಹಲ್ ಪತ್ನಿ ಧನಶ್ರೀ..!

First Published | Sep 19, 2021, 12:08 PM IST

ದುಬೈ: ಕ್ರಿಕೆಟ್ ಅಭಿಮಾನಿಗಳಲ್ಲಿ ಐಪಿಎಲ್‌ ಜ್ವರ ಕಾವೇರುತ್ತಿದ್ದು, ಇಂದಿನಿಂದ(ಸೆ.19) ಯುಎಇನಲ್ಲಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಯುಎಇ ಚರಣದ ಪಂದ್ಯಗಳು ಆರಂಭವಾಗಲಿದೆ. ಸೂಪರ್ ಸಂಡೇಯ ಬ್ಲಾಕ್‌ ಬಸ್ಟರ್ ಪಂದ್ಯಕ್ಕೂ ಮುನ್ನ ಆರ್‌ಸಿಬಿ ಕ್ರಿಕೆಟಿಗರು ಲೇಟ್‌ ನೈಟ್ ಪಾರ್ಟಿ ಮಾಡಿದ್ದಾರೆ. ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್‌ಗಳಾದ ಯುಜುವೇಂದ್ರ ಚಹಲ್, ಮೊಹಮ್ಮದ್ ಸಿರಾಜ್ ಜತೆ ಚಹಲ್ ಪತ್ನಿ ಧನಶ್ರೀ ವರ್ಮಾ ಕೂಡಾ ಲೇಟ್‌ ನೈಟ್‌ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಶನಿವಾರ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಧನಶ್ರೀ ವರ್ಮಾ ಕೆಲವೊಂದು ಫೋಟೋಗಳನ್ನು ಹಂಚಿಕೊಂಡಿದ್ದು, ಈ ಫೋಟೋಗಳು ಸಾಕಷ್ಟು ವೈರಲ್ ಆಗಿವೆ.

ಯುಜುವೇಂದ್ರ ಚಹಲ್ ಪತ್ರಿ ಧನಶ್ರೀ ವರ್ಮಾ ಶನಿವಾರ ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ಎರಡು ಲೇಟ್‌ ನೈಟ್‌ ಪಾರ್ಟಿಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಧನಶ್ರೀ ತಮ್ಮ ಪತಿ ಚಹಲ್ ಹಾಗೂ ವೇಗಿ ಸಿರಾಜ್ ಜತೆಗೂಡಿ ಪಾರ್ಟಿ ಎಂಜಾಯ್ ಮಾಡುತ್ತಿರುವಂತೆ ಕಂಡು ಬಂದಿದೆ.

ಇನ್ನೊಂದು ಫೋಟೋದಲ್ಲಿ ಧನಶ್ರೀ ಒಬ್ಬರೇ ಇರುವ ಸೆಲ್ಫಿ ಫೋಟೋ ಹಂಚಿಕೊಂಡಿದ್ದಾರೆ. ಬಿಳಿ ಬಣ್ಣದ ಟಾಪ್‌ನೊಂದಿಗೆ ಓಪನ್ ಹೇರ್ ಬಿಟ್ಟುಕೊಂಡಿರುವ ಫೋಟೋ ಇದಾಗಿದ್ದು, ಸಹಜ ಸುಂದರಿಯಂತೆ ಕಂಡು ಬಂದಿದ್ದಾರೆ.

Tap to resize

ಆರ್‌ಸಿಬಿ ಆಟಗಾರರು ಹಾಗೂ ಧನಶ್ರೀ ವರ್ಮಾ ಅವರು ಒಟ್ಟಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಕಳೆದ ಕೆಲವು ಸಮಯಗಳಿಂದಲೇ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಯುಎಇನಲ್ಲಿ ಸಾಕಷ್ಟು ಸಮಯ ಕಳೆದಿದ್ದಾರೆ. ಅಲ್ಲಿಂದಲೇ ಧನಶ್ರೀ ಈ ಹಿಂದೆ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.
 

ಇದಕ್ಕೂ ಮೊದಲು ಧನಶ್ರೀ ವರ್ಮಾ ಒಂದು ಡ್ಯಾನ್ಸ್‌ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಪರಮ್ ಸುಂದರಿ ಹಾಡಿಗೆ ಚಹಲ್ ಮಡದಿ ಸ್ಟೆಪ್ ಹಾಕಿದ್ದರು.

ಇನ್ನೊಂದೆಡೆ ಧನಶ್ರೀ ವರ್ಮಾ ಪತಿ ಯುಜುವೇಂದ್ರ ಚಹಲ್‌ ಯುಎಇ ಚರಣದ ಪಂದ್ಯದಲ್ಲಿ ಆರ್‌ಸಿಬಿ ಪರ ಮಿಂಚಲು ತುದಿಗಾಲಿನಲ್ಲಿ ನಿಂತಿದ್ದಾರೆ. ಸೆಪ್ಟೆಂಬರ್ 20ರಂದು ಆರ್‌ಸಿಬಿ ತಂಡವು ಅಬುಧಾಬಿಯಲ್ಲಿ ಕೋಲ್ಕತ ನೈಟ್‌ ರೈಡರ್ಸ್ ವಿರುದ್ದ ಮೊದಲ ಪಂದ್ಯವನ್ನಾಡಲಿದೆ.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ 7 ಪಂದ್ಯಗಳನ್ನಾಡಿ 5 ಗೆಲುವು ಹಾಗೂ 2 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ಕೆಕೆಆರ್ ತಂಡವು 7 ಪಂದ್ಯಗಳನ್ನಾಡಿ ಕೇವಲ 2 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ.

Latest Videos

click me!