ಮಾ.11ರಿಂದ CSK ತರಬೇತಿ ಶಿಬಿರ; ಚೆನ್ನೈಗೆ ತೆರಳಲಿದ್ದಾರೆ ನಾಯಕ ಧೋನಿ!

Published : Mar 01, 2021, 07:02 PM IST

IPL 2021 ಟೂರ್ನಿಗೆ ಫ್ರಾಂಚೈಸಿಗಳ ತಯಾರಿ ಆರಂಭಗೊಂಡಿದೆ. ಹರಾಜಿನಲ್ಲಿ ಆಟಗಾರರ ಖರೀದಿಸಿರುವ ಫ್ರಾಂಚೈಸಿಗಳು ಇದೀಗ ಜೂನಿಯರ್ ಕ್ರಿಕೆಟಿಗರಿಗೆ ಅಭ್ಯಾಸ ಶಿಬಿರಗಳನ್ನು ಆಯೋಜಿಸುತ್ತಿದೆ. ಇತ್ತ ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 11 ರಿಂದ  ಅಭ್ಯಾಸ ಶಿಬಿರ ಆಯೋಜಿಸಿದೆ. ನಾಯಕ ಧೋನಿ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

PREV
17
ಮಾ.11ರಿಂದ CSK ತರಬೇತಿ ಶಿಬಿರ; ಚೆನ್ನೈಗೆ ತೆರಳಲಿದ್ದಾರೆ ನಾಯಕ ಧೋನಿ!

ಮುಂಬರುವ 2021ರ ಐಪಿಎಲ್ ಆಯೋಜನೆಗೆ ಬಿಸಿಸಿಐ ತೆಲೆಕೆಡಿಸಿಕೊಂಡಿದೆ. ಕ್ರೀಡಾಂಗಣ, ವೇಳಾಪಟ್ಟಿ ಸೇರಿದಂತೆ ಹಲವು ಪ್ರಮುಖ ವಿಚಾರಗಳು ಅಂತಿಮಗೊಂಡಿಲ್ಲ. ಆದರೆ ಫ್ರಾಂಚೈಸಿಗಳ ತಯಾರಿ ಈಗಾಗಲೇ ಆರಂಭಗೊಂಡಿದೆ.

27

ಚೆನ್ನೈ ಸೂಪರ್ ಕಿಂಗ್ಸ್ ಮಾರ್ಚ್ 11 ರಿಂದ ಚೆನ್ನೈನಲ್ಲಿ ಅಭ್ಯಾಸ ಶಿಬಿರ ಆಯೋಜಿಸಿದೆ. ಈ ಶಿಬಿರದಲ್ಲಿ ನಾಯಕ ಎಂ.ಎಸ್.ಧೋನಿ ಸೇರಿದಂತೆ ಸ್ಟಾರ್ ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ.

37

ಧೋನಿ ಲಭ್ಯರಿದ್ದಾರೆ. ಇನ್ನುಳಿದಂತೆ ಲಭ್ಯವಿರುವ ಕ್ರಿಕೆಟಿಗರು ಮೊದಲ ದಿನದಿಂದಲೇ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಟೀಂ ಇಂಡಿಯಾ ಹಾಗೂ ವಿದೇಶಿ ಕ್ರಿಕೆಟಿಗರು ಶೀಘ್ರದಲ್ಲೇ ಸೇರಿಕೊಳ್ಳಲಿದ್ದಾರೆ ಎಂದು ಸಿಎಸ್‌ಕೆ ಹೇಳಿದೆ.

47

ಸುರೇಶ್ ರೈನಾ, ಹರ್ಭಜನ್ ಸಿಂಗ್ ತಂಡದಿಂದ ಹೊರಗುಳಿದ ಬೆನ್ನಲ್ಲೇ ಕೆಲ ಆಟಗಾರರಿಗೆ ಕೊರೋನಾ ಕೂಡ ಅಂಟಿಕೊಂಡಿತ್ತು. ಹೀಗಾಗಿ ಸಿಎಸ್‍ಕೆ ತಂಡದಲ್ಲಿ ಕೆಲ ಗೊಂದಲಗಳೂ ಮೂಡಿತ್ತು

57

ಸುರೇಶ್ ರೈನಾ ಕೂಡ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ಕಳೆದ ಬಾರಿ ಅನುಭವಿಸಿದ ಕಹಿ ನೆನಪಿಗೆ ಸೇಡು ತೀರಿಸಲು ಸಿಎಸ್‌ಕೆ ಭರ್ಜರಿ ಅಭ್ಯಾಸ ಆರಂಭಿಸಲು ನಿರ್ಧರಿಸಿದೆ

67

2020ರ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳಪೆ ಪ್ರದರ್ಶನ ನೀಡಿತ್ತು. ತಂಡದ ಬಹುತೇಕ ಎಲ್ಲಾ ಆಟಗಾರರು ಕಳಪೆ ಪ್ರದರ್ಶನ ತೋರಿದ್ದರು.

77

ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪ್ಲೇ ಆಫ್ ಹಂತಕ್ಕೆ ಲಗ್ಗೆ ಇಡಲು ಸಾಧ್ಯವಾಗದೇ, ಲೀಗ್ ಹಂತದಿಂದಲೇ ಹೊರಬಿದ್ದಿತ್ತು.

click me!

Recommended Stories