ವಿಶ್ವದ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ರೋಹಿತ್ ಶರ್ಮಾ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಅವರು ಭಾರತದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 6 ಸಾವಿರ ರನ್‌ಗಳನ್ನು ಪೂರ್ಣಗೊಳಿಸಿದ ಒಂಬತ್ತನೇ ಭಾರತೀಯ ಬ್ಯಾಟ್ಸ್‌ಮನ್.
ತಮ್ಮ 20ನೇ ವಯಸ್ಸಿನಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನವನ್ನು ಪ್ರಾರಂಭಿಸಿದ ರೋಹಿತ್ ಶರ್ಮಾ ಇಂದು ವಿಶ್ವದ ಅಗ್ರ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡ ಅವರ ನಾಯಕತ್ವದಲ್ಲಿ 5 ಬಾರಿ ಪ್ರಶಸ್ತಿಗೆದ್ದುಕೊಂಡಿದೆ.
ಶರ್ಮಾ ರಿತಿಕಾ ಸಜ್ದೇಹ್ ಜೊತೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಆದರೆ ಅದಕ್ಕೂ ಮೊದಲು ಇವರ ಹೆಸರು ಬಾಲಿವುಡ್ ನಟಿಯಿಂದ ಹಿಡಿದು ಸ್ಕೂಲ್ ಫ್ರೆಂಡ್‌ವರೆಗೆ ಅನೇಕರೊಂದಿಗೆ ಥಳಕು ಹಾಕಿ ಕೊಂಡಿತು.
11ನೇ ತರಗತಿಯಲ್ಲಿ ಮೊದಲ ಬಾರಿಗೆತನ್ನ ಸಹಪಾಠಿಗೆ ಮನಸೋತ ರೋಹಿತ್ ಆಕೆ ಪ್ರಪೋಸ್ ಮಾಡಿದ್ದರಂತೆ. ಆದರೆ ಈ ಸಂಬಂಧವು ಶಾಲೆಯ ನಂತರ ಕೊನೆಗೊಂಡಿತು.
ನಂತರ ರೋಹಿತ್ ಹೈದರಾಬಾದ್‌ನ ಹುಡುಗಿಯೊಬ್ಬಳನ್ನು ಭೇಟಿಯಾಗಿದ್ದರು.ಅವರ ಫ್ಯಾಮಿಲಿ ಫ್ರೆಂಡ್ ಕೂಡ ಆಗಿದ್ದರು. ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಸಾಕಷ್ಟು ಗಂಭೀರವಾಗಿದ್ದರು, ಆದರೆ ಸ್ವಲ್ಪ ಸಮಯದ ನಂತರ, ಇಬ್ಬರೂ ಬೇರೆಯಾದರು.
ಬಾಲಿವುಡ್‌ನಲ್ಲಿ ಬೋಲ್ಡ್ ಸ್ಟೈಲ್‌ನಿಂದ ಹೆಸರುವಾಸಿಯಾಗಿದ್ದ ನಟಿ ಸೋಫಿಯಾ ಹಯಾತ್ ಅವರನ್ನುರೋಹಿತ್ ಶರ್ಮಾ ಹುಚ್ಚನಂತೆ ಪ್ರೀತಿಸುತ್ತಿದ್ದರು, ಎಂಬ ಸುದ್ದಿಯೂ ಹರಿದಾಡುತ್ತಿತ್ತು.
2012ರಲ್ಲಿ ತಾನು ರೋಹಿತ್ ಜೊತೆ ಡೇಟಿಂಗ್ ಮಾಡುತ್ತಿದ್ದೆ ಎಂದು ಸೋಫಿಯಾ ಸ್ವತಃ ಬಹಿರಂಗಪಡಿಸಿದರು. ಆದರೆ ಸ್ವಲ್ಪ ಸಮಯದ ನಂತರ ಇಬ್ಬರೂ ಬೇರ್ಪಟ್ಟರು.
3 ಹುಡುಗಿಯರ ಜೊತೆಯ ರಿಲೆಷನ್‌ಶಿಪ್ನಂತರ ರೋಹಿತ್ ಶರ್ಮಾ ರಿತಿಕಾ ಸಜ್ದೇಹ್ ಅವರನ್ನು ಭೇಟಿಯಾದರು. ಇವರ ಲವ್‌ಸ್ಟೋರಿ ಸಿನಿಮಾ ಕಥೆಗಿಂತ ಕಡಿಮೆಯಿಲ್ಲ. ಈ ಹಿಂದೆ ರೋಹಿತ್‌ರ ಮ್ಯಾನೇಜರ್ ಆಗಿದ್ದ ರಿತಿಕಾ ಈಗ ಮಡದಿಯಾಗಿದ್ದಾರೆ.
ವಾಸ್ತವವಾಗಿ, ಸ್ಪೋರ್ಟ್ಸ್ ಈವೆಂಟ್ ಮ್ಯಾನೇಜರ್ ಆಗಿದ್ದ ರಿತಿಕಾ ರೋಹಿತ್ ಅವರ ಕ್ರಿಕೆಟ್ ಮ್ಯಾನೇಜರ್ ಆಗಿ ಕೆಲಸ ಮಾಡಿದರು. ಇಬ್ಬರ ನಡುವಿನ ಸ್ನೇಹ ಬಹು ಬೇಗಪ್ರೀತಿಯಾಗಿ ಬದಲಾಯಿತು. ಅವರು ಮದುವೆಯಾಗಲು ನಿರ್ಧರಿಸಿದರು.
ಮುಂಬೈನ ಬೊರಿವಲಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ರೋಹಿತ್ ಬಾಲಿವುಡ್ ಸ್ಟೈಲ್‌ನಲ್ಲಿ ಮೊಣಕಾಲುಗಳ ಮೇಲೆ ಕುಳಿತು ಕೈಯಲ್ಲಿ ಉಂಗುರ ಹಿಡಿದು ರಿತಿಕಾರನ್ನು ಪ್ರಪೋಸ್ ಮಾಡಿದ್ದರು. ತಕ್ಷಣವೇ ಈ ಪ್ರಪೋಸಲ್‌ಗೆ ರಿತಿಕಾ ಏಕೆ ಹೇಳಿದರು.
13 ಡಿಸೆಂಬರ್ 2015 ರಂದು ವಿವಾಹವಾದರೋಹಿತ್ ಮತ್ತು ರಿತಿಕಾ ಕಪಲ್‌ಗೆ3 ವರ್ಷಗಳ ತಮ್ಮ ಜೀವನಕ್ಕೆ ಅದರಾ ಎಂಬ ಮಗಳನ್ನು ಸ್ವಾಗತಿಸಿದರು.
ಪ್ರಸ್ತುತ, ಭಾರತ ಮತ್ತು ಇಂಗ್ಲೆಂಡ್ ಟೆಸ್ಟ್ ಸೀರಿಸ್‌ನಲ್ಲಿ ಬ್ಯುಸಿ ಇದ್ದಾರೆ ರೋಹಿತ್.