6 ಬೆಡ್‌ ರೂಮ್ ಐಶಾರಾಮಿ ಮನೆ ಖರೀದಿಸಿದ ಕ್ರಿಕೆಟಿಗ ರಿಂಕು ಸಿಂಗ್! ಇದು ಮನೆಯಲ್ಲ ಅರಮನೆ ಎಂದ ಫ್ಯಾನ್ಸ್

First Published | Nov 15, 2024, 1:30 PM IST

ಬಡತನದ ಹಿನ್ನೆಲೆಯಿಂದ ಬೆಳೆದು ಬಂದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ರಿಂಕು ಸಿಂಗ್, ಇದೀಗ ಐಶಾರಾಮಿ ಬಂಗ್ಲೆ ಖರೀದಿಸಿದ್ದು, ಹೊಸ ಮನೆಯ ವಿಡಿಯೋ ಹಂಚಿಕೊಂಡಿದ್ದಾರೆ. ರಿಂಕು ಮನೆ ನೋಡಿದ ಫ್ಯಾನ್ಸ್, ಇದು ಮನೆಯಲ್ಲ ಅರಮನೆ ಎಂದು ಕೊಂಡಾಡಿದ್ದಾರೆ.

ಐಪಿಎಲ್ ಮೆಗಾ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಇದೇ ನವೆಂಬರ್ 24-25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ. ಈ ಹರಾಜಿಗೂ ಮುನ್ನ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್‌, ಬರೋಬ್ಬರಿ 13 ಕೋಟಿ ರುಪಾಯಿ ನೀಡಿ ರಿಂಕು ಅವರನ್ನು ರೀಟೈನ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ಆದರೆ ಅಚ್ಚರಿ ರೀತಿಯಲ್ಲಿ ದಶಕದ ಬಳಿಕ ಕೆಕೆಆರ್ ತಂಡವನ್ನು ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೆಕೆಆರ್ ಉಳಿಸಿಕೊಂಡಿಲ್ಲ. ರಿಂಕು ಸಿಂಗ್ ನಂತರ ವರುಣ್ ಚಕ್ರವರ್ತಿ, ಸುನಿಲ್ ನರೈನ್, ಆಂಡ್ರೆ ರಸೆಲ್ ಅವರನ್ನು 12 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ. ವೇಗದ ಬೌಲರ್‌ಗಳಾದ ಹರ್ಷಿತ್ ರಾಣಾ ಮತ್ತು ರಮಣದೀಪ್ ಸಿಂಗ್ ಅವರನ್ನು 4 ಕೋಟಿ ರೂ.ಗೆ ಉಳಿಸಿಕೊಳ್ಳಲಾಗಿದೆ.

Latest Videos


ಕಳೆದ ಋತುವಿನ ಐಪಿಎಲ್ ಆಟಗಾರರ ಹರಾಜಿನಲ್ಲಿ 24.75 ಕೋಟಿ ರೂ.ಗೆ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಅವರನ್ನು ಕೆಕೆಆರ್ ಖರೀದಿಸಿತ್ತು. ಇದೀಗ ಎಡಗೈ ವೇಗಿಯನ್ನು ತಂಡದಿಂದ ರಿಲೀಸ್ ಮಾಡಿದೆ. ಆದರೆ, ಅವರನ್ನು ಹರಾಜಿನಲ್ಲಿ ಖರೀದಿಸುವ ಸಾಧ್ಯತೆ ಇದೆ. ಈ ಆರು ಆಟಗಾರರಿಗೆ ಕೆಕೆಆರ್ 57 ಕೋಟಿ ರೂ. ಖರ್ಚು ಮಾಡಿದೆ. ಐಪಿಎಲ್ 2025ರ ಮೆಗಾ ಹರಾಜಿಗೆ ಕೆಕೆಆರ್ 63 ಕೋಟಿ ರುಪಾಯಿ ಉಳಿಸಿಕೊಂಡಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ಕೆಕೆಆರ್ ಬಿಡುಗಡೆ ಮಾಡಿದ ಆಟಗಾರರ ಪಟ್ಟಿ

ಶ್ರೇಯಸ್ ಅಯ್ಯರ್, ನಿತೀಶ್ ರಾಣಾ, ರೆಹಮಾನುಲ್ಲಾ ಗುರ್ಬಾಜ್, ಫಿಲ್ ಸಾಲ್ಟ್, ಸುಯಾಶ್ ಶರ್ಮಾ, ಅನುಕೂಲ್ ರಾಯ್, ವೆಂಕಟೇಶ್ ಅಯ್ಯರ್, ವೈಭವ್ ಅರೋರಾ, ಕೆ.ಎಸ್. ಭರತ್, ಚೇತನ್ ಸಕಾರಿಯಾ, ಮಿಚೆಲ್ ಸ್ಟಾರ್ಕ್, ಅಂಗ್‌ಕೃಷ್ ರಘುವಂಶಿ, ಮನೀಷ್ ಪಾಂಡೆ, ಅಲ್ಲಾ ಘಜನ್‌ಫರ್, ದುಷ್ಮಂತ ಚಮೀರಾ, ಶಕೀಬ್ ಅಲ್ ಹಸನ್, ಜೇಸನ್ ರಾಯ್, ಗಸ್ ಅಟ್ಕಿನ್ಸನ್, ಮುಜೀಬ್ ಉರ್ ರೆಹಮಾನ್

ಹೊಸ ಮನೆ ಖರೀದಿಸಿದ ರಿಂಕು

2023ರ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್‌ನ ರಿಂಕು ಸಿಂಗ್ ಒಂದೇ ಓವರ್‌ನಲ್ಲಿ 5 ಸಿಕ್ಸರ್‌ ಬಾರಿಸಿ ಎಲ್ಲರ ಗಮನ ಸೆಳೆದರು. ಐಪಿಎಲ್ ಮೂಲಕ ಭಾರತ ತಂಡಕ್ಕೆ ಲಗ್ಗೆಯಿಡುವಲ್ಲೂ ಯಶಸ್ವಿಯಾಗಿದ್ದಾರೆ. ರಿಂಕು ಸಿಂಗ್ ಕೆಕೆಆರ್ ತಂಡದ ಅತ್ಯಂತ ನಂಬಿಗಸ್ಥ ಮ್ಯಾಚ್ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. 

ಮುಂಬರುವ ಐಪಿಎಲ್ ಟೂರ್ನಿಗೂ ಮುನ್ನ ರಿಂಕು ಸಿಂಗ್ ಅವರನ್ನು ಕೆಕೆಆರ್ ಫ್ರಾಂಚೈಸಿ ನಾಯಕರನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇದೆಲ್ಲದರ ನಡುವೆ ರಿಂಕು ಸಿಂಗ್, 13 ಕೋಟಿ ರುಪಾಯಿಗೆ ಕೆಕೆಆರ್ ಫ್ರಾಂಚೈಸಿ ರೀಟೈನ್ ಮಾಡಿದ ಬೆನ್ನಲ್ಲೇ  ಉತ್ತರ ಪ್ರದೇಶದ ಅಲಿಘರ್‌ನಲ್ಲಿ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ.

ತೀರಾ ಕಡು ಬಡನತದ ಹಿನ್ನೆಯಿಂದ ಬಂದ ರಿಂಕು ಸಿಂಗ್, ಕಳೆದ 6 ಆವತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ಭಾಗವಾಗಿದ್ದರು. 2024ರ ಐಪಿಎಲ್ ಟೂರ್ನಿಯಲ್ಲಿ ರಿಂಕು ಸಿಂಗ್ 55 ಲಕ್ಷ ರುಪಾಯಿಗೆ ಕೆಕೆಆರ್ ತಂಡವು ರೀಟೈನ್ ಮಾಡಿಕೊಂಡಿತ್ತು. ಆದರೆ ಇದೀಗ 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನವೇ ರಿಂಕುಗೆ ಕೆಕೆಆರ್ ಫ್ರಾಂಚೈಸಿ 13 ಕೋಟಿ ರುಪಾಯಿ ನೀಡಿ ರೀಟೈನ್ ಮಾಡಿಕೊಂಡಿದೆ. 

Rinku Singh

ಓಝೋನ್ ಸಿಟಿಯ ಗೋಲ್ಡನ್ ಎಸ್ಟೇಟ್‌ನಲ್ಲಿ 3.5 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರಿಂಕು ಖರೀದಿಸಿದ ಮನೆಯ ಬಗ್ಗೆ ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ರಿಂಕು ಸಿಂಗ್ ಖರೀದಿಸಿದ ಬಂಗಲೆಯಲ್ಲಿ 6 ಬೆಡ್‌ ರೂಮ್‌ಗಳಿದ್ದು, ರೂಪ್‌ ಟಾಪ್ ಬಾರ್‌ನ ವ್ಯವಸ್ಥೆ ಕೂಡಾ ಇದೆ. ಇದಷ್ಟೇ ಅಲ್ಲದೇ ಇದೇ ಬಂಗ್ಲೆಯಲ್ಲಿ ಪ್ರೈವೇಟ್ ಪೂಲ್‌ ವ್ಯವಸ್ಥೆ ಇದೆ. ಇನ್ನು ಯಶ್ ದಯಾಳ್ ಬೌಲಿಂಗ್‌ನಲ್ಲಿ ಸತತ 5 ಸಿಕ್ಸರ್ ಚಚ್ಚಿದ್ದ ಬ್ಯಾಟ್‌ ಅನ್ನು ಫ್ರೇಮ್‌ ಹಾಕಿ ಮನೆಯಲ್ಲಿ ಇಟ್ಟಿದ್ದಾರೆ.

ಸದ್ಯ ರಿಂಕು ಸಿಂಗ್, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದಾರೆ. ಹರಿಣಗಳ ನಾಡಿನಲ್ಲಿ ರಿಂಕು ಅಬ್ಬರಿಸಲು ವಿಫಲವಾಗಿದ್ದಾರೆ. ಆದರೆ ರಿಂಕು ಅವರ ಹಂಚಿಕೊಂಡ ಮನೆಯ ವಿಡಿಯೋ ಇದೀಗ ಅವರ ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 

click me!