15ನೇ ಆವೃತ್ತಿ ಐಪಿಎಲ್‌ನಲ್ಲಿ ಗಮನ ಸೆಳೆದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು..!

Published : May 30, 2022, 11:56 AM IST

ಬೆಂಗಳೂರು: ಬಹುನಿರೀಕ್ಷಿತ 2022ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League 2022) ಟೂರ್ನಿಯ ಫೈನಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ಎದುರು ಗುಜರಾತ್ ಟೈಟಾನ್ಸ್‌ (Gujarat Titans) 7 ವಿಕೆಟ್‌ಗಳ ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೂರ್ನಿಗೆ ಅಧಿಕೃತ ತೆರೆಬಿದ್ದಿದೆ. ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಗುಜರಾತ್ ಟೈಟಾನ್ಸ್ ತಂಡವು ಮೊದಲ ಪ್ರಯತ್ನದಲ್ಲೇ ಚಾಂಪಿಯನ್ ಪಟ್ಟ ಅಲಂಕರಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಈ ಸಂದರ್ಭದಲ್ಲಿ 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗಮನ ಸೆಳೆದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

PREV
18
15ನೇ ಆವೃತ್ತಿ ಐಪಿಎಲ್‌ನಲ್ಲಿ ಗಮನ ಸೆಳೆದ ಇಂಟ್ರೆಸ್ಟಿಂಗ್ ಅಂಕಿ-ಅಂಶಗಳು..!

1. ಐಪಿಎಲ್‌ ಟ್ರೋಫಿ ಗೆದ್ದ 4ನೇ ಭಾರತೀಯ ನಾಯಕ ಹಾರ್ದಿಕ್ ಪಾಂಡ್ಯ

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಜತೆಗೆ ಐಪಿಎಲ್ ಟ್ರೋಫಿ ಗೆದ್ದ ನಾಲ್ಕನೇ ಭಾರತೀಯ ನಾಯಕ ಎನ್ನುವ ಹಿರಿಮೆ ಪಾಂಡ್ಯ ಪಾಲಾಗಿದೆ. ಈ ಮೊದಲು ಮಹೇಂದ್ರ ಸಿಂಗ್ ಧೋನಿ(ಸಿಎಸ್‌ಕೆ), ರೋಹಿತ್ ಶರ್ಮಾ(ಮುಂಬೈ ಇಂಡಿಯನ್ಸ್) ಹಾಗೂ ಗೌತಮ್ ಗಂಭೀರ್(ಕೆಕೆಆರ್) ತಮ್ಮ ತಂಡಗಳನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ.

(Photo Source- iplt20.com)

28
Image credit: PTI

ಚುಟುಕು ಕ್ರಿಕೆಟ್‌ ಟೂರ್ನಿಯಲ್ಲಿ 8 ಶತಕಗಳು ದಾಖಲು

ಹೊಡಿಬಡಿ ಕ್ರಿಕೆಟ್ ಟೂರ್ನಿ ಎನಿಸಿರುವ ಐಪಿಎಲ್ ಟೂರ್ನಿಯಲ್ಲಿ ಈ ಬಾರಿ ಬರೋಬ್ಬರಿ 8 ಶತಕಗಳು ದಾಖಲಾದವು. ಈ ಪೈಕಿ ರಾಜಸ್ಥಾನ ರಾಯಲ್ಸ್‌ನ ಜೋಸ್ ಬಟ್ಲರ್ 4 ಶತಕ ಸಿಡಿಸಿದರೆ, ಲಖನೌ ಸೂಪರ್‌ ಜೈಂಟ್ಸ್‌ ತಂಡದ ನಾಯಕ ಕೆ ಎಲ್ ರಾಹುಲ್ 2 ಹಾಗೂ ಕ್ವಿಂಟನ್ ಡಿ ಕಾಕ್ ಮತ್ತು ರಜತ್ ಪಾಟೀದಾರ್ ತಲಾ ಒಂದೊಂದು ಶತಕ ಸಿಡಿಸಿದ್ದಾರೆ.

38

110 ಅರ್ಧಶತಕಗಳಿಗೆ ಸಾಕ್ಷಿಯಾದ ಈ ಬಾರಿಯ ಐಪಿಎಲ್

15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಶತಕಗಳಂತೆ ಅರ್ಧಶತಕಗಳ ವಿಚಾರದಲ್ಲೂ ಅಭಿಮಾನಿಗಳಿಗೆ ಬ್ಯಾಟರ್‌ಗಳು ಭರ್ಜರಿ ಮನರಂಜನೆ ನೀಡಿದ್ದಾರೆ. ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪ್ರತಿನಿಧಿಸಿದ್ದ ಡೇವಿಡ್ ವಾರ್ನರ್ 5 ಶತಕ ಬಾರಿಸಿ ಗಮನ ಸೆಳೆದರು. ಒಟ್ಟಾರೆ ಈ ಬಾರಿಯ ಟೂರ್ನಿಯಲ್ಲಿ ಬರೋಬ್ಬರಿ 110 ಅರ್ಧಶತಕಗಳು ದಾಖಲಾದವು.

48
Image credit: PTI

2,017 ಬೌಂಡರಿ ಬಾರಿಸಿದ ಬ್ಯಾಟರ್‌ಗಳು:

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಒಟ್ಟು 2017 ಬೌಂಡರಿಗಳು ದಾಖಲಾದವು. ರಾಜಸ್ಥಾನ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಬರೋಬ್ಬರಿ 83 ಬೌಂಡರಿ ಚಚ್ಚುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.
 

58
Image credit: PTI

1,062 ಮುಗಿಲೆತ್ತರದ ಸಿಕ್ಸರ್‌ಗಳಿಗೆ ಸಾಕ್ಷಿಯಾದ ಈ ಬಾರಿಯ ಐಪಿಎಲ್

ಈ ಬಾರಿಯ ಐಪಿಎಲ್ ಟೂರ್ನಿಯು ಬರೋಬ್ಬರಿ 1,062 ಸಿಕ್ಸರ್‌ಗಳಿಗೆ ಸಾಕ್ಷಿಯಾದವು. ಆರೆಂಜ್ ಕ್ಯಾಪ್ ವಿಜೇತ ಜೋಸ್ ಬಟ್ಲರ್ ಬರೋಬ್ಬರಿ 45 ಸಿಕ್ಸರ್ ಸಿಡಿಸುವ ಮೂಲಕ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದರು.

68

ಮೂರು 5+ ವಿಕೆಟ್‌ ಕಬಳಿಸಿದ ಬೌಲರ್‌ಗಳು

ಐಪಿಎಲ್‌ನಲ್ಲಿ ಬ್ಯಾಟರ್‌ಗಳದ್ದೇ ಕಾರುಬಾರು ಎನಿಸಿದ್ದರೂ ಸಹಾ, ಬೌಲರ್‌ಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ಬ್ಯಾಟರ್‌ಗಳನ್ನು ಕಾಡಿದ್ದಾರೆ. ರಾಜಸ್ಥಾನ ರಾಯಲ್ಸ್‌ನ ಯುಜುವೇಂದ್ರ ಚಹಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವನಿಂದು ಹಸರಂಗ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್ ತಲಾ ಒಮ್ಮೆ ಇನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದರು.
 

78
Prasidh Krishna

201 ಡಾಟ್‌ ಬಾಲ್‌ ಎಸೆದ ಕನ್ನಡದ ವೇಗಿ

15ನೇ ಆವೃತ್ತಿಯ ಐಪಿಎಲ್‌ನಲ್ಲಿ ಅತಿಹೆಚ್ಚು ಡಾಟ್‌ಬಾಲ್‌(201) ಎಸೆದ ಬೌಲರ್‌ ಎನ್ನುವ ಕೀರ್ತಿಗೆ ಕರ್ನಾಟಕ ಮೂಲದ ಪ್ರಸಿದ್ಧ್ ಕೃಷ್ಣ ಪಾತ್ರರಾಗಿದ್ದಾರೆ. ಈ ಬಾರಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಪ್ರಸಿದ್ಧ್ ಕೃಷ್ಣ ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಗಮನ ಸೆಳೆದಿದ್ದಾರೆ.
 

88

ವಿನ್ನರ್‌ಗೆ 20 ಕೋಟಿ, ರನ್ನರ್‌-ಅಪ್‌ಗೆ 13 ಕೋಟಿ

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಚಾಂಪಿಯನ್ ಆದ ಗುಜರಾತ್ ಟೈಟಾನ್ಸ್ ತಂಡವು 20 ಕೋಟಿ ರುಪಾಯಿ ನಗದು ಬಹುಮಾನವನ್ನು ಪಡೆದುಕೊಂಡರೆ, ರನ್ನರ್ ಅಪ್‌ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ರಾಜಸ್ಥಾನ ರಾಯಲ್ಸ್ ತಂಡವು 13 ಕೋಟಿ ರುಪಾಯಿ ಪಡೆಯಿತು


(Photo Source- iplt20.com)

Read more Photos on
click me!

Recommended Stories